

Myanmar : ನಿನ್ನೆ ಮಯನ್ಮಾರ್‌ನಲ್ಲಿನ (Myanmar) ಸಾಗಯಿಂಗ್ ಪ್ರದೇಶದ ಕಾನ್ಬಾಳು ನಗರದ ಪಜೆಗಿ ಗ್ರಾಮದಲ್ಲಿ ಮಯನ್ಮಾರ್ ಸೇನಾಪಡೆ ದಾಳಿ ನಡೆಸಿದ್ದು, ಘಟನೆ ಪರಿಣಾಮ 30ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು ಸೇರಿದಂತೆ 100 ಮಂದಿ ಸಾವನ್ನಪ್ಪಿದ್ದಾರೆಂದು (died) ಎಂದು ತಿಳಿದುಬಂದಿದೆ.
ಕಾನ್ಬಾಳು ನಗರದ ಪಜೆಗಿ ಗ್ರಾಮದ ಹೊರಗೆ ಮಯನ್ಮಾರ್ ವಿರೋಧಿ ಬಣ ಪ್ರತ್ಯೇಕ ಕಚೇರಿ ತೆರೆಯಲು ಪ್ರಾರಂಭಿಸಿತ್ತು. ಈ ಹಿನ್ನೆಲೆಯಲ್ಲಿ ಅದ್ದೂರಿ ಸಮಾರಂಭ (program) ಏರ್ಪಡಿಸಲಾಗಿದ್ದು, ಸಮಾರಂಭಕ್ಕೆ 150ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಮಯನ್ಮಾರ್ ಸೇನಾಪಡೆ ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ವೈಮಾನಿಕ ದಾಳಿ ನಡೆಸಿದೆ. ಸೇನಾ ವಿಮಾನಗಳಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಪ್ರದೇಶದ ಮೇಲೆ ಬಾಂಬ್‌ಗಳನ್ನು (bomb) ಹಾಕಿದೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಮಯನ್ಮಾರ್ ಸೇನಾ ಪಡೆ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹೈಂಗ್, ವೈಮಾನಿಕ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 100 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಮಯನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ಅಸ್ತಿತ್ವದಲ್ಲಿದೆ. ಸದ್ಯ ಈ ದಾಳಿಯನ್ನು ವಿಶ್ವಸಂಸ್ಥೆಯು ತೀವ್ರವಾಗಿ ಖಂಡಿಸಿದ್ದು, ಮಯನ್ಮಾರ್ ಸೇನಾಪಡೆ ಕ್ರೂರತನಕ್ಕೆ ಎಚ್ಚರಿಕೆ ನೀಡಿದ್ದು, ಹಿಂಸಾಚಾರವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಹೇಳಿದೆ.













