Shahrukh Khan net worth: ಶಾರುಖ್ ಖಾನ್ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ ? ನಟನೊಬ್ಬ ಈ ಪ್ರಮಾಣದ ಸಂಪತ್ತು ಮಾಡಿದ್ದು ಹೇಗೆ ?

Share the Article

Shahrukh Khan net worth: ನಟ ಶಾರುಖ್ ಖಾನ್ (Shahrukh Khan net worth) ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಶಾರುಖ್ ಅಭಿನಯದ ಪಠಾಣ್ (Pathaan) ಸಿನಿಮಾ ಸಾಕಷ್ಟು ವಿವಾದಗಳ ಮಧ್ಯೆ ಹಿಟ್ ಆಗಿ, ಅಧಿಕ ಕಲೆಕ್ಷನ್ (Pathaan collection) ಮಾಡಿದೆ. ಈ ಮಧ್ಯೆ ಶಾರುಖ್ ಆಸ್ತಿ ಎಷ್ಟಿರಬಹುದು ಎಂಬ ವಿಚಾರ ಹರಿದಾಡುತ್ತಿದೆ. ಶಾರುಖ್ ಖಾನ್ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?

ಶಾರುಖ್ ಖಾನ್ ಕೆಲ ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಶಾರುಖ್ ಕೊನೆಯ ಬಾರಿಗೆ ಡಿಸೆಂಬರ್ 2018ರ ಜಿರೋ (zero) ಸಿನಿಮಾದಲ್ಲಿ ಕಾಣಿಸಿಕೊಂಡರು. ನಂತರ ಇದೀಗ ಪಠಾಣ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕೆಲ ವರ್ಷದಿಂದ ಮನೆಯಲ್ಲಿ ಕುಳಿತರೂ, ಬಹಳ ದಿನಗಳಿಂದ ಕಿಂಗ್ ಖಾನ್‌ ಶಾರುಖ್‌ರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಷ್ಟು ಹೆಸರು ಮಾಡಿಲ್ಲದಿದ್ದರೂ ಶಾರುಖ್ ಖಾನ್ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಈ ನಟ ಈ ಪ್ರಮಾಣದ ಸಂಪತ್ತು ಮಾಡಿದ್ದು ಹೇಗೆ? ಆತನ ಆಸ್ತಿ ಮೌಲ್ಯ ಎಷ್ಟು? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಶಾರುಖ್ ಖಾನ್ ಆಗರ್ಭ ಶ್ರೀಮಂತ. ಈತ ವಿಶ್ವದ ಶ್ರೀಮಂತ ನಟರಲ್ಲಿ ಒಬ್ಬರು. ಶಾರುಖ್ ಖಾನ್ ಒಟ್ಟಿ ಆಸ್ತಿ ಮೌಲ್ಯ ₹6289 ಕೋಟಿ ಎಂದು ಮೂಲಗಳು ತಿಳಿಸಿವೆ. ಕೆಕೆಆರ್ (KKR), ರೆಡ್ ಚಿಲ್ಲೀಸ್ (Red chillies) ನಿರ್ಮಾಣ ಸಂಸ್ಥೆ ಸೇರಿದಂತೆ ಸಿನಿಮಾದಿಂದ ಹಣ ಗಳಿಕೆ ಮಾಡುತ್ತಿದ್ದಾರೆ. ಕಿಂಗ್ ಖಾನ್ ಡಜನ್ ಗಟ್ಟಲೆ ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್‌ ಆಗಿದ್ದಾರೆ. ಈ ಮೂಲಕ ಕೋಟಿ ಕೋಟಿಗಟ್ಟಲೆ ಆದಾಯ ಗಳಿಸುತ್ತಾರೆ.

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan). ಈ ಹಿಂದೆ ಡ್ರಗ್ಸ್ (drug) ವಿಚಾರವಾಗಿ ಬಂಧನವಾಗಿದ್ದ ಆರ್ಯನ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿದ್ದಾರೆ. ಸಿನಿಮಾ ಬಗ್ಗೆ ಒಲವಿಲ್ಲದ ಆರ್ಯನ್ ಶಾರುಖ್ ಖಾನ್ ಕಂಪನಿಗಳನ್ನು ನೋಡಿಕೊಳ್ಳುತ್ತಿದ್ದಾರೆ. ಶಾರುಖ್ ಒಡೆತನದ ಐಪಿಎಲ್ (IPL) ಕ್ರಿಕೆಟ್ ತಂಡ ಕೆಕೆಆರ್ ಅನ್ನು ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗೇ ನಿರ್ಮಾಣ ಸಂಸ್ಥೆ ಹಾಗೂ ರೆಡ್‌ ಚಿಲ್ಲೀಸ್ ಹಾಗೂ ವಿಎಫ್‌ಎಕ್ಸ್ ಸಂಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಆರ್ಯನ್ ಖಾನ್ ಶಿಕ್ಷಣ ಮುಗಿಸಿ, ಬ್ಯುಸಿನೆಸ್‌ನಲ್ಲಿ ಆಸಕ್ತಿವಹಿಸುತ್ತಿದ್ದಾರೆ. ಕಳೆದ ವರ್ಷವಷ್ಟೇ ಆರ್ಯನ್ ಖಾನ್ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದರು. ವೋಡ್ಕಾ ಬ್ಯುಸಿನೆಸ್‌ಗೂ ಲೆಟಿ ಬ್ಲಾಗೋವಾ, ಬಂಟಿ ಸಿಂಗ್ ಇಬ್ಬರು ಪಾರ್ಟ್ನರ್‌ಗಳಾಗಿದ್ದಾರೆ. ಇತ್ತೀಚೆಗೆ ಆರ್ಯನ್ ಡಿ’ಯಾವೋಲ್ ಅನ್ನೋ ಹೊಸ ಫ್ಯಾಷನ್ ಬ್ರ್ಯಾಂಡ್ ಅನ್ನು ಲಾಂಚ್ ಮಾಡಿದ್ದಾರೆ.
ಈ ಬ್ರ್ಯಾಂಡ್‌ನ ಜಾಹೀರಾತು ಕೂಡ ರಿಲೀಸ್ ಮಾಡಿದ್ದಾರೆ. ಜಾಹೀರಾತಿನಲ್ಲಿ ಆರ್ಯನ್ ಜೊತೆಗೆ ಶಾರುಖ್ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Celebrities: ಈ ಖ್ಯಾತ ಸೆಲೆಬ್ರಿಟಿಗಳಿಗಿದೆ ಅಭಿಮಾನಿಗಳಿಗೆ ಹಿಡಿಸದ ಕೆಟ್ಟ ಸ್ವಭಾವ!!

Leave A Reply