

Heart Attack : ಮನುಷ್ಯನ ಪ್ರಾಣ ಪಕ್ಷಿ ಹಾರಿಹೋಗಲು ಒಂದು ಕ್ಷಣ ಸಾಕಾಗುತ್ತದೆ ಅನ್ನೋದು ಸತ್ಯವಾದ ಮಾತು. ಅದಕ್ಕೆ ಉದಾಹರಣೆ ಎಂಬಂತೆ ಆಭರಣ ಅಂಗಡಿಯಲ್ಲಿ ವ್ಯಕ್ತಿಯೊಬ್ಬರು ಕ್ಷಣ ಮಾತ್ರದಲ್ಲಿ ಹೃದಯಾಘಾತಗೊಂಡು (Heart Attack) ಕುಸಿದು ಬಿದ್ದು ಸಾವನ್ನಪ್ಪಿದ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಹೃದಯಾಘಾತಗೊಂಡು ಬೀಳುತ್ತಿರುವ ಅಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಬಿಹಾರದ ಭಾಗಲ್ಪುರದಲ್ಲಿ ಬುಧವಾರ ಘಟನೆ ನಡೆದಿದ್ದು ಜ್ಯುವೆಲರಿ ಅಂಗಡಿಯ ಕೋಲ್ಕತಾ ನಿವಾಸಿ ಪಿಂಟು ಕುಮಾರ್ ಎಂಬವರು ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ಹದಗೆಟ್ಟು ನೋಡ ನೋಡುತ್ತಲೇ ಮರಣ ಹೊಂದಿದ್ದರೆ.
ಸದ್ಯ ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಹೆಚ್ಚಿನ ತನಿಖೆ ವಿಚಾರಣೆಗಳು ನಡೆಯುತ್ತಿವೆ. ತನಿಖೆ ನಂತರ ಹೆಚ್ಚಿನ ವಿವರ ತಿಳಿದುಬರಬೇಕಿದೆ.













