SSLC ಪರೀಕ್ಷಾ ಫಲಿತಾಂಶ ಪ್ರಕಟಣಾ ಸಂಭಾವ್ಯ ದಿನಾಂಕ ಇಲ್ಲಿದೆ ನೋಡಿ !

SSLC Exam Result : ಎಸೆಸೆಲ್ಸಿ (SSLC) ಪರೀಕ್ಷೆ ಮುಗಿಸಿ ಫಲಿತಾಂಶಕ್ಕೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ.

2022-23ನೇ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯು (SSLC Annual Exam 2023 ) ದಿನಾಂಕ 31-03-2023 ರಿಂದ 15-04-2023ರವರೆಗೆ ಸುಸೂತ್ರವಾಗಿ ಜರುಗಿದ್ದು, ಈ ಬಾರಿ ರಾಜ್ಯದ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಈ ಸಲ ಕೂಡ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್(Grace Marks)ದೊರೆಯಲಿದೆ.

ಎಸೆಸೆಲ್ಸಿ ಫಲಿತಾಂಶ (SSLC exam result) ಯಾವಾಗ ಬರಲಿದೆ ಎಂದು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಈ ಕುರಿತ ಮಾಹಿತಿ ಇಲ್ಲಿದೆ ನೋಡಿ. ಏಪ್ರಿಲ್ 24 ರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಶುರುವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ(KARNATAKA SCHOOL EXAMINATION AND ASSESSMENT BOARD) ಮೇ 15 ರ ಒಳಗೆ ಫಲಿತಾಂಶ ಪ್ರಕಟವಾಗುವ ಕುರಿತು ಮಾಹಿತಿ ನೀಡಿದೆ. ಮೇ 10ರಂದು ಚುನಾವಣೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಮೇ 13ರಂದು ಪ್ರಕಟವಾಗುವುದಾದರು ಕೂಡ ಈ ಚುನಾವಣಾ ಕಾರ್ಯಗಳ ನಡುವೆಯೂ 63,000 ಶಿಕ್ಷಕರನ್ನು ಮೌಲ್ಯಮಾಪನ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ.

ಇದನ್ನೂ ಓದಿ: Aadhaar Linking: ಆಧಾರ್‌ ಲಿಂಕ್‌ ಮಾಡೋದು ಬ್ಯಾಂಕ್‌ ಖಾತೆಗೆ ಕಡ್ಡಾಯವೇ? ಲಿಂಕ್‌ ಆಗಿದೆಯಾ ಎಂಬುವುದನ್ನು ಖಾತ್ರಿ ಮಾಡುವುದು ಹೇಗೆ?

Leave A Reply

Your email address will not be published.