HD Devegowda: ನನ್ನ ಆತ್ಮಕ್ಕೆ ಶಾಂತಿ ಸಿಗಲು ಆ ವ್ಯಕ್ತಿ ಕಣ್ಣೀರು ಸುರಿಸಬೇಕು – ಕಣ್ಣೀರಿಟ್ಟ ಎಚ್ ಡಿ ದೇವೇಗೌಡ ಹೇಳಿದ್ದು ಯಾರ ಬಗ್ಗೆ ಗೊತ್ತಾ ?

Deve Gowda: ಮತ್ತೆ ದೊಡ್ಡ ಗೌಡರ ಕಣ್ಣಿಂದ ಸಣ್ಣ ಕಣ್ಣೀರ ಹನಿಗಳು ಜಾರಿವೆ. ತಮ್ಮ ಕಣ್ಣೀರಿಗೆ ಕಾರಣ ಆತ. ಆತನ ಕಣ್ಣಿಂದ ಕಣ್ಣೀರು ಸುರಿಯಬೇಕು, ಆಗ ಮಾತ್ರ ನನಗೆ ಸಂತೋಷ ಎಂದಿದ್ದಾರೆ ಎಚ್ ಡಿ ದೇವೇಗೌಡ (Deve Gowda) !

ತುಮಕೂರಿನ ಮಧುಗಿರಿಯ ಕೈವಾರದಲ್ಲಿ ನಡೆದ ಜೆಡಿಎಸ್(JDS) ಸಮಾವೇಶದಲ್ಲಿ ಮಾಜಿ ಪ್ರಧಾನ ಮಂತ್ರಿ ಎಚ್.ಡಿ ದೇವೇಗೌಡರು ಪಕ್ಷದ ಕುರಿತು ಮಾತನಾಡಿದರು. ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ನನ್ನ ಕಣ್ಣೀರನ್ನು ಒರೆಸಿರಿ ಎಂದು ಭಾವನಾತ್ಮಕವಾಗಿ ನುಡಿದರು. ಮಧುಗಿರಿ ಜಿಲ್ಲೆಯಲ್ಲಿ ಜೆಡಿಎಸ್(JDS) ಅಭ್ಯರ್ಥಿಯಾದ ವೀರಭದ್ರಯ್ಯ ಅವರ ಪರವಾಗಿ ಮತಯಾಚನೆ ಮಾಡಲು ಬಂದಿದ್ದ ಎಚ್ ಡಿಡಿ ವೀರಭದ್ರಯ್ಯ ಅವರ ಕುರಿತು ಮಾತನಾಡಿದ್ದರು. ವೀರಭದ್ರಯ್ಯ ಅವರು ಮಧುಗಿರಿ ಜಿಲ್ಲೆಯಾಗಬೇಕು ಎಂದು ಕನಸನ್ನು ಹೊತ್ತಿದ್ದಾರೆ, ಮತ್ತು ಏಕಶಿಲೆಯನ್ನು ಟೂರಿಸ್ಟ್ ಜಾಗ (Turist), ಇಂಡಸ್ಟ್ರಿಯಲ್ ಕ್ಲಸ್ಟರ್ (Industry cluster) ಮಾಡಬೇಕು ಎನ್ನುವುದು ಅವರ ಯೋಚನೆಯಾಗಿದೆ ಎಂದು ವೀರಭದ್ರಯ್ಯ ಅವರ ಕುರಿತು ಮಾತನಾಡಿದರು.

ಸಮಾವೇಶದಲ್ಲಿ ಭಾವನಾತ್ಮಕವಾಗಿ ಮಾತನಾಡಿದ ಗೌಡರು ‘ ನಾನು ಎಂದಿಗೂ ಕೂಡ ಹಿಂದಿನ ಸಂಗತಿಗಳನ್ನು ನೆನಪು ಮಾಡಿಕೊಳ್ಳುವುದಿಲ್ಲ, ಅವುಗಳು ನನಗೆ ಬೇಡವಾಗಿರುವ ವಿಚಾರವಾಗಿದೆ. ನಾನು ಎಂದಿಗೂ ಕೂಡ ಲೋಕಸಭೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಬಯಸಲಿಲ್ಲ. ಆದರೂ ರಾಜಕೀಯ ನನ್ನ ಜೊತೆಯಲ್ಲಿ ಇದ್ದು ಆತನನ್ನು ಸಾಕಿದೆ. ಈ ಇದರ ಬಗ್ಗೆ ನಾನು ಹಿಂದೆ ಕೂಡ ಮಾತನಾಡಿದ್ದೆ, ಈಗಲೂ ಕೂಡ ಇದನ್ನೇ ಹೇಳುತ್ತೇನೆ ‘ ಎಂದು ಹೇಳುತ್ತಾ ಕಾಂಗ್ರೆಸ್ (congress) ಪರೋಕ್ಷವಾಗಿ ಮಾತನಾಡಿದರು.

ಕಾಂಗ್ರೇಸ್(congress) ನ ಕೆಲ ಶಾಸಕರು ಜೆಡಿಎಸ್(JDS) ಗೆ ಕೇವಲ 20 ಸೀಟ್ ಬರುತ್ತೆ ಎಂದಿದ್ದರು. ಇದರ ಬಗ್ಗೆ ಸಮಾವೇಶದಲ್ಲಿ ಬೇಸರವನ್ನು ವ್ಯಕ್ತಪಡಿಸಿದ ಎಚ್ ಡಿಡಿ ಮಧುಗಿರಿ ಕ್ಷೇತ್ರ ಒಂದೆ ಸಾಕು ಇವರ ಮಾತಿಗೆ ಉತ್ತರ ನೀಡಲು ಎಂದು ಪರೋಕ್ಷವಾಗಿ ಕಾಂಗ್ರೆಸ್ (congress) ಅಭ್ಯರ್ಥಿ ಕೆ.ಎನ್‌ ರಾಜಣ್ಣ ವಿರುದ್ಧವಾಗಿ ಗೌಡ್ರು ಮಾತನಾಡಿದರು.

ತುಮಕೂರಿನ ಜನ ನನ್ನನ್ನು ಮುಖ್ಯಮಂತ್ರಿ ಮಾಡಲು 11 ಸ್ಥಾನಗಳಲ್ಲಿ ನನ್ನನ್ನು ಗೆಲ್ಲಿಸ ಕೊಟ್ಟಿದೆ. ನಾನು 2018 ರಲ್ಲಿ ರಾಜಕೀಯಕ್ಕೆ ನಿವೃತ್ತಿ ನೀಡುತ್ತೇನೆ ಎಂದು ತಿಳಿಸಿದ್ದೆ. ಆದರೆ ತುಮಕೂರಿನ ಕೆಲವು ಮುಖಂಡರು ನನ್ನನು ಬಲಿಪಶುಮಾಡಿ ಬಿಟ್ಟರು. ಆದರೆ ಇದೀಗ ನಾವು ವೀರಭದ್ರಯ್ಯ ಅವರನ್ನು 15 ಸಾವಿರ ಮತಗಳ ಅಂತರದಿಂದ ಗೆಲ್ಲಿಸಲೇಬೇಕು ಎಂದು ಕರೆ ನೀಡಿದರು.

ಕುಮಾರಣ್ಣ ಮತ್ತು ನಾವು ನಿಮ್ಮ ಜಿಲ್ಲೆಯ ಬಗ್ಗೆ ಹೆಚ್ಚು ವಿಶ್ವಾಸಗಳನ್ನು ಇಟ್ಟಿದ್ದೇವೆ ಎಂದು ಭಾವನಾತ್ಮಕವಾಗಿ ಮಾತನಾಡಿದ ಎಚ್ ಡಿಡಿ ‘ ನನ್ನನ್ನು ಯಾರು ಪಾರ್ಲಿಮೆಂಟ್ ನಲ್ಲಿ ಕಣ್ಣೀರು ಹಾಕುವಂತೆ ಮಾಡಿದರೋ, ಆ ನಾಯಕನು ಕೂಡ ಕಣ್ಣಲ್ಲಿ ನೀರು ಹಾಕಬೇಕು, ಅವತ್ತೇ ನನ್ನ ಆತ್ಮಕ್ಕೆ ಶಾಂತಿ ಸಿಗುತ್ತೆ ‘ ಎಂದು ಎಂದಿನಂತೆ ಕಣ್ಣೀರು ಹಾಕುತ್ತ ಎದೆ ತಟ್ಟಿಕೊಂಡು ನುಡಿದರು.

ಇದನ್ನೂ ಓದಿ: ಪುತ್ತೂರು ವಿಧಾನಸಭಾ ಕ್ಷೇತ್ರ ಚುನಾವಣೆ : ಅಭ್ಯರ್ಥಿಗಳಾಗಿ ಸುಳ್ಯ ಕ್ಷೇತ್ರದವರೇ ಸಿಂಹಪಾಲು

Leave A Reply

Your email address will not be published.