Gold seized: ತರೀಕೆರೆ ಚೆಕ್ ಪೋಸ್ಟ್ ನಲ್ಲಿ ಸ್ವರ್ಣ ಬೇಟೆ: 40 ಕೆಜಿ ವಶ, ಉಳಿದೆಡೆ ವಶವಾದ ಚಿನ್ನದ ಬೆಲೆ ಎಷ್ಟು ಗೊತ್ತಾ?!

Gold Seized: ಚುನಾವಣೆಯ(Election 2023) ಕಾವು ಎಲ್ಲೆಡೆ ರಂಗೇರಿದ್ದು ರಾಜಕೀಯ ಪಕ್ಷಗಳು ಜನರ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಿಗದಿಯಾಗಿದ್ದು, ಮೇ 13 ರಂದು ರಾಜಕೀಯ ಸಮರದ ಚುನಾವಣೆಯ ತೀರ್ಪು( Election Result) ಹೊರ ಬೀಳಲಿದೆ. ಈ ನಡುವೆ ಚುನಾವಣೆ ನೀತಿ ಸಂಹಿತೆ(Election Code Of conduct) ಜಾರಿಯಲ್ಲಿದ್ದು, ಈ ನಡುವೆ ಜನರ ಮನವೊಲಿಸಲು ಚಿನ್ನ, ಝಣ ಝಣ ಕಾಂಚಾಣ ಅಕ್ರಮವಾಗಿ ಸಾಗಾಟ ನಡೆಯುತ್ತಿದೆ. ಹೀಗಾಗಿ, ಯಾವುದೇ ದಾಖಲೆಯಿಲ್ಲದೆ ಸಾಗಾಟ ಮಾಡುತ್ತಿರುವ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದೀಗ, ಅನೇಕ ಕಡೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ(Money Seized) ಒಡವೆಗಳನ್ನು ಪೊಲೀಸರು(Police) ವಶ ಪಡಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಣ, ವಸ್ತು ಮತ್ತು ಚಿನ್ನ ಸಾಗಾಟದ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದ್ದು, ಹೀಗಾಗಿ ಚೆಕ್ ಪೋಸ್ಟ್ಗಳಲ್ಲಿ (Checkpost)ಭಾರಿ ಪ್ರಮಾಣದ ಹಣ ಮತ್ತು ಚಿನ್ನ ಪತ್ತೆಯಾಗುತ್ತಿದೆ.ಧಾರವಾಡದಲ್ಲಿ ಪುರಾವೆಯಿಲ್ಲದ 7 ಕೆಜಿ 700ಗ್ರಾ ಚಿನ್ನ ವಶ ಪಡಿಸಿಕೊಂಡಿರುವ ಘಟನೆ ನಡೆದಿದೆ. ಧಾರಾವಾಡ ತಾಲೂಕಿನ ತೇಗೂರು ಚೆಕ್ ಪೋಸ್ಟ್ ನಲ್ಲಿ ಕಾರನ್ನು ನಿಲ್ಲಿಸಿ ಪರಿಶೀಲನೆ ನಡೆಸಿದ ಸಂದರ್ಭ ಚಿನ್ನ ಪತ್ತೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿ ಪೋಲಿಸ್ ಚೆಕ್ ಪೋಸ್ಟ್ ನಲ್ಲಿ ಚಿನ್ನಾಭರಣಗಳನ್ನು ಕಂಟೇನರ್ನಲ್ಲಿ ಸಾಗಾಟ ಮಾಡಲಾಗುತ್ತಿದ್ದ ಹಿನ್ನೆಲೆ ಪ್ರಾಥಮಿಕ ತನಿಖೆಯ ವೇಳೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಚಿನ್ನಾಭರಣವೆಂದು ತಿಳಿದುಬಂದಿದೆ. ಕಂಟೇನರ್ ತಡೆದು ತಪಾಸಣೆ ನಡೆಸಿದಾಗ ಬರೋಬ್ಬರಿ 40 ಕೆ.ಜಿ ಚಿನ್ನಾಭರಣ ಪತ್ತೆಯಾಗಿದ್ದು, ಚಿನ್ನಾಭರಣಗಳಿಗೆ ಯಾವುದೇ ಪೂರಕ ದಾಖಲೆಗಳು ಇಲ್ಲದ ಹಿನ್ನೆಲೆಯಲ್ಲಿ ಇದನ್ನು ಪೊಲೀಸರು ಜಪ್ತಿ(Gold Seized) ಮಾಡಿದ್ದಾರೆ.

ಇದರ ಮೌಲ್ಯ 23 ಕೋಟಿ ರೂ. ಎಂದು ಅಂದಾಜಿಸಲಾಗಿದೆ.ಈ ಚೆಕ್ ಪೋಸ್ಟ್ ನಲ್ಲಿ ಈಗಾಗಲೆ ಅನೇಕ ಬಾರಿ ಕೋಟ್ಯಾಂತರ ಮೌಲ್ಯದ ಚಿನ್ನವನ್ನು (Gold)ವಶಪಡಿಸಿ ಕೊಳ್ಳಲಾಗಿದ್ದು, ಇದು ಚುನಾವಣೆಯ ಸಂದರ್ಭ ಹಂಚಲು(Election) ಒಯ್ಯುತ್ತಿದ್ದ ಚಿನ್ನವಲ್ಲ ಎನ್ನಲಾಗಿದ್ದು, ಬದಲಿಗೆ ಚಿನ್ನಾಭರಣ ವ್ಯಾಪಾರಿಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಸದ್ಯ ಈ ಕುರಿತು ತೆರಿಗೆ ಇಲಾಖೆಯ ಅಧಿಕಾರಿಗಳಿಂದಲೂ ಪರಿಶೀಲನಾ ಕಾರ್ಯ ನಡೆಯುತ್ತಿದೆ

ಮಲಬಾರ್, ಜೋಯಾಲುಕಾಸ್, ಕಲ್ಯಾಣ ಜ್ಯುವೆಲರ್ಸ್ಗೆ ನೀಡಲು ಬಿವಿಸಿ ಎಂಬ ಲಾಜಿಸ್ಟಿಕ್ ವಾಹನದಲ್ಲಿ ಚಿನ್ನ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಧಾರವಾಡದ ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಆದಾಯ ಮತ್ತು ತೆರಿಗೆ ಇಲಾಖೆಗೆ(IT Department) ಮಾಹಿತಿ ತಲುಪಿಸಿದ್ದಾರೆ. ಚಿಕ್ಕಮಗಳೂರು ಮತ್ತು ಧಾರವಾಡದ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಪಾಸಣೆ ಮಾಡುವ ಸಂದರ್ಭ ಅಂದಾಜು 28 ಕೋಟಿ ರೂ. ಮೌಲ್ಯದ ಬರೊಬ್ಬರಿ 47 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : BJP star ಪ್ರಚಾರಕರ ಪಟ್ಟಿ ಪ್ರಕಟ, ಕಿಚ್ಚ ಸುದೀಪ್ ಹೆಸರು ಯಾಕೆ ಮಿಸ್ ಆಯ್ತು !?

Leave A Reply

Your email address will not be published.