Home Education Hijab Vs Education: ಹಿಜಾಬ್’ಗಿಂತ ಶಿಕ್ಷಣವೇ ಮುಖ್ಯ ಎಂದ ಯುವತಿ ಈಗ PUC ಟಾಪರ್!

Hijab Vs Education: ಹಿಜಾಬ್’ಗಿಂತ ಶಿಕ್ಷಣವೇ ಮುಖ್ಯ ಎಂದ ಯುವತಿ ಈಗ PUC ಟಾಪರ್!

Hijab Vs Education
Image source: Newindianexpress

Hindu neighbor gifts plot of land

Hindu neighbour gifts land to Muslim journalist

Hijab Vs Education: ಈ ಹಿಂದೆ ಹಿಜಾಬ್ (Hijab) ವಿಚಾರಕ್ಕೆ ಭಾರೀ ದೊಡ್ಡ ಘರ್ಷಣೆ ಉಂಟಾಗಿತ್ತು. ರಾಜ್ಯದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸುವಷ್ಟು ದೊಡ್ಡದಾಗಿ ವಿವಾದ ಬುಗಿಲೆದ್ದಿತ್ತು. ಕಾಲೇಜುಗಳಿಗೆ ಹಿಜಾಬ್ ಧರಿಸಿಬರುವಂತಿರಲಿಲ್ಲ. ಹಿಜಾಬ್ ಧರಿಸದಿದ್ದರೆ ಮುಸ್ಲಿಂ ಸಮುದಾಯ ಎದ್ದುನಿಲ್ಲುತ್ತಿತ್ತು. ಈ ಮಧ್ಯೆ ಮುಸ್ಲಿಂ ಯುವತಿಯರ ಶಿಕ್ಷಣದ ಪರಿಸ್ಥಿತಿ ಕೇಳುವವರಿಲ್ಲ. ಅದೆಷ್ಟೋ ಯುವತಿಯರು ಹಿಜಾಬ್ (Hijab Vs Education) ಕಾರಣ ಶಿಕ್ಷಣದ ಒಲವಿದ್ದರೂ ಮನೆಯಲ್ಲೇ ಕೂರುವಂತಾಯಿತು. ಸದ್ಯ ಹಿಜಾಬ್ ತಾಪ ತಣ್ಣಗಾಗಿದೆ.

ಅದೆಷ್ಟೋ ಸೆಲೆಬ್ರಿಟಿಗಳು (celebrities) ಹಿಜಾಬ್ ತೊರೆದು ತಮ್ಮ ವೃತ್ತಿ ಜೀವನದ ಕಡೆ ಗಮನಹರಿಸಿ, ಶಿಖರಕ್ಕೇರಿದ್ದಾರೆ. ಮುಸ್ಲಿಂ ಸಂಗೀತಗಾರರು (Singers) ದೇಶದ ಜನತೆ ತಿರುಗಿ ನೋಡುವಂತೆ ಮಾಡಿದ್ದಾರೆ. ಅಂತೆಯೇ ಇದೀಗ ಮುಸ್ಲಿಂ ಯುವತಿ ಹಿಜಾಬ್’ಗಿಂತ ಶಿಕ್ಷಣ ಮುಖ್ಯ ಎಂದು ಶಿಕ್ಷಣದ ಕಡೆ ಒಲವು ತೋರಿಸಿ, ಪಿಯುಸಿ ಟಾಪರ್ (Puc topper) ಆಗಿದ್ದಾಳೆ.

ಈಕೆಯ ಹೆಸರು ತಬಸ್ಸುಮ್ ಶೇಕ್ (Tabassum Shake). ಬೆಂಗಳೂರಿನ (Bengaluru) ಎನ್‌ಎಂಕೆಆರ್‌ವಿ ಪಿಯು ಕಾಲೇಜಿನಲ್ಲಿ (NMKRV Puc college) ವ್ಯಾಸಾಂಗ ಮಾಡುತ್ತಿರುವ ಈಕೆ ಕಾಲೇಜು ಹಾಗೂ ಹೆತ್ತವರಿಗೂ ಹೆಮ್ಮೆ ತರುವ ಕಾರ್ಯ ಮಾಡಿದ್ದಾಳೆ. ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 600ಕ್ಕೆ 593 ಅಂಕ ಗಳಿಸಿ ರಾಜ್ಯಕ್ಕೆ ಅಗ್ರಸ್ಥಾನ ಪಡೆದಿದ್ದಾರೆ. ಹಿಜಾಬ್ ಧರಿಸದೆಯೂ ಸಾಧನೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ.

ಹಿಜಾಬ್ ಧರಿಸಿಯೇ ಸಕ್ಸಸ್ ಆಗಬೇಕು ಅಂದುಕೊಂಡೆ, ಆದರೆ ಆಯ್ಕೆ ಒಂದೇ ಇದ್ದದ್ದು ಶಿಕ್ಷಣ ಅಥವಾ ಹಿಜಾಬ್. ಹಿಜಾಬ್ ಧರಿಸಿದರೆ ಶಾಲೆ-ಕಾಲೇಜುಗಳಿಗೆ ಹಿಂದೆಯೂ ಪ್ರವೇಶವಿರಲಿಲ್ಲ, ಈಗಲೂ ಇಲ್ಲ. ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮಾನರು. ಅದಕ್ಕೆಂದೇ ಎಲ್ಲರಿಗೂ ಒಂದೇ ರೀತಿಯ ಸಮವಸ್ತ್ರ ನೀಡುತ್ತಾರೆ. ಅದನ್ನು ಎಲ್ಲಾ ಭಾಷೆಯ ವಿದ್ಯಾರ್ಥಿಗಳು ಪಾಲಿಸುತ್ತಾರೆ. ಸದ್ಯ ಹಿಜಾಬ್ ಇಲ್ಲದೆಯೂ ವಿಜಯ ಸಿಕ್ಕಿದೆ ಎಂದು ತಬಸ್ಸುಮ್ ಹೇಳಿದರು.

“ ನ್ಯಾಯಾಲಯದ ಆದೇಶ ಹೊರಬೀಳುವವರೆಗೂ ತಾನು ಪ್ರತಿದಿನ ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದೆ. ಒಮ್ಮೆ ಆದೇಶ ಹೊರಬಿದ್ದ ನಂತರ ನಾನು ಕಾನೂನನ್ನು ಅನುಸರಿಸಿದೆ. ನಾನು ಹಿಜಾಬ್‌ಗಿಂತ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಹಾಗಾಗಿ ಟಾಪರ್‌ ಆಗಲು ಸಾಧ್ಯವಾಯಿತು. ಶಿಕ್ಷಣ ಪಡೆಯಬೇಕು ಎಂದರೆ ಕೆಲ ತ್ಯಾಗಗಳು ಅನಿವಾರ್ಯ. ವಿದ್ಯಾಭ್ಯಾಸ ಮುಂದುವರಿಸಬೇಕು ಎಂಬ ಬಯಕೆ, ಛಲ ಮತ್ತು ತನ್ನ ಹೆತ್ತವರಿಂದ ಕಲಿತ ಕಾನೂನನ್ನು ಗೌರವಿಸುವ ಪಾಠಗಳು ತರಗತಿಯಲ್ಲಿ ಹಿಜಾಬ್ ಧರಿಸುವುದನ್ನು ನಿಲ್ಲಿಸಲು ಪೇರೇಪಿಸಿತು” ಎಂದು ತಬಸ್ಸುಮ್ ಹೇಳಿದರು.

ಇದನ್ನೂ ಓದಿ: Arecanut: ಅಡಿಕೆ ಬೆಲೆಯಲ್ಲಿ ಏರಿಕೆ ಸಂಭವ: ಎಲ್ಲಿಯತನಕ ಏರುತ್ತೆ, ಯಾವಾಗ ಇಳಿಯುತ್ತೆ, ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!