IRCTC New Rules: ಭಾರತೀಯ ರೈಲ್ವೇ ಹೊರಡಿಸಿದೆ ಹೊಸ ನಿಯಮ ; ಇನ್ಮುಂದೆ ಲೋವರ್ ಬರ್ತ್ ಇವರಿಗೆ ಮಾತ್ರ!!
IRCTC New Rules: ರೈಲಿನಲ್ಲಿ (train) ಪ್ರಯಾಣಿಸಲು ಹೆಚ್ಚಿನ ಜನರ ಆದ್ಯತೆಯ ಆಸನವೆಂದರೆ ಲೋವರ್ ಬರ್ತ್ ಅಥವಾ ಸೈಡ್ ಲೋವರ್ ಬರ್ತ್. ಯಾಕಂದ್ರೆ ಇಲ್ಲಿ ಆರಾಮವಾಗಿ ಕುಳಿತುಕೊಳ್ಳಬಹುದು, ಮಲಗಬಹುದು. ಯಾವುದೇ ಕಿರಿಕಿರಿಯಿಲ್ಲದೆ, ಆರಾಮದಾಯಕವಾಗಿ ಬಹುದೂರ ಪ್ರಯಾಣಿಸಬಹುದು. ಈವರೆಗೂ ಲೋವರ್ ಬರ್ತ್ ಬುಕ್ ಮಾಡುವವರಿಗೆ ಆ ಸೀಟುಗಳು ಸಿಗುತ್ತಿತ್ತು. ಆದರೆ, ಇನ್ನುಮುಂದೆ
ಲೋವರ್ ಬರ್ತ್ ಎಲ್ಲರಿಗೂ ಸಿಗಲ್ಲ.
ಇದೀಗ ಭಾರತೀಯ ರೈಲ್ವೇ (Indian Railway) ಹೊಸ ನಿಯಮ ಹೊರಡಿಸಿದ್ದು (IRCTC New Rules), ನಿಯಮದ ಪ್ರಕಾರ, ರೈಲಿನ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು, ರೈಲಿನ ಲೋವರ್ ಬರ್ತ್‌ನ್ನು ವಿಶೇಷ ಚೇತನರಿಗಾಗಿ ಮೀಸಲಿಡಲಾಗಿದೆ.
ರೈಲ್ವೆ ಮಂಡಳಿಯ ಆದೇಶದ ಪ್ರಕಾರ, ಸ್ಲೀಪರ್ ಕ್ಲಾಸ್‌ನಲ್ಲಿ ನಾಲ್ಕು ಸೀಟುಗಳು, 2 ಕೆಳಭಾಗದ 2 ಮಧ್ಯದ ಸೀಟುಗಳು, ಥರ್ಡ್ ಎಸಿಯಲ್ಲಿ ಎರಡು ಸೀಟುಗಳು, ಎಸಿ 3 ಎಕಾನಮಿಯಲ್ಲಿ ಎರಡು ಸೀಟುಗಳನ್ನು ಅಂಗವಿಕಲರಿಗೆ ಮೀಸಲಿಡಲಾಗಿದೆ. ಹಾಗೇ ಅಂಗವಿಕಲರೊಂದಿಗೆ ಪ್ರಯಾಣಿಸುವ (Travel) ಜನರು ಕೂಡ ಈ ಸೀಟಿನಲ್ಲಿ ಕುಳಿತುಕೊಳ್ಳಬಹುದು.
ಗರೀಬ್ ರಥ ರೈಲಿನಲ್ಲಿ 2 ಕೆಳಗಿನ ಸೀಟುಗಳು ಮತ್ತು 2 ಮೇಲಿನ ಸೀಟುಗಳನ್ನು ಅಂಗವಿಕಲರಿಗಾಗಿ ಮೀಸಲಿಡಲಾಗಿದೆ. ಈ ಆಸನಗಳಿಗೆ ಅವರು ಸಂಪೂರ್ಣ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ರೈಲಿನಲ್ಲಿ 45 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಗರ್ಭಿಣಿಯರಿಗೆ, ಸ್ಲೀಪರ್ ಕ್ಲಾಸ್‌ನಲ್ಲಿ 6ರಿಂದ 7 ಲೋವರ್ ಬರ್ತ್‌ಗಳು, ಪ್ರತಿ ಮೂರನೇ ಎಸಿ ಕೋಚ್‌ನಲ್ಲಿ 4-5 ಲೋವರ್ ಬರ್ತ್‌ಗಳು, ಪ್ರತಿ ಸೆಕೆಂಡ್ ಎಸಿ ಕೋಚ್‌ನಲ್ಲಿ 3-4 ಲೋವರ್ ಬರ್ತ್‌ಗಳನ್ನು ಮೀಸಲಿಡಲಾಗಿದೆ. ಅವರು ಸೀಟ್ ಬುಕ್ ಮಾಡುವಾಗ ಯಾವುದೇ ಪ್ರತ್ಯೇಕ ಆಯ್ಕೆಯನ್ನು ನೀಡದಿದ್ದರೂ ಸೀಟು ಸಿಗುತ್ತದೆ.
ಬುಕ್ಕಿಂಗ್ ಮಾಡುವಾಗ ಮೇಲಿನ ಸೀಟಿನಲ್ಲಿ ಹಿರಿಯ ನಾಗರಿಕರು (senior citizens), ವಿಕಲಚೇತನರು ಅಥವಾ ಗರ್ಭಿಣಿ ಮಹಿಳೆಗೆ ಟಿಕೆಟ್ ಸಿಕ್ಕಿದರೆ, ಆನ್‌ಬೋರ್ಡ್ ಟಿಕೆಟ್ ಪರಿಶೀಲನೆಯ ಸಮಯದಲ್ಲಿ ಟಿಟಿ ಅವರಿಗೆ ಕೆಳಗಿನ ಸೀಟ್ ನೀಡಲು ಅವಕಾಶವಿದೆ ಎಂದು ಹೇಳಲಾಗಿದೆ.