Dharmasthala: ಧರ್ಮಸ್ಥಳದ ವಿಷು ಹಬ್ಬದ ಪೂಜಾ ಕಾರ್ಯದ ಮಾಹಿತಿ ವೈರಲ್! ನಿಜಾಂಶ ಏನು?

Dharmasthala Darshan :ಧರ್ಮಸ್ಥಳದ (Dharmsthala)ಕುರಿತು ಫೋಟೋವೊಂದು (Photo)ವೈರಲ್ (Viral) ಆಗುತ್ತಿದ್ದು, ಇದನ್ನು ಗಮನಿಸಿದ ಭಕ್ತಾದಿಗಳಲ್ಲಿ ಗೊಂದಲ ಮನೆ ಮಾಡಿದೆ. ಕಾಲಾವಧಿ ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ (Dharmasthala Darshan) ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳ ಬಗ್ಗೆ ನೀಡಲಾಗಿರುವ ಸೂಚನೆಯನ್ನು ಒಳಗೊಂಡ ಫೋಟೋವೊಂದು ವಾಟ್ಸಾಪ್ ಗ್ರೂಪ್​ಗಳಲ್ಲಿ (WhatsApp Group)ಸ್ಟೇಟಸ್​ಗಳಲ್ಲಿ ಶೇರ್ ಆಗುತ್ತಿದೆ.

 

ಧರ್ಮಸ್ಥಳ ದೇವಸ್ಥಾನದಲ್ಲಿ(Dharmsthala Temple) ಕಾಲಾವಧಿ ವಿಷು ಜಾತ್ರೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿದೆ. ದಿನಾಂಕ 17-04-2023ರ ಸೋಮವಾರದಿಂದ 22/04/2023ರ ಶನಿವಾರದವರೆಗೆ ಬೆಳಗ್ಗೆ 8:30 ಗಂಟೆಯವರೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂಬ ಮಾಹಿತಿಯನ್ನು ಫೋಟೋದಲ್ಲಿ ನಮೂದಿಸಲಾಗಿದೆ ಎಂದು ತಿಳಿದುಬಂದಿದೆ.

ವಿಷು ಜಾತ್ರೆಯ ಕುರಿತು ಧರ್ಮಸ್ಥಳ ಭಕ್ತಾದಿಗಳಿಗೆ ಹಂಚಿಕೊಂಡಿರುವ ಮಾಹಿತಿಯಲ್ಲಿ ಸಾಯಂಕಾಲ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಗರ್ಭಗುಡಿಯ ಆವರಣಕ್ಕೆ ಬಿಡಲಾಗುವುದು ಎಂಬ ಮಾಹಿತಿ ಕೂಡ ವೈರಲ್ ಆಗುತ್ತಿರುವ ಫೋಟೋದಲ್ಲಿದೆ. ಹೀಗಾಗಿ, ಭಕ್ತಾದಿಗಳು ಸಹಕರಿಸುವಂತೆ ಮನವಿ ಸಲ್ಲಿಸುವ ವೈರಲ್ ಆದ ಪೋಸ್ಟ್​ನಲ್ಲಿ ನಮೂದಿಸಲಾಗಿದೆ. ಸದ್ಯ, ವಿಷು ಜಾತ್ರೆಯ ಕುರಿತು ಧರ್ಮಸ್ಥಳ ಭಕ್ತಾದಿಗಳಿಗೆ ಮಾಡಲಾಗಿರುವ ಈ ಮನವಿ ಭಾರೀ ವೈರಲ್ ಆಗುತ್ತಿದೆ. ಧರ್ಮಸ್ಥಳ ದೇಗುಲದ ಆಡಳಿತ ಮಂಡಳಿಯು ಈ ಕುರಿತು ಅಧಿಕೃತ ಮಾಹಿತಿಯ ಮೂಲಕ ಸ್ಪಷ್ಟನೆ ನೀಡಬೇಕಾಗಿದ್ದು ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ.

ಆದರೆ ಈ ಕುರಿತು ಧರ್ಮಸ್ಥಳ ಕ್ಷೇತ್ರದ ದೇಗುಲದ ಆಡಳಿತ ಮಂಡಳಿ ಯಾವುದೇ ಸೊಷಿಯಲ್ ಮೀಡಿಯಾ ಖಾತೆಯಲ್ಲಿ(Social Media) ಏಪ್ರಿಲ್ 13ರ ಮಧ್ಯಾಹ್ನದವರೆಗೂ ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ, ವೈರಲ್ ಆಗುತ್ತಿರುವ ಸುದ್ದಿ ಎಷ್ಟರಮಟ್ಟಿಗೆ ನಿಜ ಎಂಬ ಪ್ರಶ್ನೆ ಜನವಲಯದಲ್ಲಿ ಕಾಡಿದ್ದು, ಇದಕ್ಕೆ ಧರ್ಮಸ್ಥಳ ದೇಗುಲದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ ಬಳಿಕವೇ ಸತ್ಯಾಸತ್ಯತೆ ತಿಳಿಯಬೇಕಾಗಿದೆ.

Leave A Reply

Your email address will not be published.