Home Entertainment Malayalam Actor Mamukkoya Death: ಮಲಯಾಳಂ ಚಿತ್ರರಂಗದ ಹಿರಿಯ ನಟ ಮಾಮುಕೋಯ ಇನ್ನಿಲ್ಲ!

Malayalam Actor Mamukkoya Death: ಮಲಯಾಳಂ ಚಿತ್ರರಂಗದ ಹಿರಿಯ ನಟ ಮಾಮುಕೋಯ ಇನ್ನಿಲ್ಲ!

Malayalam Actor Mamukkoya Death
Image source: madyamam.com

Hindu neighbor gifts plot of land

Hindu neighbour gifts land to Muslim journalist

Malayalam Actor Mamukkoya Death: ಮಲಯಾಳಂ ಖ್ಯಾತ ನಟರಾಗಿರುವ ಮಾಮುಕೋಯ(Malayalam Actor Mamukkoya Death) ಕೋಝಿಕೋಡ್ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಬುಧವಾರ(ಇಂದು) ನಿಧನರಾಗಿದ್ದಾರೆ.

ಮಲಯಾಳಂ ನಟ ಮಮುಕ್ಕೋಯ ಅವರು ತಮ್ಮ ತೀಕ್ಷ್ಣವಾದ ಹಾಸ್ಯಪ್ರವೃತ್ತಿ ಮಲಬಾರಿ ಉಪಭಾಷೆಯಲ್ಲಿ ಉಚ್ಚರಿಸುವ ಸಂಭಾಷಣೆಗಳೊಂದಿಗೆ ಚಲನಚಿತ್ರಗಳಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಸದ್ಯ, ಕೇರಳದ ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬುಧವಾರ ಮಲಯಾಳಂ ಖ್ಯಾತ ನಟ ಹಾಸ್ಯ ಕಲಾವಿದರಾದ ಮಮುಕ್ಕೋಯ ನಿಧನರಾಗಿದ್ದಾರೆ.

ಅವರ ಹಾಸ್ಯ ಪ್ರವೃತ್ತಿ, ನಟನೆ ಮೂಲಕ ಚಿರಪರಿಚಿತರಾಗಿದ್ದ ಮಾಮುಕೋಯ (76)ಮಮ್ಮುಟ್ಟಿ, ಜಯರಾಮ್ ಮತ್ತು ಮೋಹನ್‌ಲಾಲ್‌ರಂತಹ ಮೇರು ನಟರ ಜೊತೆಗೆ ತೆರೆ ಹಂಚಿಕೊಂಡು ಪ್ರೇಕ್ಷಕರನ್ನು ನಗೆಗಡಲ್ಲಿ ತೇಲಿಸಿದ್ದಾರೆ.

ಸೋಮವಾರ ಮಲಪ್ಪುರಂನ ವಂಡೂರಿನಲ್ಲಿ ಫುಟ್ಬಾಲ್ ಪಂದ್ಯಾವಳಿಯ ವೇಳೆ ಮಾಮುಕೋಯ ಕುಸಿದು ಬಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಮೆದುಳಿನ ರಕ್ತಸ್ರಾವದ ಜೊತೆಗೆ ಹೃದಯ ಸ್ತಂಭನ ಉಂಟಾಗಿತ್ತು ಎನ್ನಲಾಗಿದೆ. ಹೀಗಾಗಿ, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಲಯಾಳಂ ನಟರಾಗಿರುವ ಮಾಮುಕೋಯ ಅವರು ನಿಧನರಾಗಿದ್ದು, ಇವರ ಸಾವಿನ ಸುದ್ದಿ ತಿಳಿದು ಚಿತ್ರರಂಗದ ಹಿರಿಯ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.