Puttur Politic: ಅರುಣ್ ಪುತ್ತಿಲ ‘ ಶೋ ಮ್ಯಾನ್ ‘, ಬಿಜೆಪಿಗೆ ಎಂದಾದರೂ ಮತ ನೀಡಿದ್ದಾರಾ? – ಡಾ. ಪ್ರಸಾದ್ ಭಂಡಾರಿ ಹಿಗ್ಗಾಮುಗ್ಗ ತರಾಟೆ, ಏಕಾಂಗಿಯಾಗುತ್ತಿರುವ ಪುತ್ತಿಲ ?!!

Puttur Politic: ಪುತ್ತೂರಿಗೆ ಪುತ್ತಿಲ್ಲ ಎನ್ನುವ ವಾಟ್ಸಪ್ ಗ್ರೂಪುಗಳನ್ನು ರಚಿಸಿ ತಾನು ಮುಂದಿನ ಬಿಜೆಪಿಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಬಂದಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಹಿನ್ನಡೆಯಾಗುತ್ತಿದೆ. ಪುತ್ತೂರು (Puttur Politic) ವಿಧಾನಸಭಾ ಕ್ಷೇತ್ರದ ಹಿರಿಯ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರುಗಳು ಅರುಣ್ ಕುಮಾರ್ ಪುತ್ತಿಲ ಮೇಲೆ ಮುಗಿ ಬೀಳುತ್ತಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ‘ ಓರ್ವ ಶೋ ಮ್ಯಾನ್ ‘, ನಿಮ್ಮದು ಯಾವ ರೀತಿಯ ಹಿಂದುತ್ವ ಎನ್ನುವ ಪ್ರಶ್ನೆ ಅರುಣ್ ಕುಮಾರ್ ಪುತ್ತಿಲ ಅವರ ಮೇಲೆ ಬಂದಿದೆ. ಬಲಿಷ್ಠ ಬಿಜೆಪಿಯನ್ನು ಮತ್ತು ಸಂಘ ಪರಿವಾರವನ್ನು ಎದುರು ಹಾಕಿಕೊಂಡು ಪುತ್ತೂರಿನಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಏಕಾಂಗಿಯಾಗುತ್ತಿದ್ದಾರಾ ? ಅನ್ನುವ ಒಂದು ಬಲವಾದ ವಾತಾವರಣ ಇದೀಗ ಪುತ್ತೂರಿನಲ್ಲಿ ನಿರ್ಮಾಣವಾಗಿದೆ.

‘ಕಳೆದ ಕೆಲವು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೊನೇ ಕ್ಷಣದವರೆಗೂ ಪಾರ್ಟಿ ಕೆಲಸ ಮಾಡಿ ಕೊನೆಗೆ ನಾನು ಮತ ಹಾಕುವುದಿಲ್ಲ ಎಂದು ತಿಪ್ಪರಲಾಗ ಹಾಕುತ್ತಿದ್ದ ಪುತ್ತಿಲ ಬಿಜೆಪಿಗೆ ಮತ ಹಾಕಿದ್ದಾರಾ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಪುತ್ತೂರಿನ ಹಿರಿಯ ವೈದ್ಯ, ಬಿಜೆಪಿ ಪ್ರಮುಖರಾದ ಪ್ರಸಾದ್ ಭಂಡಾರಿ ಪತ್ರಿಕಾ ಗೋಷ್ಠಿಯಲ್ಲಿ ಅರುಣ್ ಪುತ್ತಿಲಗೆ ಪ್ರಶ್ನಿಸಿದ್ದಾರೆ.

ಬಿಜೆಪಿಯಲ್ಲಿ ಟಿಕೆಟ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಈ ಹಿಂದೆ ಕಳೆದಿದ್ದ ಕ್ಷಣಗಳು, ಅವರ ನಡವಳಿಕೆಯ ಬಗ್ಗೆ ಭಂಡಾರಿ ಬಹಿರಂಗವಾಗಿ ಹೇಳಿದರು.

ಹಿಂದುತ್ವ ಹಿಂದುತ್ವ ಎನ್ನುತ್ತಾ ತನ್ನ ಸಹಚರರ ಕೂಟ ಕಟ್ಟಿಕೊಂಡಿರುವ ಪುತ್ತಿಲ ಈ ಮೊದಲು ಬಿಜೆಪಿ ನೀಡಿದ ಪುತ್ತೂರು ಕಾರ್ಯದರ್ಶಿ ಹುದ್ದೆಯನ್ನು ತಿರಸ್ಕರಿಸಿ ನಡೆದಿದ್ದರು. ಹಲವು ಬಾರಿ ಮುಖ್ಯ ವಾಹಿನಿಗೆ ಬರುವಲ್ಲಿ ಹಿಂಜರಿದ ಅವರು ಬಿಜೆಪಿ ಪ್ರಮುಖರ, ಕಚೇರಿಯೊಂದಿಗಿನ ಒಡನಾಟ ಮರೆತಿದ್ದು, ಅಂತಹವರಿಗೆ ಹೈಕಮಾಂಡ್ ಟಿಕೆಟ್ ಹೇಗೆ ನೀಡುತ್ತದೆ ಎಂದು ಪ್ರಶ್ನಿಸಿದರು ?

ಅಲ್ಲದೇ, ಇಂದು ಬೆಳ್ಳಾರೆಯ ನೆಟ್ಟಾರುವಿನಲ್ಲಿ ನಡೆದ ದಿ.ಪ್ರವೀಣ್ ನೆಟ್ಟಾರು ಕನಸಿನ ಮನೆಯ ಗೃಹಪ್ರವೇಶಕ್ಕೆ ಆಗಮಿಸಿದ್ದ ಆರ್.ಎಸ್.ಎಸ್ ಮುಖಂಡ ಪ್ರಭಾಕರ್ ಭಟ್ ಕಲ್ಲಡ್ಕ ಕೂಡಾ ಪುತ್ತಿಲ ವಿರುದ್ಧ ಕಿಡಿಕಾರಿದ್ದು, ಹಿಂದುತ್ವ ಎನ್ನುತ್ತಾ ಹಿಂದೂಗಳನ್ನೇ ದಬ್ಬಾಳಿಕೆ ಮಾಡಿದ್ದ ಪುತ್ತಿಲ ಗೋ ಸಾಗಾಟಕ್ಕೆ ಕೆಲ ಯುವಕರ ತಂಡದೊಂದಿಗೆ ಬ್ರೇಕ್ ಹಾಕಿದ್ದಾರೆ ಎಂದು ನಂಬಿಸಿದ್ದಾರೆ. ನಿಜಕ್ಕೂ ಅಲ್ಲಿ ಬೇರೆ ಹುಡುಗರು ಬ್ರೇಕ್ ಹಾಕಿದ್ದ ವೇಳೆ ಮಧ್ಯೆ ಪ್ರವೇಶಿಸಿ ನಾಯಕತ್ವ ತೋರುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಹಿರಿಯ ನಾಯಕರು ಪುತ್ತಿಲರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಓರ್ವ ನೈಜ ಹಿಂದುತ್ವವಾದಿ, ಹಿಂದೂ ನಾಯಕನಾದರೆ ಶಾಸಕ ಸ್ಥಾನ ಯಾಕೆ ಬಯಸುತ್ತಾರೆ, ಆತನೋರ್ವ ಸೋ ಕಾಲ್ಡ್ ಹಿಂದೂ ನಾಯಕನೇ ಹೊರತು, ಹಿಂದುತ್ವದ ಆಧಾರದಲ್ಲಿ ಬಿಜೆಪಿಗಿಂತ ಮೇಲೆ ಯಾರಿಲ್ಲ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಪುತ್ತೂರಿನಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ತನ್ನ ಕಾರ್ಯಾಚರಣೆ ಬಿಗಿಗೊಳಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎನ್ನುವ ಎರಡೇ ಆಯ್ಕೆಗಳ ನಡುವೆ ಚುನಾವಣೆ ನಡೆಯಲಿದೆ ಎನ್ನಲಾಗಿದೆ. ಪುತ್ತಿಲ ಅವರು ನಾಮಪತ್ರ ಸಲ್ಲಿಸಿದ ಒಂದೇ ವಾರದಲ್ಲಿ ಏಕಾಂಗಿಯಾಗುತ್ತಿದ್ದಾರೆಯಾ ಎನ್ನುವ ಮಾಹಿತಿ ಮತ್ತು ಸಂಶಯ ಲಭ್ಯವಾಗಿದೆ. ಅತ್ತ, ಬಿಜೆಪಿಯಿಂದ ವಿಮುಖರಾಗಿ, ಕಾಂಗ್ರೆಸ್ ಸೇರಿಕೊಂಡ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಚುನಾವಣಾ ಕಣದಲ್ಲಿ ಬಗ್ಗಿಸಿ ಕೂರಿಸಲು ಹೈಕಮಾಂಡ್ ಕಟ್ಟಪ್ಪಣೆ ವಿಧಿಸಿದೆ. ಅದರಂತೆ ಯಡಿಯೂರಪ್ಪರಾಧಿಯಾಗಿ ಹಲವು ಬಿಜೆಪಿ ನಾಯಕರುಗಳು ಫೀಲ್ಡ್ ಗೆ ಇಳಿದು ಕಾರ್ಯಪ್ರವೃತ್ತರಾಗಿದ್ದಾರೆ. ಅದೇ ರೀತಿ, ಪುತ್ತೂರಿನಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯ ಸೀಟನ್ನು ಬಿಟ್ಟು ಕೊಡದಂತೆ ಮೇಲಿನಿಂದ ಆಜ್ಞೆ ಆಗಿದ್ದು ಅದರಂತೆ ಬಿಜೆಪಿ ಕಾರ್ಯೋನ್ಮುಖವಾಗಿದೆ. ನಿಧಾನವಾಗಿ ಪುತ್ತಿಲ ಬೆಂಬಲಿತ ಸದಸ್ಯರ ಸಂಖ್ಯೆ ಕರಗುತ್ತಿದೆ. ಇದು ಬಿಜೆಪಿಗೆ ವರದಾನ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.

 

ಇದನ್ನು ಓದಿ: Shivamogga Politics: ಈಶ್ವರಪ್ಪ – ಅಣ್ಣಾಮಲೈ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ ! 

Leave A Reply

Your email address will not be published.