Home Karnataka State Politics Updates D K Shivakumar: ಧರ್ಮಸ್ಥಳದಲ್ಲಿ ಡಿಕೆಶಿ ಕುಟುಂಬ ಬಂದಿಳಿದ ಹೆಲಿಕಾಪ್ಟರ್ ಪರಿಶೀಲಿಸಲು ಪೈಲಟ್ ವಿರೋಧ, ಅಲ್ಲೇನಿತ್ತು...

D K Shivakumar: ಧರ್ಮಸ್ಥಳದಲ್ಲಿ ಡಿಕೆಶಿ ಕುಟುಂಬ ಬಂದಿಳಿದ ಹೆಲಿಕಾಪ್ಟರ್ ಪರಿಶೀಲಿಸಲು ಪೈಲಟ್ ವಿರೋಧ, ಅಲ್ಲೇನಿತ್ತು ?!

D K Shivakumar
Image Source: ವಿಜಯಕರ್ನಾಟಕ

Hindu neighbor gifts plot of land

Hindu neighbour gifts land to Muslim journalist

D K Shivakumar: ಚುನಾವಣಾ ಕಾವು ಎಲ್ಲೆಡೆ ಗರಿಗೆದರಿದ್ದು, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಭರ್ಜರಿ ಗೆಲುವು ಸಾಧಿಸುವ ರಣತಂತ್ರ ರೂಪಿಸಿದ್ದಾರೆ. ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅಶೋಕ್ ಅವರಿಗೆ ಕಾಂಗ್ರೆಸ್ ಎರಡು ಕ್ಷೇತ್ರಗಳಿಗೆ ಟಿಕೆಟ್ ನೀಡಿದ್ದು, ಕನಕಪುರದಲ್ಲಿ ಡಿಕೆ. ಶಿವಕುಮಾರ್ ಕಣಕ್ಕೆ ಇಳಿಯಲಿದ್ದಾರೆ.

ರಾಮನಗರದ ಸಂಸದ ಡಿಕೆ ಸುರೇಶ್ (MP DK Suresh) ಕನಕಪುರ ವಿಧಾನಸಭಾ ಕ್ಷೇತ್ರದಿಂದ (Kanakapur Constituency) ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಸಹೋದರ ಡಿಕೆ ಶಿವಕುಮಾರ್ (KPCC President D K Shivakumar) ಅವರ ನಾಮಪತ್ರ ನಿರಾಕರಣೆ ಆಗುವ ಸಂಭವ ಹೆಚ್ಚಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ.ಡಿಕೆ ಶಿವಕುಮಾರ್ ಮೂರು ದಿನಗಳ ಹಿಂದೆ ಮೆಗಾ ರೋಡ್ ಶೋ ಮೂಲಕ ನಾಮಪತ್ರ (Nomination) ಸಲ್ಲಿಸಿದ್ದು, ಕೇವಲ ಆಪ್ತರ ಸಮ್ಮುಖದಲ್ಲಿ ಕನಕಪುರ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಡಿ.ಕೆ ಶಿವಕುಮಾರ್ ಕುಟುಂಬ ಧರ್ಮಸ್ಥಳ ಯಾತ್ರೆ ಮಾಡಿದ್ದು, ಈ ವೇಳೆ ಚುನಾವಣಾಧಿಕಾರಿಗಳು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಚುನಾವಣಾಧಿಕಾರಿಗಳು ಡಿ.ಕೆ ಶಿವಕುಮಾರ್ ಪತ್ನಿ ಉಷಾ ಹಾಗೂ ಕುಟುಂಬ ಧರ್ಮಸ್ಥಳದಲ್ಲಿ ಹೆಲಿಕಾಪ್ಟರ್ ನಿಂದ ಬಂದಿಳಿದ ಸಂದರ್ಭ ಪರಿಶೀಲನೆ ಮಾಡಲು ಮುಂದಾಗಿದ್ದು, ಇದಕ್ಕೆ ಪೈಲಟ್ ಅಸಹಕಾರ ಧೋರಣೆ ತೋರಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಚುನಾವಣಾಧಿಕಾರಿ ಮತ್ತು ಪೈಲಟ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ. ಡಿಕೆಶಿ ಪತ್ನಿ, ಮಗಳು, ಅಳಿಯ ಧರ್ಮಸ್ಥಳಕ್ಕೆ ಪ್ರತ್ಯೇಕ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದಾರೆ ಎಂದು ವರದಿಯಾಗಿದೆ. ಅಧಿಕಾರಿ ಹಾಗೂ ಪೈಲಟ್ ನಡುವೆ ವಾಗ್ವಾದ ನಡೆದ ಬಳಿಕ ಚುನಾವಣಾಧಿಕಾರಿಗಳು ಹೆಲಿಕಾಪ್ಟರ್ ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kodagu Latest News: ಸುಡಾನ್ ಸಂಘರ್ಷದ ಕುರಿತು ಕೊಡಗು ಜಿಲ್ಲೆಯ ಜನತೆಗೆ ಮುಖ್ಯ ಮಾಹಿತಿ ಪ್ರಕಟ!