Weather Latest News: ಅಬ್ಬರಿಸಲಿದೆ ಗಾಳಿ, ಮಳೆ ಮುಂದಿನ 24 ಗಂಟೆಗಳಲ್ಲಿ! ಯಾವೆಲ್ಲ ಸ್ಥಳಗಳಲ್ಲಿ? ಇಲ್ಲಿದೆ ರಿಪೋರ್ಟ್‌

IMD Alert : ಒಂದೆಡೆ ಹೊರಗೆ ಕಾಲಿಡಲು ಆಗದಷ್ಟು ರಣಬಿಸಿಲು ಮತ್ತೊಂದೆಡೆ ಸೆಖೆಯ ಝಳದಿಂದ ಜನರು ಹೈರಾಣಾಗಿ ಹೋಗಿದ್ದು, ರೈತರ ಪರಿಸ್ಥಿತಿ ಕೇಳೋದೇ ಬೇಡ! ಒಮ್ಮೆ ಮಳೆ ಬಂದರೆ ಸಾಕಪ್ಪ ಎಂದು ವರುಣನಿಗೆ ಎದುರು ನೋಡುತ್ತಿರುವವರೆ ಹೆಚ್ಚು. ಕರ್ನಾಟಕದ ಕೆಲವೆಡೆ ವರುಣ ದರ್ಶನ ನೀಡಿ ಇಳೆಗೆ ತಂಪೆರೆದು ಸಾಮಾನ್ಯ ಜನತೆಗೆ ಕೊಂಚ ಸಮಾಧಾನ ಕೊಟ್ಟರೆ, ಮತ್ತೆ ಕೆಲವೆಡೆ ಒಮ್ಮೆಯೂ ಮಳೆಯಾಗದೆ ವರುಣನ ಮುನಿಸು ಹಾಗೇ ಮುಂದುವರಿದಿದೆ.

ಈ ನಡುವೆ, ಹವಾಮಾನ ಇಲಾಖೆ(IMD Alert) ಕಳೆದ ಕೆಲವು ದಿನಗಳಿಂದ ರಾಜ್ಯದ ಕೆಲವೆಡೆ ಮಳೆಯಾಗುವ ಸಾಧ್ಯತೆ ಬಗ್ಗೆ ಮಾಹಿತಿ ನೀಡುತ್ತಲೇ ಬರುತ್ತಿದ್ದು, ಸದ್ಯದ ವರದಿಯ ಅನುಸಾರ(Weather Latest News) ರಾಜ್ಯದ್ಯಂತ ಮೋಡ ಮುಸುಕಿದ ವಾತಾವರಣ ಕಂಡುಬರಲಿದ್ದು, ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿರುವ ಜನತೆಗೆ ಕೊಂಚ ಮಟ್ಟಿಗೆ ರಿಲೀಫ್ ಸಿಗುವ ಸಾಧ್ಯತೆ ಇದೆ.ಬೆಂಗಳೂರು, ಚಾಮರಾಜನಗರ, ಕೋಲಾರ ಮತ್ತು ಬೀದರ್‌ನಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ವರದಿಯ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಭಾರತದಲ್ಲೂ ಮಳೆಯಾಗಲಿದೆ. ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಮಳೆಯಾಗುವ(Rain) ನಿರೀಕ್ಷೆಯಿದೆ.

ದೆಹಲಿಯ ಜೊತೆಗೆ ಕೆಲ ಕಡೆಗಳಲ್ಲಿ ಗುಡುಗು ಸಹಿತ ಮೋಡ ಕವಿದ ವಾತಾವರಣ ಕಂಡುಬರಲಿದೆ. ಮುಂದಿನ 4-5 ದಿನಗಳವರೆಗೆ ಬಿಸಿಗಾಳಿ ಕಂಡುಬರುವುದಿಲ್ಲ ಎನ್ನಲಾಗಿದೆ. ಘಾಜಿಯಾಬಾದ್‌ನಲ್ಲಿ ಧೂಳಿನ ಬಿರುಗಾಳಿ ಬೀಸುವ ಸಂಭವದ ಕುರಿತು ಹವಮಾನ ಇಲಾಖೆ ಮಾಹಿತಿ ನೀಡಿದ್ದು, ಕೇರಳ, ತಮಿಳುನಾಡು ಸೇರಿದಂತೆ ಆಂಧ್ರಪ್ರದೇಶದಲ್ಲಿ ಮಳೆಯಾಗುವ ಸಂಭವವಿದೆ. ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಭಾರತದಲ್ಲಿ ಕೂಡ ವರುಣ ದರ್ಶನ ನೀಡುವ ಸಾಧ್ಯತೆಯಿದೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ತುಂತುರು ಮಳೆಯಾಗಲಿದೆ. ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಹರಿಯಾಣ ಮತ್ತು ಛತ್ತೀಸ್‌ಗಢದಲ್ಲಿ ಕೂಡ ಮಳೆಯಾಗುವ ಸಂಭವವಿದೆ. ಇದರ ಜೊತೆಗೆ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನ ಕೆಲವು ಪ್ರದೇಶಗಳಲ್ಲಿ ಕೂಡ ಲಘು ಮಳೆಯಾಗುವ ನಿರೀಕ್ಷೆಯಿದ್ದು, ತೆಲಂಗಾಣದ ಕೆಲವು ಪ್ರದೇಶಗಳಲ್ಲಿಯೂ ಮಳೆಯಾಗುವ ಸಂಭವವಿದೆ.

 

ಇದನ್ನು ಓದಿ: Driving licence: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಬಳಸಿ ನೀವು ಈ ದೇಶಗಳಲ್ಲಿ ಚಾಲನೆ ಮಾಡಬಹುದು!! 

Leave A Reply

Your email address will not be published.