Salary Account: ಸ್ಯಾಲರಿ ಅಕೌಂಟ್ ಇದ್ದಲ್ಲಿ ದೊರಕುತ್ತೆ ಬಂಪರ್ ಆಫರ್!
Salary Account : ಭಾರತದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಖಾತೆ ಹೊಂದಬಹುದು? ಯಾವ ಖಾತೆಯಿಂದ ಏನು ಲಾಭ? ಎರಡು ಖಾತೆ ನಡುವಿನ ವ್ಯತ್ಯಾಸ ಏನು? ಅನ್ನೋದನ್ನು ಇಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ.
ಭಾರತದಲ್ಲಿ ಒಬ್ಬ ವ್ಯಕ್ತಿಯು ಎರಡು ರೀತಿಯ ಬ್ಯಾಂಕ್ ಖಾತೆಗಳನ್ನ ತೆರೆಯಬಹುದು. ಒಂದು ಸ್ಯಾಲರಿ ಖಾತೆ (Salary Account) ಮತ್ತು ಇನ್ನೊಂದು ಉಳಿತಾಯ ಖಾತೆ (savings account ) ಆಗಿದೆ.
ಗ್ರಾಹಕರು ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳಬೇಕು. ಕನಿಷ್ಠ ಬ್ಯಾಲೆನ್ಸ್ ಪಾವತಿಸಲು ವಿಫಲವಾದಲ್ಲಿ ದಂಡ ವಿಧಿಸಲಾಗುತ್ತದೆ.
ಆದರೆ ಒಂದು ಸಂಸ್ಥೆಯ ಅಡಿಯಲ್ಲಿ ಉದ್ಯೋಗ ಮಾಡುವಾಗ ಮಾತ್ರ ನಾವು ಸ್ಯಾಲರಿ ಅಕೌಂಟ್ ಅನ್ನು ತೆರೆಯುವ ಅವಕಾಶವಿರುತ್ತದೆ. ಉಳಿತಾಯ ಖಾತೆಯಂತೆ ಈ ವೇತನ ಖಾತೆಯಲ್ಲಿ ನಾವು ಕನಿಷ್ಠ ಠೇವಣಿಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ಇದು ಜಿರೋ ಬ್ಯಾಲೆನ್ಸ್ನ ಖಾತೆಯಾಗಿದೆ.
ಅದಲ್ಲದೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಂಬಳ ಖಾತೆಗಳನ್ನ ತೆರೆಯಲು ಬ್ಯಾಂಕುಗಳೊಂದಿಗೆ ಪಾಲುದಾರಿಕೆಯನ್ನ ಹೊಂದಿವೆ.
ನೀವು ಸಂಬಳದ ಖಾತೆಯನ್ನ ಹೊಂದಿದ್ದಲ್ಲಿ ಈ ಕೆಳಗಿನ ಪ್ರಯೋಜನ ಪಡೆಯಬಹುದು :
ಉಚಿತ ಪಾಸ್ ಬುಕ್, ಚೆಕ್ ಬುಕ್ ಸೌಲಭ್ಯ:
ಸಂಬಳ ಪಡೆಯುವ ಗ್ರಾಹಕರಿಗೆ ಅನೇಕ ಬ್ಯಾಂಕುಗಳು ಉಚಿತ ಪಾಸ್ ಬುಕ್, ಚೆಕ್ ಬುಕ್, ಇ-ಸ್ಟೇಟೆಂಟ್ ಸೌಲಭ್ಯಗಳನ್ನು ಒದಗಿಸುತ್ತವೆ. ಇ ಸ್ಟೇಟ್ಮೆಂಟ್ ಫೆಸಿಲಿಟಿ ಇದರಿಂದಾಗಿ ನೀವು ನಿಮ್ಮ ವೇತನ ಖಾತೆಯ ವಿವರವನ್ನು ಪಡೆಯಲು ಸಾಧ್ಯವಾಗುತ್ತದೆ. ಆನ್ಲೈನ್ ಆಫ್ಲೈನ್ ಎರಡು ವಿಧಾನದಲ್ಲೂ ಖಾತೆ ಪರಿಶೀಲಿಸಬಹುದು. ಇದಕ್ಕಾಗಿ ಯಾವುದೇ ಹೆಚ್ಚುವರಿ ವೆಚ್ಚದ ಅಗತ್ಯವಿಲ್ಲ.
ಉಚಿತ ವಿಮಾ ಸೌಲಭ್ಯ:
ಸಂಬಳ ಪಡೆಯುವ ಗ್ರಾಹಕರಿಗೆ 20 ಲಕ್ಷದವರೆಗೆ ಉಚಿತ ವಿಮೆ ಸೌಲಭ್ಯ. 20ಲಕ್ಷದ ವರೆಗೆ ವೈಯಕ್ತಿಕ ಅಪಘಾತ ವಿಮೆಗೂ ಅರ್ಹತೆ ಪಡೆದಿದೆ.
ಉಚಿತ ಎಟಿಎಂ ವಹಿವಾಟು ಸೌಲಭ್ಯ :
ಸ್ಯಾಲರಿ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ಗಳು ಉಚಿತ ಎಟಿಎಂ ವಹಿವಾಟು ಸೌಲಭ್ಯವನ್ನು ಒದಗಿಸುತ್ತವೆ. ಸಂಬಳ ಪಡೆಯುವ ಗ್ರಾಹಕರಿಗೆ ಎಟಿಎಂ ಬಳಕೆಯ ಮೇಲಿನ ವಾರ್ಷಿಕ ಶುಲ್ಕವನ್ನ ಬ್ಯಾಂಕ್ಗಳು ಮನ್ನಾ ಮಾಡಿವೆ. ಈ ಸೌಲಭ್ಯದ ಅಡಿಯಲ್ಲಿ ನೀವು ಒಂದು ತಿಂಗಳಲ್ಲಿ ಎಟಿಎಂ ನ್ನ ಎಷ್ಟು ಬಾರಿ ಬೇಕಾದರೂ ಬಳಸಬಹುದು.
ಸ್ಯಾಲರಿ ಖಾತೆಯಲ್ಲಿ ವೈಯಕ್ತಿಕ ಸಾಲ ಸೌಲಭ್ಯ:
ಸ್ಯಾಲರಿ ಖಾತೆಯಲ್ಲಿ ವೈಯಕ್ತಿಕ ಸಾಲಕ್ಕಾಗಿ ಸಾಲ ಸೌಲಭ್ಯದ ವಿಶೇಷ ಕೊಡುಗೆಯನ್ನ ನೀಡುತ್ತದೆ. ನಿಮ್ಮ ಸಂಬಳ ಖಾತೆಯಲ್ಲಿ ನೀವು ಪೂರ್ವ- ಅನುಮೋದಿತ ಸಾಲ ಸೌಲಭ್ಯವನ್ನ ಸಹ ಪಡೆಯುತ್ತೀರಿ. ಅದಲ್ಲದೆ ಮನೆ ಮತ್ತು ಕಾರು ಸಾಲಗಳ ಮೇಲೆ ವಿಶೇಷ ಕೊಡುಗೆಗಳೂ ಇವೆ. ಇನ್ನಿತರ ಸಾಲಗಳ ಸೌಲಭ್ಯವಿದೆ.
ಉಚಿತ ಆನ್ಲೈನ್ ವಹಿವಾಟು ನಡೆಸಬಹುದು :
ಸ್ಯಾಲರಿ ಖಾತೆ ಇದ್ದಲ್ಲಿ ಕೆಲವು ಬ್ಯಾಂಕ್ಗಳು ಗ್ರಾಹಕರಿಗೆ ಉಚಿತ ಆನ್ಲೈನ್ ವಹಿವಾಟು ಸೌಲಭ್ಯವನ್ನ ನೀಡುತ್ತವೆ. ಅಂದರೆ NEFT, RTGS ಸೇವೆಗಳು ಉಚಿತ. ಹೆಚ್ಚಿನ ಬ್ಯಾಂಕುಗಳು ತಕ್ಷಣದ ಪಾವತಿ ಸೇವೆಗಳನ್ನ (IMPS) ನೀಡುತ್ತವೆ. ಇದರಿಂದ ಹೆಚ್ಚಿನ ಗಿಫ್ಟ್ ಕಾರ್ಡ್ ಪಡೆಯಬಹುದು.
ಓವರ್ಡ್ರಾಫ್ಟ್ ಸೌಲಭ್ಯ:
ಓವರ್ಡ್ರಾಫ್ಟ್ (OD) ಸೌಲಭ್ಯವೂ ಲಭ್ಯವಿದೆ. ಈ ಸೌಲಭ್ಯ ಕನಿಷ್ಠ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದಿದೆ. ಈ ಸೌಲಭ್ಯವು ನಿಮ್ಮ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ಸಹ ನಿರ್ದಿಷ್ಟ ಮಿತಿಯವರೆಗೆ ಹಣವನ್ನು ಹಿಂಪಡೆಯಲು ನಿಮಗೆ ಅವಕಾಶ ನೀಡುತ್ತದೆ.
ಒಂದು ಸಂಸ್ಥೆಯ ಅಡಿಯಲ್ಲಿ ಉದ್ಯೋಗ ಮಾಡುವ ವ್ಯಕ್ತಿ ಸ್ಯಾಲರಿ ಖಾತೆ ತೆರೆಯುವ ಮೂಲಕ ಈ ಎಲ್ಲಾ ಸೌಲಭ್ಯ ವನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Tirupati : ಮುಂಬರುವ ತಿಂಗಳಲ್ಲಿ ತಿರುಪತಿ ಹೋಗುವವರಿಗೆ TTD ಯಿಂದ ಗುಡ್ ನ್ಯೂಸ್!