Khushboo Sundar: ನಟಿ ಖುಷ್ಬೂ ಅವರ ಬೆಡ್‌ರೂಮ್‌ನಲ್ಲಿ ಈ ನಟನ ಫೋಟೋ ಇದೆ! ರೊಮ್ಯಾನ್ಸ್‌ ಮಾಡೋ ಆಸೆ ಇದೆ ಎಂದ ಖುಷ್ಬೂ!!!

Share the Article

Khushboo Sundar: ನಟಿ ಖುಷ್ಬೂ (Khushboo Sundar) ಅವರು ಸಿನಿಮಾದ (Film) ಜೊತೆಗೆ ರಾಜಕೀಯ (Politics) ದಲ್ಲಿ ಕಮಲ ಪಾಳಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕನ್ನಡದ ರಣಧೀರ, ಅಂಜದ ಗಂಡು, ಯುಗಪುರುಷ ಸಿನಿಮಾಗಳ ಜೊತೆಗೆ ಪರಭಾಷೆಗಳಲ್ಲೂ ನಟಿಸಿರುವ ಖುಷ್ಬೂ ಸುಂದರ್ ಮೇರು ನಟರ ಜೊತೆಗೆ ನಟಿಸಿದ್ದರು ಕೂಡ ಅವರಿಗೆ ಒಂದು ವಿಚಾರಕ್ಕೆ ಬೇಸರವಿದೆ ಎಂಬ ಅಚ್ಚರಿಯ ಸಂಗತಿಯನ್ನು ಸಂದರ್ಶನದ ಸಂದರ್ಭ ಬಹಿರಂಗಪಡಿಸಿದ್ದಾರೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಖುಷ್ಬು ಸದ್ಯ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ಖುಷ್ಬೂ ಅವರಿಗೆ ಪಾತ್ರಗಳ ವಿಚಾರದಲ್ಲಿ ಇಂದಿಗೂ ಬೇಸರವಿದೆಯಂತೆ. 80ರ ದಶಕದ ಸಿನಿಮಾಗಳಲ್ಲಿಯೇ ಖುಷ್ಬೂ ನಟಿಸಲು ಶುರು ಮಾಡಿದ್ದರು ಕೂಡ ಅವರ ನೆಚ್ಚಿನ ಮೂರು ಮಂದಿ ಹೀರೊಗಳ ಜೊತೆಗೆ ನಟಿಸಲು ಅವಕಾಶವೇ ಸಿಕ್ಕಿಲ್ಲವಂತೆ. ಈ ವಿಚಾರವನ್ನು ನಟಿ ಸಂದರ್ಶನದ ಸಂದರ್ಭ ತಿಳಿಸಿದ್ದಾರೆ. ಬಿಗ್ ಮೇಲಿನ ಕ್ರೇಜ್ ಬಗ್ಗೆ ಮಾತನಾಡಿರುವ ನಟಿ, ತನ್ನ ಬೆಡ್‌ರೂಮ್‌ನಲ್ಲಿ ಬಿಗ್ ಬಿ ಫೋಟೋ ಅಂಟಿಸಿರುವ ಬಗ್ಗೆಯೂ ಸೀಕ್ರೆಟ್ ಅನ್ನು ಕೂಡ ನಟಿ ಖುಷ್ಬೂ ರಿವೀಲ್ ಮಾಡಿದ್ದು, ಅಮಿತಾಭ್ ಬಚ್ಚನ್(Amitabh Bachchan) ಎಂದರೆ ಎಷ್ಟರಮಟ್ಟಿಗೆ ಕ್ರೇಜ್ ಇದೆ ಎಂಬುದನ್ನು ರಿವಿಲ್ ಮಾಡಿದ್ದಾರೆ.

ಖುಷ್ಬು ಅವರಿಗೆ ಭಾರೀ ಡಿಮ್ಯಾಂಡ್ ಇದ್ದ ಕಾಲದಲ್ಲಿಯೂ ಕೂಡ ಅದೇಕೋ ಏನೋ ಚಿರಂಜೀವಿ ಮತ್ತು ಬಾಲಕೃಷ್ಣ ಅವರ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಒಮ್ಮೆಯೂ ಸಿಕ್ಕಿಲ್ಲ ಎಂದು ಖುಷ್ಬೂ ಮನದ ಮಾತನ್ನು ಬಿಚ್ಚಿಟ್ಟಿದ್ದಾರೆ. ‘ಸ್ಟಾಲಿನ್’ ಚಿತ್ರದಲ್ಲಿ ಚಿರು ಸಹೋದರಿಯ ಪಾತ್ರದಲ್ಲಿ ಖುಷ್ಬು ಬಣ್ಣ ಹಚ್ಚಿದ್ದರು. ಆದರೆ, ಬಾಲಯ್ಯ ಅವರೊಂದಿಗೆ ನಟಿಸುವ ಭಾಗ್ಯವೂ ಸಿಗಲಿಲ್ಲ. ಇವರೊಂದಿಗೆ ಇಂದಿಗೂ ನಟಿಸಲು ಅವಕಾಶ ಸಿಕ್ಕರೆ ಖುಷಿ ಪಡುತ್ತೇನೆ. ಈ ರೀತಿಯ ಅವಕಾಶಕ್ಕಾಗಿ ಇಂದಿಗೂ ಎದುರು ನೋಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇನ್ನು ನಟಿಗೆ ಬಾಲಿವುಡ್(Bollywood) ನಟ ಅಮಿತಾಬ್ ಅಂದ್ರೆ ಭಾರೀ ಇಷ್ಟ. ಅವರ ದೊಡ್ಡ ಅಭಿಮಾನಿಯೆಂದು ಹೇಳಿಕೊಂಡಿದ್ದಾರೆ. ಖುಷ್ಬು ಅವರು ಅಮಿತಾಬ್ ಬಚ್ಚನ್ ಅವರ ಜೊತೆಗೆ ಬಾಲನಟಿಯಾಗಿ ನಟಿಸಿರುವ ಖುಷ್ಬು ಅವರಿಗೆ ಬಿಗ್ ಬಿ ಅವರ ಜೊತೆಗೆ ನಾಯಕಿಯಾಗಿ ನಟಿಸುವ ಅವಕಾಶವೇ ಲಭ್ಯವಾಗಿಲ್ಲ ಎಂಬ ಬೇಜಾರಿದೆಯಂತೆ. ‘ಚೀನಿ ಕಮ್’ ಚಿತ್ರದಲ್ಲಿ ಅಮಿತಾಬ್ ಜೊತೆ ಟಬು ನಟಿಸಿರುವ ವಿಚಾರ ಗೊತ್ತಾಗಿದ್ದೇ ತಡ! ಟಬು ಅಮಿತಾಬ್ ಜೊತೆಗೆ ನಟಿಸಿದ್ದಕ್ಕೆ ಟಬು ಅವ್ರಿಗೆ ಫೋನ್ ಮಾಡಿ ಖುಷ್ಬು ಕ್ಲಾಸ್ ತೆಗೆದುಕೊಂಡಿದ್ದರಂತೆ.ಸದ್ಯ ಗೋಪಿಚಂದ್ ನಟನೆಯ ‘ರಾಮಬಾಣಂ’ ಚಿತ್ರದಲ್ಲಿ ಖುಷ್ಬು ನಟಿಸಿದ್ದಾರೆ.

 

ಇದನ್ನು ಓದಿ: DK Shivakumar : ಡಿ. ಕೆ ಶಿವಕುಮಾರ್ ಗೆ ತಪ್ಪಿದ ಕಂಟಕ! ಕನಕಪುರದಲ್ಲಿ ಆಸ್ಥಾನ ಪಕ್ಕಾ!

1 Comment
  1. 70918248

    References:

    legal steroids for Sale online

Leave A Reply

Your email address will not be published.