Aadhaar Linking: ಆಧಾರ್ ಲಿಂಕ್ ಮಾಡೋದು ಬ್ಯಾಂಕ್ ಖಾತೆಗೆ ಕಡ್ಡಾಯವೇ? ಲಿಂಕ್ ಆಗಿದೆಯಾ ಎಂಬುವುದನ್ನು ಖಾತ್ರಿ ಮಾಡುವುದು ಹೇಗೆ?
Bank Account and Aadhar: ದೇಶದಲ್ಲಿ ಆಧಾರ್ ಕಾರ್ಡ್ ಅನ್ನು ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತಿದ್ದು, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಆಧಾರ್ ಕಾರ್ಡ್ ಅನ್ನು ಭಾರತದ ನಾಗರಿಕರಿಗೆ ವಿತರಣೆ ಮಾಡುತ್ತದೆ. ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಹೆಚ್ಚಿನ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅತ್ಯವಶ್ಯಕ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿರುವಂತದ್ದೇ! ಆದರೆ , ಈ ನಡುವೆ ಆಧಾರ್ ಯಾವುದಕ್ಕೆಲ್ಲ ಕಡ್ಡಾಯ? ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿದೆಯೇ? ಹೀಗೆ ಅನೇಕ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಇತ್ತೀಚೆಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ (Aadhaar and PAN Linking) ಮಾಡುವುದು ಕಡ್ಡಾಯ ಮಾಡಿದ ಮೇಲಂತೂ ಜನರಿಗೆ ಯಾವುದಕ್ಕೆಲ್ಲ ಆಧಾರ್ ನಂಬರ್ ಲಿಂಕ್ ಮಾಡಬೇಕು ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತಿರಬಹುದು. ಆದರೆ, ಸುಪ್ರೀಂ ಕೋರ್ಟ್ ( Supreme Court)ಆಧಾರ್ ಅನ್ನು ಎಲ್ಲಾ ಸೇವೆಗಳಿಗೂ ಕೂಡ ಕಡ್ಡಾಯಪಡಿಸುವಂತಿಲ್ಲ ಎಂದು ನಿರ್ದೇಶನ ಮಾಡಿದೆ.
ಆಧಾರ್ ಕಾರ್ಡ್ ನಾಗರಿಕರ ಗುರುತಿಸಿ ಚೀಟಿಯಾಗಿರುವ ಜೊತೆಗೆ ಹಲವು ಸೇವೆಗಳಿಗೆ ಅವಶ್ಯಕ ದಾಖಲೆಗಳಲ್ಲಿ ಒಂದು ಎಂಬುದು ಸುಳಲ್ಲ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕಾಗಿ ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಬೇಕೆ ಬೇಕು. ಇದರ ಜೊತೆಗೆ ಆದಾಯ ತೆರಿಗೆ ಪಾವತಿಸುವುದಕ್ಕೆ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬೇಕು. ಬ್ಯಾಂಕ್ ಖಾತೆ (Bank Account) ತೆರೆಯಲು ಆಧಾರ್ ದಾಖಲೆ (Bank Account and Aadhar) ಅವಶ್ಯಕವೇ? ಎಂಬ ಮಾಹಿತಿ ಇಲ್ಲಿದೆ.
ಬ್ಯಾಂಕಿನಲ್ಲಿ ಖಾತೆ ತೆರೆಯಲು ಅಥವಾ ಕೆವೈಸಿ ಅಪ್ಡೇಟ್(KYC Update) ಮಾಡಲು ಆಧಾರ್ ದಾಖಲೆ ಅವಶ್ಯಕ ದಾಖಲೆಗಳಲ್ಲಿ ಒಂದಾದರೂ ಕೂಡ ಆಧಾರ್ ಕಡ್ಡಾಯವಲ್ಲ ಎಂಬುದನ್ನು ಗಮನಿಸಬೇಕು. ಸರ್ಕಾರದ ಸಬ್ಸಿಡಿ ಹಣ ಬರುವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Linking)ಮಾಡಿಕೊಂಡಿದ್ದರೆ ಸಾಕಾಗುತ್ತದೆ. ಯಾವುದೇ ಬ್ಯಾಂಕ್ ಖಾತೆಗೆ ನೀವು ಆಧಾರ್ ಕಾರ್ಡ್ ಸಕ್ಕಿಸಲೆಬೇಕು ಎಂದೇನಿಲ್ಲ. ಇದರ ಬದಲಿಗೆ ವೋಟರ್ ಐಡಿ, ಪಾಸ್ಪೋರ್ಟ್, ಡಿಎಲ್, ರೇಷನ್ ಕಾರ್ಡ್ ದಾಖಲೆಗಳನ್ನು ಕೆವೈಸಿಗೆ ನೀಡಲು ಅವಕಾಶವಿದೆ. ಸರ್ಕಾರದ ಕೆಲ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಅಂದರೆ ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ ಇತ್ಯಾದಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿಲ್ಲ ಎಂಬುದನ್ನು ಗಮನಿಸಬೇಕು.
ಸರ್ಕಾರದಿಂದ ಸಬ್ಸಿಡಿ ಸೌಲಭ್ಯ ಸಿಗುವ ಸ್ಕೀಮ್ಗಳಲ್ಲಿ ಆಧಾರ್ ದಾಖಲೆಯ ಜೊತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಪಿಎಂ ಕಿಸಾನ್ ಯೋಜನೆ(PM Kisan Scheme), ಗ್ಯಾಸ್ ಏಜೆನ್ಸಿ , ಪಿಎಂ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಖಾತೆ ತೆರೆಯುವ ಸಂದರ್ಭ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.
ಹಾಗಿದ್ರೆ, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ? ಎಂಬುದನ್ನು ತಿಳಿಯುವುದು ಹೇಗೆ?
ಸರ್ಕಾರದ ಸಬ್ಸಿಡಿಗಳು ಬರುವ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಕಚೇರಿಗೆ ಹೋಗಿ ವಿಚಾರಿಸಿದರೆ ಸಾಕು! ಇಲ್ಲ ಎಂದಾದರೆ ಆನ್ಲೈನ್ನಲ್ಲಿ ಮೂಲಕ ಕೂಡ ನಿಮ್ಮ ಖಾತೆಗೆ ಆಧಾರ್ ಲಿಂಕ್ ಆಗಿದೆಯೇ ಎಂಬುದನ್ನು ತಿಳಿಯಬಹುದು.
# ಆಧಾರ್ ಸಂಸ್ಥೆಯ ಅಧಿಕೃತ ವೆಬ್ಸೈಟ್ uidai.gov.in ಇಲ್ಲಿಗೆ ಭೇಟಿ ನೀಡಬೇಕು.
# ‘ಮೈ ಆಧಾರ್’ ಟ್ಯಾಬ್ ಕ್ಲಿಕ್ ಮಾಡಿಕೊಂಡು ಡ್ರಾಪ್ ಡೌನ್ ಮೆನುನಿಂದ ‘ಆಧಾರ್ ಸರ್ವಿಸಸ್’ ಆಯ್ಕೆ ಮಾಡಬೇಕು.
# ಆಧಾರ್ ಸರ್ವಿಸಸ್ ಸೆಕ್ಷನ್ ಅಡಿಯಲ್ಲಿ ‘ಚೆಕ್ ಆಧಾರ್ ಅಂಡ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಬೇಕು.
# ಆಗ ಹೊಸ ಪುಟ ತೆರೆದುಕೊಳ್ಳುವುದನ್ನುಗಮನಿಸಬಹುದು. ಇಲ್ಲಿ ಆಧಾರ್ ಸಂಖ್ಯೆ ಹಾಕಿ ಸೆಕ್ಯೂರಿಟಿ ಕೋಡ್ ಅನ್ನು ಟೈಪ್ ಮಾಡಬೇಕು.
# ಓಟಿಪಿ ಸ್ವೀಕರಿಸಿದ ಬಳಿಕ ಅದನ್ನು ನಮೂದಿಸಿ ಲಾಗಿನ್ ಆಗಬೇಕು. ಹೀಗೆ ಮಾಡಿದರೆ ನಿಮ್ಮ ಆಧಾರ್ ಜೊತೆ ಯಾವ ಬ್ಯಾಂಕ್ ಅಕೌಂಟ್ ಲಿಂಕ್ ಆಗಿದೆ ಎನ್ನುವುದು ತಿಳಿಯುತ್ತದೆ.
ಈ ಸರಳ ವಿಧಾನ ಅನುಸರಿಸಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವುದನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ: Sukanya Samriddhi Yojan: 63ಲಕ್ಷ ರೂಪಾಯಿಯನ್ನು ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಪಡೆಯಲು ಈ ನಿಯಮ ಖಂಡಿತ ಪಾಲಿಸಿ!