Heat Wave: ಏರಿದ ಉರಿಬಿಸಿಲು, ತಾಪಮಾನ ಹೆಚ್ಚಳ ಹಿನ್ನೆಲೆ ಬದಲಾದ ಶಾಲಾ ಸಮಯ

Heat Wave: ತಾಪಮಾನ ಹೆಚ್ಚಳ; ಏಪ್ರಿಲ್‌ನಲ್ಲಿ ಶಾಲಾ ಸಮಯವನ್ನು ಪರಿಷ್ಕರಿಸಿದ ರಾಜ್ಯಗಳ ಪಟ್ಟಿ
ದೇಶದ ಹೆಚ್ಚಿನ ನಗರಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚು ವರದಿಯಾಗಿದೆ. ಉತ್ತರ ಭಾರತದ (North States) ರಾಜ್ಯಗಳಲ್ಲಿ ಉರಿಬಿಸಿಲಿನ ಧಗೆ(Heat Wave) ಏರುತ್ತಿದ್ದು, ತಾಪಮಾನ ಹೆಚ್ಚಳದ ಹಿನ್ನೆಲೆ ಶಾಲಾ ಸಮಯ ಬದಲಾಯಿಸಲಾಗುತ್ತಿದೆ.

ರಾಜ್ಯಾದ್ಯಂತ ಸೆಖೆಯ ಝಳದಿಂದ ಜನರು ತತ್ತರಿಸಿ ಹೋಗಿದ್ದು, ದೇಶದ ಹೆಚ್ಚಿನ ಕಡೆಗಳಲ್ಲಿ ತಾಪಮಾನವು (Temperature rise) ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ, ಅನೇಕ ರಾಜ್ಯಗಳಲ್ಲಿ ಶಾಲಾ ಸಮಯವನ್ನು (School Timings) ಪರಿಷ್ಕರಣೆ ಮಾಡಲಾಗುತ್ತಿದ್ದು, ಮತ್ತೆ ಕೆಲವೆಡೆ ತಾಪಮಾನ ಹೆಚ್ಚಳ ಕಂಡು ಬೇಸಿಗೆಯ ವಿರಾಮದ (Summer holidays) ರಜೆಯನ್ನು ಹೆಚ್ಚಿಸಲಾಗುತ್ತಿದೆ.

ಬಿಹಾರ್ ರಾಜ್ಯ ಸರ್ಕಾರ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ರಜೆಯನ್ನು ಮುಂದೂಡಲು ಈಗಾಗಲೇ ಸೂಚಿಸಿದೆ. ಮೇ 24 ಅಥವಾ 25ರಿಂದ ಶುರುವಾಗ ಬೇಕಾಗಿದ್ದ ಬೇಸಿಗೆ ರಜೆಯನ್ನು ಉರಿಬಿಸಿಲಿನ ಝಳ ಏರುತ್ತಿರುವ ಹಿನ್ನೆಲೆ ಇನ್ನೂ ಹೆಚ್ಚಿನ ದಿನಗಳ ಕಾಲ ಮುಂದೂಡುವ ಸಾಧ್ಯತೆ ಹೆಚ್ಚಿದೆ.ಪಾಟ್ನಾದಲ್ಲಿ ಬಿಹಾರದ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದ್ದು, ಅಲ್ಲಿನ ಜಿಲ್ಲಾಡಳಿತ ಎಲ್ಲ ವರ್ಗದ ಶೈಕ್ಷಣಿಕ ಚಟುವಟಿಕೆಗಳನ್ನು ಮುಂಜಾನೆ 11.45ರ ನಂತರ ನಡೆಸುವುದಕ್ಕೆ ನಿಷೇಧ ಹೇರಿದೆ.

ಉತ್ತರ ಪ್ರದೇಶ ಸರ್ಕಾರವು 1 ರಿಂದ 8 ನೇ ತರಗತಿಯ ಶಾಲಾ ಸಮಯವನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರವರೆಗೆ ಬದಲಾಯಿಸಲು ಮುಂದಾಗಿದೆ. ಉರಿಬಿಸಿಲಿನ ವಾತಾವರಣದ ಹಿನ್ನೆಲೆ ಗೋವಾ ಮತ್ತು ತೆಲಂಗಾಣವು ಮಾರ್ಚ್‌ನಲ್ಲಿ ಶಾಲೆಗಳ ಸಮಯವನ್ನು ಬದಲಾಯಿಸಿದೆ. ಈ ತಿಂಗಳ ಆರಂಭದಲ್ಲಿ, ಆಂಧ್ರಪ್ರದೇಶವು 1 ರಿಂದ 9 ನೇ ತರಗತಿಗಳಿಗೆ ಅರ್ಧ ದಿನದ ಶಾಲೆಯನ್ನು ಘೋಷಿಸಿತು. ತರಗತಿಗಳನ್ನು ಬೆಳಿಗ್ಗೆ 7:45 ರಿಂದ ಮಧ್ಯಾಹ್ನ 12:30 ರವರೆಗೆ ನಿಗದಿಪಡಿಸಲಾಗಿದೆ.

ಹವಾಮಾನ ಇಲಾಖೆಯ ವರದಿಯ ಅನುಸಾರ,ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 17ರಿಂದ ನಾಲ್ಕು ದಿನಗಳವರೆಗೆ ಬಿಸಿಗಾಳಿ ಸ್ಥಿತಿಯ ಮುಂದುವರಿಯುವ ಕುರಿತು ವರದಿ ಮಾಡಿದೆ. ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಬಿಟ್ಟು ಇನ್ನುಳಿದಂತೆ ರಾಜ್ಯಾದ್ಯಂತ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿತ್ತು. ಮೇಘಾಲಯದಲ್ಲಿ ಕೂಡ ತಾಪಮಾನ ಹೆಚ್ಚಳ ದ ಪರಿಣಾಮ ವೆಸ್ಟ್ ಗರೋ ಹಿಲ್ಸ್ ಜಿಲ್ಲಾಡಳಿತ ಬುಧವಾರದಿಂದ ಮೂರು ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ.

ವಿಶ್ವಭಾರತಿ, ಬಿರ್ಭುಮ್‌ನಲ್ಲಿರುವ ಕೇಂದ್ರೀಯ ಅನುದಾನಿತ ಸಂಸ್ಥೆಯು 8ನೆಯ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದ್ದು, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 6:30 ರಿಂದ 9:30ಯವರೆಗೆ ಶಾಲೆಗಳು ನಡೆಯಲಿವೆ. ಇದರ ಜೊತೆಗೆ ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7 ರಿಂದ 11 ರವರೆಗೆ ನಡೆಯಲಿವೆ.ತ್ರಿಪುರದಲ್ಲಿ ಕೂಡ ಬಿಸಿಗಾಳಿಯ ತಾಪಮಾನ ಹೆಚ್ಚಾಗಿ ಕಂಡು ಬಂದ ಹಿನ್ನೆಲೆ ಏಪ್ರಿಲ್ 18 ರಿಂದ 23 ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ

ಜಾರ್ಖಂಡ್ ನಲ್ಲಿಯೂ ಕೂಡ ಉರಿಬಿಸಿಲಿನ ಧಗೆಗೆ ಜನರು ಹೈರಾಣಾಗಿ ಹೋಗಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಮಂಗಳವಾರ ಏಪ್ರಿಲ್ 19 ರಿಂದ 25 ರ ವರೆಗೂ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಿದೆ. 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಬೆಳಗ್ಗೆ 7ರಿಂದ 11ರವರೆಗೆ ತರಗತಿಗಳು ನಡೆಯಲಿದ್ದು, ಹಿರಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದವರೆಗೆ ತರಗತಿಗಳು ನಡೆಯಲಿದೆ. ಒಡಿಶಾದಲ್ಲಿ ತೀವ್ರ ಬಿಸಿಲಿ ಝಳಕ್ಕೆ 1 ರಿಂದ 12 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಈ ವರ್ಷದ ಏಪ್ರಿಲ್ 21 ರಿಂದ ಬೇಸಿಗೆ ರಜೆಯನ್ನು ನೀಡಲು ಸೂಚಿಸಲಾಗಿದೆ.

 

ಇದನ್ನು ಓದಿ: Marriage viral Video: ‘ನೋಡ್ಲಿಕೆ ಮಾತ್ರ, ಮುಟ್ಲಿಕೆ ಇಲ್ಲ ‘ : ವರನ ಕೈ ತುಟಿ ಸವರಿತು ಎಂದು ವರನಿಗೆ ಮಂಟಪದಲ್ಲಿ ಹೊಡೆದ ವಧು ! 

Leave A Reply

Your email address will not be published.