KSRTC And BMTC Bus Service: BMTC, KSRTC ಬಸ್ ಸೇವೆ 9 ದಿನಗಳ ಕಾಲ ವ್ಯತ್ಯಯ ಸಾಧ್ಯತೆ!

KSRTC And BMTC Bus Service: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಕೆಲಸಕ್ಕೆ ಬಸ್ಸುಗಳ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಸ್ ಸಂಚಾರದಲ್ಲಿ ಕೆಲವು ದಿನಗಳ ಕಾಲ ವ್ಯತ್ಯಯ ಉಂಟಾಗುವ ಸಾದ್ಯತೆ ಇದೆ.

ಮುಖ್ಯವಾಗಿ ಈ ಬಾರಿ ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಮೇ 5 ರಿಂದ ಮೇ 13 ರವರೆಗೂ ಚುನಾವಣಾ ಕೆಲಸಕ್ಕೆ ಬಸ್ಸುಗಳ ಅವಶ್ಯಕತೆ ಇರುತ್ತದೆ. ಹೀಗಾಗಿ ಚುನಾವಣಾ ಅಧಿಕಾರಿಗಳು ಕೆಎಸ್​ಆರ್​ಟಿಸಿ ಹಾಗೂ ಬಿಎಂಎಂಟಿ ಬಸ್ಸುಗಳನ್ನ (KSRTC and BMTC Bus Service ) ಬುಕಿಂಗ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ .

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು ಸಾವಿರ ಬಿಎಂಟಿಸಿ ಬಸ್ಸುಗಳನ್ನ ಬುಕ್ ಮಾಡಿಕೊಳ್ಳಲಾಗಿದೆ. ಜೊತೆಗೆ 800 ಆರ್​ಟಿಒ ವಾಹನಗಳನ್ನ ಸ್ಕ್ರೀನಿಂಗ್ ಹಾಗೂ ಸ್ಕಾಡ್ ಗಳಿಗೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಸರ್ಕಾರಿ ಬಸ್ಸುಗಳನ್ನ ಪೋಲಿಸ್ ಇಲಾಖೆ, ಬಿಬಿಎಂಪಿ, ಆರ್​ಟಿಒ , ಸಾರಿಗೆ ಇಲಾಖೆಗಳ ಸಿಬ್ಬಂದಿಗಳಿಗೆ ಡ್ರಾಪ್- ಪಿಕಪ್ ಹಾಗೂ ಹಲವು ಚುನಾಣಾ ಕೆಲಸಗಳ ನಿಮಿತ್ತ ಬಳಕೆ ಮಾಡಿಕೊಳ್ಳಲಾಗುತ್ತದೆ.

ಈ ನಿಟ್ಟಿನಲ್ಲಿ ಮೇ 5 ರಿಂದ ಮೇ 13 ರವರೆಗೂ ಸಾರ್ವಜನಿಕರಿಗೆ ಬಸ್ಸುಗಳ ಕೊರತೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ಪ್ರಯಾಣಿಸುವ ಮುನ್ನ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Post Office MIS: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ‌‌ ಬಂಪರ್ ಮಾಸಿಕ ಆದಾಯ ಪಡೆಯಿರಿ!

Leave A Reply

Your email address will not be published.