TN Javarai Gowda: ಈ ಜೆಡಿಎಸ್ ಅಭ್ಯರ್ಥಿ ಎರಡು ಶತ ಕೋಟಿಗೂ ಅಧಿಕ ದುಡ್ಡಿನ ಧಣಿ, ಯಾರೀತ ?!

Share the Article

TN Javarai Gowda : ಈ ಜೆಡಿಎಸ್ (JDS) ಅಭ್ಯರ್ಥಿ ಎರಡು ಶತ ಕೋಟಿಗೂ ಅಧಿಕ ದುಡ್ಡಿನ ಧಣಿ. ಅಷ್ಟಕ್ಕೂ ಯಾರೀತ?‌ ಇತನಿಗಿರುವ ಆಸ್ತಿಯ ಮಾಹಿತಿ ತಿಳಿದರೆ ಬೆರಗಾಗ್ತೀರಾ!!. ಹೌದು, ಯಶವಂತಪುರ ಕ್ಷೇತ್ರದ ಟಿ.ಎನ್.ಜವರಾಯಿಗೌಡ (TN Javarai Gowda) ಬರೋಬ್ಬರಿ 206 ಕೋಟಿ ರೂ. ಆಸ್ತಿಯ ಒಡೆಯ.

ಜೆಡಿಎಸ್ ಪಕ್ಷದಿಂದ ಚುನಾವಣೆಗೆ ನಿಲ್ಲಲಿರುವ ಜವರಾಯಿಗೌಡ ಚುನಾವಣಾ ಆಯೋಗಕ್ಕೆ ಆಸ್ತಿ ವಿವರಗಳನ್ನು ಸಲ್ಲಿಸಿದ್ದು, ಈ ವೇಳೆ ಗೌಡರ ಒಟ್ಟು ಆಸ್ತಿಯ ಮಾಹಿತಿ ಬಹಿರಂಗವಾಗಿದೆ.

ಜವರಾಯಿಗೌಡರ ಹೆಸರಲ್ಲಿ 15.56 ಕೋಟಿ ರು. ಮೌಲ್ಯದ ಚರಾಸ್ತಿ ಇದ್ದು, 56.71 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ತಿಳಿದುಬಂದಿದೆ. ಪತ್ನಿ ಟಿ.ಎ.ಗಾಯತ್ರಿ ಹೆಸರಲ್ಲಿ 11,61 ಕೋಟಿ ರೂ. ಮೌಲ್ಯದ ಚರಾಸ್ತಿ, ಹಾಗೇ 87.10 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ ಎನ್ನಲಾಗಿದೆ.

ಅವಿಭಜಿತ ಕುಟುಂಬದ ಆಸ್ತಿಯಲ್ಲಿ 6.26 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 5.33 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಹಾಗೇ ಸಂತೋಷ್ ಎಂಟರ್ ಪ್ರೆಸ್‌ಸ್ ಹೆಸರಲ್ಲಿ 14.33 ಕೋಟಿ ರೂ ಚರಾಸ್ತಿ ಹಾಗೂ 8.94 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇರುವುದು ತಿಳಿದಿದೆ.

ಜವರಾಯಿಗೌಡರು ಸುಮಾರು 18.54 ಕೋಟಿ ರೂ. ಸಾಲ ಹೊಂದಿದ್ದಾರೆ. ಅವರ ಪತ್ನಿ 31.81 ಕೋಟಿ ರೂ. ಸಾಲ ಹೊಂದಿದ್ದಾರೆ. ಅಲ್ಲದೆ, ಸರ್ಕಾರಕ್ಕೆ 2.96 ಕೋಟಿ ರೂ. ತೆರಿಗೆ ಪಾವತಿ ಬಾಕಿ ಇದೆ.

Leave A Reply