HD Kumaraswamy : ಈ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ: ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ ಸ್ಟ್ರಾಂಗ್ ಟಾಂಗ್

Share the Article

HD Kumaraswamy-Sumalatha : ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮತ್ತು ಸಂಸದೆ ಸುಮಲತಾ ಅಂಬರೀಶ್ (Sumalatha)​​​​ ನಡುವೆ (HD Kumaraswamy-Sumalatha) ವಾಗ್ದಾಳಿಗಳು ಆಗಾಗ ನಡೆಯುತ್ತಲೇ ಇದ್ದು, ಒಬ್ಬರಿಗೊಬ್ಬರು ತಮ್ಮ ವಿಚಾರಗಳನ್ನು ಜನತೆಯ ಮುಂದೆ ಇಡುತ್ತಿದ್ದಾರೆ.

ಇದೀಗ ಅಂಬರೀಶ್​​ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಗರಂ ಆಗಿದ್ದಾರೆ. ಸರಿ ತಪ್ಪುಗಳನ್ನು ಜನರೇ ನಿರ್ಧಾರ ಮಾಡಲಿ ಎಂದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅವರು , ಕುಮಾರಸ್ವಾಮಿ ಅವರ ಈ ರೀತಿ ಮಾತುಗಳು ತುಂಬಾ ಹೇಸಿಗೆ ಅನಿಸುತ್ತೆ. ಅಂಬರೀಶ್​​ ಅವರಿಗೆ ಗೌರವ ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲಾ. ರಾಜ್ಯದ ಜನತೆ ಅವರಿಗೆ ಗೌರವ ಸ್ಥಾನಮಾನ ಕೊಟ್ಟಿರೋದು. ಎಲ್ಲವೂ ನಾನೇ ನಾನೇ ಮತ್ತು ನನ್ನಿಂದ ಎಂದು ಕುಮಾರಸ್ವಾಮಿ ಹೇಳುವುದು ಅವರಿಗೆ ಶೋಭೆ ತರಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅದಲ್ಲದೆ ತಮ್ಮ ಹೇಳಿಕೆ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ. ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ದ್ವೇಷ ಮಾಡಿದ್ದು ನಾನಾ, ಅವರ ಎಂದು ಜನ ನೋಡಿಕೊಂಡು ಬಂದಿದ್ದಾರೆ ಎಂದರು.

ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್​​ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನ ಗೆದ್ದಿರುವುದು. ಹಿಂದಿನ ರೆಕಾರ್ಡ್ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ.

ಅಂಬರೀಶ್​ರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನ ಜೆಡಿಎಸ್ಸಿಗರು ಒಪ್ಪದೇ ಇದ್ದು ಮೌನವಾಗಿದ್ದರು. ಇನ್ನು 2018ರಲ್ಲಿ ಕುಮಾರಸ್ವಾಮಿ ಸಿಎಂ ಆಗೋಕೆ ಕಾರಣ ಯಾರು ಎಂದು ಪ್ರಶ್ನಿಸಿದರು. ಅಪಮಾನ ಆಗಿದ್ದಕ್ಕೆ ಅಂಬರೀಶ್​ ಅಭಿಮಾನಿಗಳಿಂದ ತಕ್ಕ ಪಾಠ ಮಾಡಲಾಯಿತು.

ಕಾಂಗ್ರೆಸ್​ಗೆ ಅಂಬರೀಶ್​ ಅಭಿಮಾನಿಗಳು ತಕ್ಕ ಪಾಠ ಕಲಿಸಿದ್ದಾರೆ. ಹಾಗಾಗಿಯೇ 2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆದರು. ಆಗ ಮೊದಲನೇ ದಿನವೇ ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಹೋದರು. ಮಂಡ್ಯಕ್ಕೆ ಈ ನಾಯಕರ ಕೊಡುಗೆ ಏನಿದೆ ಎಂದು ತೋರಿಸಲಿ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಒಟ್ಟಿನಲ್ಲಿ ಕುಮಾರ ಸ್ವಾಮಿ ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಜನರ ಮುಂದೆ ಸುಮಲತಾ ತಿಳಿಸಿದ್ದಾರೆ.

ಇದನ್ನೂ ಓದಿ: Intimidation Viral news : ಅಪ್ಪʼಎಣ್ಣೆʼ ಗೆ ಹಣ ನೀಡಿಲ್ಲವೆಂದು ಸಿಟ್ಟುಗೊಂಡ ಮಗರಾಯ! ಕೊನೆಗೆ ಹೈಟೆನ್ಶನ್‌ ವಿದ್ಯುತ್‌ ಕಂಬವೇರಿದ! ಮುಂದೆ…

Leave A Reply