Home Breaking Entertainment News Kannada Actress Sapthami Gowda: ಡಾಲಿ ಹೆಸರನ್ನು ಕಾಂತಾರ ನಟಿ ಸೇವ್‌ ಮಾಡಿದ್ಹೇಗೆ?

Actress Sapthami Gowda: ಡಾಲಿ ಹೆಸರನ್ನು ಕಾಂತಾರ ನಟಿ ಸೇವ್‌ ಮಾಡಿದ್ಹೇಗೆ?

Actress Sapthami Gowda

Hindu neighbor gifts plot of land

Hindu neighbour gifts land to Muslim journalist

Actress Sapthami Gowda: ‘ವೀಕೆಂಡ್ ವಿಥ್ ರಮೇಶ್ ಸೀಸನ್ 5’ ಶೋಗೆ (Weekend with Ramesh season 5) ಈ ವಾರ ಸ್ಯಾಂಡಲ್‍ವುಡ್‍ನ ನಟ ರಾಕ್ಷಸ ಡಾಲಿ ಧನಂಜಯ್ (Actor Dhananjay) ಅತಿಥಿಯಾಗಿ ಬಂದಿದ್ದು, ತಮ್ಮ ಜೀವನದ ಸಿಹಿ- ಕಹಿ ಘಟನೆಗಳನ್ನು ರಮೇಶ್ (Ramesh aravind) ಹಾಗೂ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.

ನಟ ಧನಂಜಯ್ ಜೀವನ ಚರಿತ್ರೆ ಎಂತಹವರಿಗೂ ಮನಮುಟ್ಟುವಂತಿತ್ತು‌, ಹಾಗೇ ಛಲ ತುಂಬುವಂತಹ ಜೀವನಕಥೆಯಾಗಿತ್ತು. ಸಿನಿಮಾಗಾಗಿ ನಡೆಸಿದ ಪರದಾಟ, ಹಣಕ್ಕಾಗಿ ಪಟ್ಟ ಕಷ್ಟ, ಅದೆಷ್ಟೋ ಬಾಯಿಗಳಿಂದ ಕೇಳಿದ ಹೀನಾಯ ಪದ, ಒಬ್ಬ ವ್ಯಕ್ತಿಯನ್ನು ನಡೆಸಿಕೊಂಡ ರೀತಿ ಎಲ್ಲವನ್ನೂ ಕಾರ್ಯಕ್ರಮದಲ್ಲಿ (Weekend With Ramesh) ಹಂಚಿಕೊಂಡಿದ್ದಾರೆ. ಹಾಗೇ ಭಾವುಕರಾಗಿದ್ದಾರೆ.

ಶೋ ಗೆ ಹಲವು ಗೆಳೆಯರು, ಗೆಳತಿಯರು ಆಗಮಿಸಿದ್ದರು. ವಿಟಿಯಲ್ಲೂ ಶಿವರಾಜ್ ಕುಮಾರ್ (Shiva Rajkumar) , ಶ್ರುತಿ ಹರಿಹರನ್ (Sruthi Hariharan), ರಂಗಾಯಣ ರಘು (Rangayana Raghu) ಸೇರಿದಂತೆ ಹಲವರು ಡಾಲಿಯ ಬಗ್ಗೆ ಹಾಡಿ ಕೊಂಡಾಡಿದ್ದಾರೆ. ಡಾಲಿ ತಮ್ಮ ಜೀವನದ ಬಗ್ಗೆ ಈ ವೇಳೆ ಮಾತನಾಡಿದ್ದು, ನಟಿಸಿದ ಸಿನಿಮಾಗಳ ಬಗ್ಗೆಯೂ ನೆನೆದಿದ್ದಾರೆ. ಈ ಮಧ್ಯೆ ಶೋ ಗೆ ಕಾಂತಾರ ಚೆಲುವೆ ಸಪ್ತಮಿ ಗೌಡ (actress Sapthami Gowda) ಎಂಟ್ರಿ ಕೊಟ್ಟಿದ್ದು, ಡಾಲಿಯ ಬಗ್ಗೆ ಹಲವು ವಿಚಾರ ಹಂಚಿಕೊಂಡಿದ್ದಾರೆ.

ಪಾಪ್​ಕಾರ್ನ್ ಮಂಕಿ ಟೈಗರ್ (Popcorn Monkey Tiger) ಸಿನಿಮಾದಲ್ಲಿ ಸಪ್ತಮಿ ಹಾಗೂ ಡಾಲಿ ಧನಂಜಯ್ ಜೊತೆಯಾಗಿ ನಟಿಸಿದ್ದರು. ಆಗಿನಿಂದಲೂ ಸಪ್ತಮಿ ಡಾಲಿಯ ಗೆಳತಿಯಾಗಿದ್ದಾರೆ.
ನಟಿಯ ಬಗ್ಗೆ ಮಾತನಾಡಿದ ಧನಂಜಯ್ , ಸಪ್ತಮಿಯನ್ನು ಈ ವೇದಿಕೆಯ ಮೇಲೆ ನಾನು ಊಹಿಸಿರಲಿಲ್ಲ. ಅವಳು ಬಂದಿರುವುದು ಆಶ್ಚರ್ಯವಾಯಿತು ಎಂದು ಹೇಳಿ ಕಾಂತಾರದ (kantara) ಸಕ್ಸಸ್ ಬಗ್ಗೆ ಕೊಂಡಾಡಿದರು.

ಸಪ್ತಮಿ ಗೌಡ ಕಾಲೇಜಿನಲ್ಲಿ ಓದುತ್ತಿದ್ದಾಗ ಇವೆಂಟ್ ಒಂದಕ್ಕೆ ಡಾಲಿ ಧನಂಜಯ್ ಅವರು ಅತಿಥಿಯಾಗಿ ಅಲ್ಲಿಗೆ ಹೋಗಿದ್ದರಂತೆ . ಅಲ್ಲಿಗೆ ಹೋಗಿ ನೋಡಿದರೆ, ಒಬ್ಬಳು ಸಪ್ತಮಿ ಖಡಕ್ ಆಗಿ ಹುಡುಗರಿಗೆಲ್ಲಾ ಆವಾಜ್ ಹಾಕುತ್ತಾ, ಕೆಲಸ ಮಾಡಲು ಹೇಳುತ್ತಿದ್ದಳು ಎಂದು ಹೇಳಿದರು. ಅದಾಗಿ ಕೆಲ ಸಮಯದ ಬಳಿಕ ಸೂರಿ ಅವರು ಸಪ್ತಮಿ ಗೌಡ ಅವರನ್ನು ಪಾಪ್​ ಕಾರ್ನ್ ಮಂಕಿ ಟೈಗರ್ ಸಿನಿಮಾಕ್ಕೆ ನಾಯಕಿಯಾಗಿ ಹಾಕಿಕೊಂಡಾಗ, ಧನಂಜಯ್​ಗೆ ಆ ಪಾತ್ರಕ್ಕೆ ಸರಿಯಾದ ಆಯ್ಕೆಯೇ ಇದು ಎನಿಸಿತ್ತಂತೆ. ಡಾಲಿ ಹೀಗೇ ಹೇಳುತ್ತಿದ್ದಂತೆ ಶೋ ನಗೆಗಡಲಿನಲ್ಲಿ ಮುಳುಗಿತು.

ಇನ್ನು ಡಾಲಿ ಬಗ್ಗೆ ಸಪ್ತಮಿ ಮಾತನಾಡಿದ್ದು, ಡಾಲಿ ಸೈಲೆಂಟ್ ಅಲ್ಲ ವೈಲೆಂಟ್ ಆಗಿದ್ದಾರೆ ಎಂದು ಹೇಳಿದರು. ಅಲ್ಲದೆ, ನಟಿ ತಮ್ಮ ಮೊಬೈಲ್​ನಲ್ಲಿ ಡಾಲಿ ಹೆಸರನ್ನು ಹೇಗೆ ಸೇವ್ ಮಾಡಿದ್ದಾರೆ ಗೊತ್ತಾ?
ಡಾಲಿ ಹೆಸರನ್ನು ‘ದಕ್ಷಿಣಪಥೇಶ್ವರ’ ಎಂದು ಸೇವ್ ಮಾಡಿಕೊಂಡಿದ್ದಾರಂತೆ. ಹಾಗಂತ ನಟಿ ಹೇಳಿದರು. ಅಲ್ಲದೆ, ಈವರೆಗೂ ನಟಿಯ ಮೊಬೈಲ್ ನಲ್ಲಿ ಡಾಲಿ ಹೆಸರು ಹಾಗೇ ಇದೆಯಂತೆ. ಈಗ ಅದಕ್ಕೆ ತಕ್ಕಂತೆ ಇಡೀ ದಕ್ಷಿಣ ಭಾರತವನ್ನು ಆಳುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ ಎಂದೂ ನಟಿ ಹೇಳಿದರು.

ಒಂದು ಬಾರಿ ಡಾಲಿಯ ಜೊತೆಗೆ ಲಿಫ್ಟ್​ನಲ್ಲಿ ಹೋಗುತ್ತಿದ್ದಾಗ, ಅಭಿಮಾನಿಗಳೆಲ್ಲಾ ಡಾಲಿ ಎಂದು ಕೂಗುತ್ತಾ ಸೆಲ್ಫಿಗಾಗಿ ಮುಗಿಬಿದ್ದಿದ್ದು, ಈ ವೇಳೆ ಡಾಲಿ ಪಕ್ಕದಲ್ಲೇ ಇದ್ದ ಸಪ್ತಮಿಯನ್ನು ತೋರಿಸಿ, ಅಲ್ಲಿ ನೋಡಿ ನಟಿ ಸಪ್ತಮಿಯವರೂ ಇದ್ದಾರೆ ಎಂದು ಹೇಳಿದರು ಎಂದು ಮತ್ತೊಂದು ಸಿಹಿ ಘಟನೆಯನ್ನು ನಟಿ ಹಂಚಿಕೊಂಡರು. ಅಲ್ಲದೆ, ಡಾಲಿ ತಾವೊಬ್ಬರೇ ಬೆಳೆದರೆ ಅವರಿಗೆ ಖುಷಿ ಆಗುವುದಿಲ್ಲ ತಮ್ಮೊಟ್ಟಿಗೆ ಎಲ್ಲರೂ ಬೆಳೆಯಬೇಕು ಎಂಬುದು ಅವರ ಆಸೆ ಅವರ ಡಾಲಿ ಪಿಕ್ಚರ್ಸ್ ಧ್ಯೇಯ ಸಹ ಅದೇ ಎಂದು ಸಪ್ತಮಿ ಗೌಡ ನೆನಪುಗಳ ಮರುಕಳಿಸಿ, ಎಲ್ಲರಿಗೂ ಹೇಳಿದರು. ಒಟ್ಟಾರೆ ಡಾಲಿಯ ಜೀವನ ಚರಿತ್ರೆ, ಕುಗ್ಗಿರುವವರಿಗೆ ಮೇಲೆ ಬರಲು ಏಣಿ ಇದ್ದಂತೆ ಎಂದು ಹೇಳಿದರೆ ತಪ್ಪಾಗದು.