Karavali Rain Alert: ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ, ಯಲ್ಲೋ ಅಲರ್ಟ್ ಘೋಷಣೆ

Share the Article

Karavali Rain Alert: ಮಂಗಳೂರು: ಕರಾವಳಿ ಭಾಗದಲ್ಲಿ ಉರಿ ಸೆಕೆ ತಡೆಯಲು ಕಷ್ಟವಾಗಿವಷ್ಟು ಅತಿಯಾಗಿದೆ. ದಿನೇ ದಿನೇ ಶೆಕೆ ಏರುತ್ತಿದ್ದು ಇಂದೂ ಅದು ಮುಂದುವರಿದಿದೆ. ಇದೀಗ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಮಳೆಯಾಗುವ ಅಲರ್ಟ್( Karavali Rain Alert) ಘೋಷಿಸಿದೆ.

IMD ಯ ಸೂಚನೆಯಂತೆ ಇನ್ನೆರಡು ದಿನಗಳಲ್ಲಿ ಭಾರೀ ಮಳೆ ಸುರಿಯಲಿದೆ. ಬರುವ ಏಪ್ರಿಲ್ 20 ಮತ್ತು ಏಪ್ರಿಲ್ 21 ರಂದು ಕರಾವಳಿಯಲ್ಲಿ ಯಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಮಳೆಯಾಗುವ ಭರವಸೆ ಮೂಡಿದೆ.

ದ.ಕ. ಜಿಲ್ಲೆಯಲ್ಲಿ ಸೋಮವಾರ ಉರಿ ಬಿಸಿಲು ಮತ್ತು ಸೆಕೆಯಿಂದ ಕೂಡಿತ್ತು. ನಿನ್ನೆಯ ಗರಿಷ್ಠ ತಾಪಮಾನ ಮಧ್ಯಾಹ್ನ 14.30 ರ ಸುಮಾರಿಗೆ 36 ಡಿ.ಸೆ. ದಾಖಲಾಗಿತ್ತು. ಕನಿಷ್ಟ ತಾಪಮಾನ ಮಧ್ಯರಾತ್ರಿ 23.30 ಕ್ಕೆ ದಾಖಲಾಗಿದ್ದು, ಅದು 31 ಡಿ.ಸೆ. ಎಂದು ದಾಖಲಾಗಿದೆ. ನಿನ್ನೆ ನೀರಾವಿಯ ಸಾಂದ್ರತೆ ( ಹ್ಯೂಮಿಡಿಟಿ) 77 % ದಾಖಲಾಗಿತ್ತು. ಇವತ್ತು ಅದು 82 % ಗೆ ಏರುವ ಸಂಭವ ಇದೆ. ಆದುದರಿಂದ ಮತ್ತಷ್ಟು ವಾತಾವರಣದಲ್ಲಿ ಉರಿ ಸೆಕೆಯ ಅನುಭವ ಆಗಲಿದೆ.

ಇದನ್ನೂ ಓದಿ : ಬಿ.ಎಲ್ ಸಂತೋಷ್ ಷಡ್ಯಂತ್ರದಿಂದ ಟಿಕೆಟ್ ಕೈತಪ್ಪಿದ್ದು- ಶೆಟ್ಟರ್ ನೇರ ಆರೋಪ

Leave A Reply