K Annamalai: ಅಣ್ಣಾಮಲೈ ಹೆಲಿಕಾಪ್ಟರ್ ನಲ್ಲಿ ರಾಶಿ ರಾಶಿ ಹಣ ತಂದ ಆರೋಪ: ಚುನಾವಣಾ ಆಯೋಗ ಅಧಿಕೃತ ಹೇಳಿಕೆ !

K Annamalai: ಕಳೆದೆರಡು ದಿನಗಳ ಹಿಂದೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (K Annamalai) ವಿರುದ್ಧ ಹೆಲಿಕಾಪ್ಟರ್ ನಲ್ಲಿ ರಾಶಿ ರಾಶಿ ಹಣ ತಂದ ಆರೋಪ ಕೇಳಿಬಂದಿದ್ದು, ಇದೀಗ ಈ ಬಗ್ಗೆ ಚುನಾವಣಾ ಆಯೋಗ ಅಧಿಕೃತ ಹೇಳಿಕೆ ನೀಡಿದೆ.

ಅಣ್ಣಾಮಲೈ ಏಪ್ರಿಲ್ 17 ರಂದು ಉಡುಪಿಗೆ ಬಂದಿದ್ದು, ತಾವು ಬಂದಿರುವ ಹೆಲಿಕಾಫ್ಟರ್ ತುಂಬಾ ಹಣ ತುಂಬಿಕೊಂಡು ಬಂದಿದ್ದಾರೆ ಎಂದು ಮಾಜಿ ಸಂಸದ, ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು (Vinay Kumar Sorake) ಆರೋಪಿಸಿದ್ದರು.

ತಮ್ಮ ಬಗ್ಗೆ ಬಂದಿದ್ದ ಆರೋಪದ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಸೊರಕೆಯವರಿಗೆ ತಿರುಗೇಟು ಕೂಡ ನೀಡಿದ್ದರು. ಇದೀಗ
ಈ ಆರೋಪದ ಬಗ್ಗೆ ಚುನಾವಣಾ ಆಯೋಗ (Election Commission) ಹೇಳಿಕೆ ನೀಡಿದ್ದು, ಅಣ್ಣಾಮಲೈಯಿಂದ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಅಣ್ಣಾಮಲೈ ಉಡುಪಿಗೆ (Udupi) ಆಗಮಿಸುವ ವೇಳೆ ಮತ್ತು ಹಿಂತಿರುಗುವ ವೇಳೆ ಫ್ಲೈಯಿಂಗ್ ಸ್ಕ್ವಾಡ್ ತಂಡವು ಒಟ್ಟು 6 ಹಂತಗಳಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದು, ತಪಾಸಣೆ ವೇಳೆ ಬಟ್ಟೆ, ನೀರು ಹೊರತು ಬೇರೇನು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.

ಅಣ್ಣಾಮಲೈ ಉಡುಪಿಯಲ್ಲಿ ತಂಗಿದ್ದ ಹೋಟೆಲ್ ರೂಮ್, ತಾವು ಬಳಸಿದ ವಾಹನ, ತಮ್ಮ ಲಗೇಜ್ ಇವೆಲ್ಲವನ್ನೂ ತಪಾಸಣೆ ನಡೆಸಲಾಯಿತಾದರೂ ಯಾವುದೇ ಹಣ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಯಾವುದೇ ರೀತಿಯ ನೀತಿ ಸಂಹಿತೆಯ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ತಿಳಿಸಿದೆ.

ಈ ಆರೋಪದ ಬಗ್ಗೆ ಮಾಧ್ಯಮ ವರದಿ ತಪ್ಪು ಎಂದು ಸ್ಪಷ್ಟನೆ ನೀಡಿದೆ. ಈ ಸ್ಪಷ್ಟನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಮಾಧ್ಯಮದವರು ಪ್ರಕಟಿಸಬೇಕು ಎಂದೂ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪುತ್ರನ ನಾಮಪತ್ರ ಸಲ್ಲಿಕೆ ವೇಳೆ ನಟಿ ಶೃತಿಯ ತುಂಬು ಕೆನ್ನೆ ಚುವುಟಿದ ಯಡಿಯೂರಪ್ಪ

Leave A Reply

Your email address will not be published.