RCB ಗೆಲುವಿಗೆ ಕಾರಣ ಪಂಜುರ್ಲಿ ಗುಳಿಗ ದೈವ: ‘ ಕಾಂತಾರ ʼ ಚಿತ್ರದ ಹಾಡು ಹಾಕುತ್ತಿದ್ದಂತೆ ಫೀಲ್ಡ್ ನಲ್ಲಿ ನಡೆದೇ ಹೋಯ್ತು ಮ್ಯಾಜಿಕ್ !

RCB victory: ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಹಾಗೂ ರಾಜಸ್ಥಾನ್‌ ರಾಯಲ್ಸ್‌ (RR) ನಡುವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ 7 ರನ್‌ಗಳ ರೋಚಕ ಜಯ ಸಾಧಿಸಿ ಗೆದ್ದದ್ದು ಎಲ್ಲಾ ಕ್ರಿಕೆಟ್ ಅಭಿಮಾನಿಗಳಿಗೂ ತಿಳಿದಿದೆ. ಆದರೆ ಆ ಗೆಲುವಿನ (RCB victory) ಹಿಂದೆ ಕಾಂತಾರದ ದೈವಗಳಿಗೆ. ಪಂಜುರ್ಲಿ ಗುಳಿಗ ದೈವಗಳು ಸೇರಿ ಈ ಮ್ಯಾಚ್ ಗೆಲ್ಲಿಸಿದ್ದಾರೆ ಅನ್ನೋದು ಈಗ ನಡೀತಿರೋ ಚರ್ಚೆ.

ಮಿಂಚಿನ ಕೊನೆ ಕ್ಷಣದಲ್ಲಿ ಪಿಂಕ್‌ Vs ಗ್ರೀನ್‌ ಆರ್ಮಿ ತಂಡಗಳು ರೋಚಕ ಕದನ ಸೃಷ್ಟಿ ಮಾಡಿದ್ದವು. ಕ್ರೀಡಾಂಗಣದ ತುಂಬಾ ನೆರೆದಿದ್ದ RCB ಅಭಿಮಾನಿಗಳು ಕೊನೆಯವರೆಗೂ ʻಆರ್‌ಸಿಬಿ, ಆರ್‌ಸಿಬಿ, ಕೊಹ್ಲಿ, ಕೊಹ್ಲಿʼ ಎಂದು ಕೂಗುತ್ತಾ ಆಟಗಾರರನ್ನ ಹುರಿದುಂಬಿಸಿದ್ದು ನಿರಂತರವಾಗಿ ಸಾಗಿತ್ತು.

ಈ ವೇಳೆ ಬಹುತೇಕ ಕನ್ನಡಿಗರಾದ ಆರ್‌ಸಿಬಿ ಅಭಿಮಾನಿಗಳನ್ನ ರಂಜಿಸಲು ಕನ್ನಡ ಗೀತೆಗಳನ್ನು ಕೂಡಾ ಪ್ಲೇ ಮಾಡಲಾಯಿತು. ಮೊತ್ತ ಮೊದಲಿಗೆ ನಟ ಶಿವರಾಜ್‌ ಕುಮಾರ್‌ ಅಭಿನಯದ ಟಗರು (Tagaru) ಚಿತ್ರದ ʻಟಗರು ಬಂತು ಟಗರುʼ ಗೀತೆ ಪ್ರಸಾರ ಮಾಡಲಾಯ್ರು. ನಂತರ ಮ್ಯಾಚ್ ಇನ್ನೇನು ರಾಜಸ್ಥಾನ್ ರಾಯಲ್ಸ್ ಪರ ವಾಲಲಿದೆ ಅನ್ನುವಾಗ ಕಾಂತಾರ ಚಿತ್ರದ ʻವರಾಹ ರೂಪಂʼ ಗೀತೆಯ ಮ್ಯೂಸಿಕ್‌ ಪ್ರಸಾರ ಮಾಡಲಾಯಿತು. ಯಾವಾಗ ಕಾಂತಾರ ಚಿತ್ರದ ಗೀತೆಯ ಮ್ಯೂಸಿಕ್‌ ಪ್ರಸಾರ ಆಯ್ತೋ, ಕ್ರೀಸ್‌ನಲ್ಲಿದ್ದ ರಾಜಸ್ಥಾನ್‌ ತಂಡದ ಆಟಗಾರ ಯಶಸ್ವಿ ಜೈಸ್ವಾಲ್‌ ವಿಕೆಟ್‌ ಎಗರಿ ಬಿದ್ದಿತ್ತು. ಇದು ಆರ್‌ಸಿಬಿಗೆ ಬಹುದೊಡ್ಡ ಬೆನಿಫಿಟ್‌ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಹುಟ್ಟಿಕೊಂಡಿದ್ದು, ಆರ್‌ಸಿಬಿ ಗೆಲುವಿಗೆ ಪಂಜುರ್ಲಿ ಗುಳಿಗ ದೈವವೇ ಕಾರಣ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.

ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಬೇಕಾಗಿ ಬಂದಿತ್ತು. ಮೊದಲು ಬ್ಯಾಟ್ ಬೀಸಿದ
ಆರ್‌ಸಿಬಿ (Royal Challengers Bangalore) 9 ವಿಕೆಟ್‌ ನಷ್ಟಕ್ಕೆ 189 ರನ್‌ ಗಳಿಸಿತ್ತು. 20 ಓವರ್‌ಗಳನ್ನೂ ಅದು ಬಳಸಿಕೊಂಡಿತು. ನಂತ್ರ 190 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಲಷ್ಟೆ ಶಕ್ತವಾಯಿತು. ಇನ್ನೇನು ಗೆಲುವಿನ ಸನಿಹಕ್ಕೆ ರಾಜಸ್ಥಾನ್ ರಾಯಲ್ಸ್ ಬಂದಿತ್ತು. ಆದರೆ ಅಷ್ಟ್ರಲ್ಲಿ ಪಂಜುರ್ಲಿ ಗುಳಿಗ ದೈವಗಳು ಫೀಲ್ಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಗೆಲುವು ನಮ್ಮದೇ ಆಗಿದೆ ! ಇದು ಕಾಂತರಾ ಚಿತ್ರದ ಹಾಡು ಕೇಳಿಬಂದಂತೆ ಮಾಚಿನಲ್ಲಿ ನಡೆದ ಮ್ಯಾಜಿಕ್ ನ ಪರಿಣಾಮವನ್ನು RCB ಅಭಿಮಾನಿಗಳು ವಿಶ್ಲೇಷಿಸುವ ಪರಿ.

https://twitter.com/RCBTweets/status/1578758478553751553/photo/1?ref_src=twsrc%5Etfw%7Ctwcamp%5Etweetembed%7Ctwterm%5E1578789368462184448%7Ctwgr%5E50f313587abf89865aa3445a94c51a9cc5ff29ce%7Ctwcon%5Es3_&ref_url=https%3A%2F%2Fd-28014156633898959415.ampproject.net%2F2304062309000%2Fframe.html 

 

ಇದನ್ನೂ ಓದಿ: D K Shivakumar: ಕನಕಪುರದಲ್ಲಿ ನಾನು ಅಭ್ಯರ್ಥಿಯೇ ಅಲ್ಲ -ಡಿ.ಕೆ.ಶಿವ ಕುಮಾರ್

 

 

Leave A Reply

Your email address will not be published.