Voter ID Correction : ಯಾವುದೇ ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ, ಮನೆಯಲ್ಲೇ ಈ ರೀತಿ ವೋಟರ್ ಐಡಿ ತಿದ್ದುಪಡಿ ಮಾಡಿ!

Voter ID Correction : ಮತದಾರರ ಪಟ್ಟಿಯಲ್ಲಿ ನಮೂದಿಸಿದ ನಿಮ್ಮ ಹೆಸರು ಸರಿಯಾಗಿದೆಯೇ ಅಥವಾ ವಿಳಾಸ, ಜನ್ಮ ದಿನಾಂಕ ಇತ್ಯಾದಿ ಮಾಹಿತಿಯಲ್ಲಿ ಇತರ ತಿದ್ದುಪಡಿ ಮಾಡಬೇಕಿದ್ದಲ್ಲಿ, ಇನ್ನು ಮುಂದೆ ಚಿಂತಿಸಬೇಕಿಲ್ಲ. ಹೌದು, ಇನ್ನು ಮುಂದೆ ಕಚೇರಿಗಳಿಗೆ ಅಲೆಯದೇ ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ಮತದಾರ ಪಟ್ಟಿ ತಿದ್ದುಪಡಿಯ (Voter ID Correction)ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.

ಸಾರ್ವಜನಿಕರು ಮತದಾರರ ಪಟ್ಟಿ ತಿದ್ದುಪಡಿಗಾಗಿ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಯಾವುದೇ ಸರಕಾರಿ ಕಚೇರಿಯಲ್ಲಿ ಕ್ಯೂ ನಿಲ್ಲದೇ ಈ ಎಲ್ಲಾ ಬದಲಾವಣೆಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದಾಗಿದೆ.

ಮತದಾರರ ಪಟ್ಟಿಯಲ್ಲಿನ ಭಾವಚಿತ್ರ ಬದಲಾವಣೆ, ಬಣ್ಣದ ಭಾವಚಿತ್ರ ಸೇರ್ಪಡೆ) ತಪ್ಪಾಗಿರುವ ಜನ್ಮ ದಿನಾಂಕ, ವಿಳಾಸ ಬದಲಾವಣೆಗೆ ಭಾರತೀಯ ಚುನಾವಣಾ ಆಯೋಗ ಈಗ ಸಾರ್ವಜನಿಕರಿಗೆ ನೇರ ಅವಕಾಶ ಒದಗಿಸಿದೆ.

ಇದಕ್ಕಾಗಿ ವೋಟರ್ ಹೆಲ್ಸ್ ಲೈನ್ ಆ್ಯಪ್ ಡೌನ್ಹೋಡ್ ಮಾಡಿಕೊಂಡು ನಾವೇ ಸ್ವತಃ ಬೇಕಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕುಟುಂಬದವರ ಹೆಸರು ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ಬೇರೆ ಬೇರೆ ಕಡೆ ತೆರಳುವ ಸಮಸ್ಯೆಯಿದ್ದಲ್ಲಿ ಅದಕ್ಕೂ ಈ ಆ್ಯಪ್‌ನಲ್ಲಿ ಅವಕಾಶವಿದೆ. ಫ್ಯಾಮಿಲಿ ಗ್ರೂಪ್‌ಗಳಿಗೆ ಸಹ ಅವಕಾಶ ನೀಡಿದ್ದು, ಬೇರೆ ಬೇರೆ ಮತಗಟ್ಟೆಗಳಲ್ಲಿರುವ ಒಂದೇ ಕುಟುಂಬದ ಸದಸ್ಯರನ್ನು ಒಂದೇ ಮತಗಟ್ಟೆಯಲ್ಲಿ ಒಂದೇ ಭಾಗದಲ್ಲಿ ಸೇರ್ಪಡೆ ಮಾಡಬಹುದಾಗಿದೆ.

ಮತದಾರರ ಬಹುಕಾಲದ ಬೇಡಿಕೆಯಾದ ತಮ್ಮ ಭಾವಚಿತ್ರ ತಿದ್ದುಪಡಿ ಮತ್ತು ಇತರೆ ತಿದ್ದುಪಡಿಗಳನ್ನು ಮತದಾರರೇ ಮಾಡಿಕೊಳ್ಳಲು ಚುನಾವಣಾ ಆಯೋಗ ಸಿದ್ಧಪಡಿಸಿರುವ ಈ ವೋಟರ್ ಹೆಲ್ತ್‌ ಲೈನ್ ಆ್ಯಪ್ ಅತ್ಯಂತ ಸರಳವಾಗಿದೆ.

ನೀವು ಚುನಾವಣಾ ಕಾರ್ಡ್ ತಿದ್ದುಪಡಿಗಾಗಿ ಅಪ್ಲೈ ಮಾಡುವ ವಿಧಾನ ಇಂತಿವೆ :
ನಿರೀಕ್ಷಿತ ಮತದಾರರು ತಮ್ಮ ಹೆಸರು, ವಿಳಾಸ ಮತ್ತು ಮತದಾರರ ಗುರುತಿನ ಚೀಟಿಗಳಲ್ಲಿನ ಇತರ ಮಾಹಿತಿಯನ್ನು ಬದಲಾಯಿಸಲು ಆನ್‌ಲೈನ್‌ನಲ್ಲಿ ಮತದಾರರ ಗುರುತಿನ ತಿದ್ದುಪಡಿಯನ್ನು ಆರಿಸಿಕೊಳ್ಳಬಹುದು. ಅರ್ಜಿದಾರರ ಹೆಸರು, ವಿಳಾಸ ಮತ್ತು ಜನ್ಮ ದಿನಾಂಕವನ್ನು ಬದಲಾಯಿಸಲು ಪ್ರತಿ ಹಂತವನ್ನು ಮೂರು ವಿಭಾಗವಾಗಿ ವಿಂಗಡಿಸಲಾಗಿದೆ.

ಮೊದಲು ನಿಮ್ಮ ಮೊಬೈಲ್‌ನ ಪ್ಲೇ ಸ್ಟೋರ್ಸ್‌ನಲ್ಲಿ ವೋಟರ್ ಹೆಲ್ಸ್‌ಲೈನ್ ಆ್ಯಪ್ ಡೌಗ್ಲೋಡ್ ಮಾಡಿಕೊಳ್ಳಿ. ಅದರಲ್ಲಿ ಬರುವ ಸೂಚನೆಗಳನ್ನು ಪಾಲಿಸಿ. ನಂತರ ಬರುವ ಸ್ಟೀನ್‌ನಲ್ಲಿ ಇವಿಪಿ ಎಂಬುದನ್ನು ಪ್ರೆಸ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆ ನೀಡಿ, ನಂತರ ಬರುವ ಒಟಿಪಿ ದಾಖಲಿಸಿದಾಗ, ನಿಮ್ಮ ವೋಟ‌ರ್ ಐಡಿಯ ಸಂಖ್ಯೆಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಲು ಸೂಚನೆ ಬರುತ್ತದೆ. ಇದನ್ನು ಪಾಲಿಸಿದ ನಂತರ ಬರುವ ಸ್ಟೀನ್‌ನ್‌ನಲ್ಲಿ ವಿವರಗಳನ್ನು ನಮೂದಿಸಿ, ಮತದಾರರ ಪಟ್ಟಿಯಲ್ಲಿನ ನಿಮ್ಮ ಹೆಸರನ್ನು ಹುಡುಕಿದಾಗ, ನಿಮ್ಮ ಭಾವಚಿತ್ರ ಸಹಿತ ಮಾಹಿತಿ ಬರಲಿದೆ. ಈ ಭಾವಚಿತ್ರ ಸಹಿತ ಮಾಹಿತಿಯಲ್ಲಿ ನಿಮ್ಮ ಭಾವಚಿತ್ರ, ಹೆಸರು, ವಯಸ್ಸು, ಲಿಂಗ, ತಂದೆ, ಪತಿ ಹೆಸರು, ವಿಳಾಸ ಇವುಗಳ ಮುಂದೆ ಪೆನ್ಸಿಲ್ ಐಕಾನ್ ಇದ್ದು, ನೀವು ಯಾವುದನ್ನು ಬದಲಾವಣೆ ಮಾಡಬೇಕೋ ಅದನ್ನು ಒತ್ತಿದಾಗ, ಆ ಬದಲಾವಣೆಗೆ ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೋರುತ್ತದೆ. ಅಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಅಪ್ ಲೋಡ್ ಮಾಡಿದಲ್ಲಿ ಮತದಾರರ ಗುರುತು ಚೀಟಿಯಲ್ಲಿ ನೀವು ಕೋರಿದ ಬದಲಾವಣೆ ಸಾಧ್ಯವಾಗಲಿದೆ.

ಈ ವೋಟರ್ ಹೆಲ್ತ್‌ ಲೈನ್ ಆ್ಯಪ್ ಅತ್ಯಂತ ಸರಳವಾಗಿದ್ದು, ಬಳಕೆದಾರರ ಸ್ನೇಹಿಯಾಗಿ ರೂಪಿಸಲಾಗಿದೆ. ಈ ಆಪ್ ಬಳಕೆ ಬಗ್ಗೆ ಯಾವುದೇ ಸಮಸ್ಯೆಗಳಿದ್ದಲ್ಲಿ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾಮತದಾರರ ಸಹಾಯವಾಣಿ ಕೇಂದ್ರ ಮತ್ತು ಎಲ್ಲಾ ತಾಲೂಕುಗಳ ತಹಸೀಲ್ದಾರ್ ಕಚೇರಿಗಳನ್ನು ಸಂಪರ್ಕಿಸಿ, ಅಲ್ಲೂ ಸಹ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಹಾಗೂ ಆಪ್ ಬಳಕೆ ಮತ್ತಿತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಮುಖ್ಯವಾಗಿ ಗುರುತಿನ ಮತ್ತು ವಿಳಾಸ ಪುರಾವೆಗಾಗಿ ಮತದಾರರ ಗುರುತಿನ ಚೀಟಿ ಅತ್ಯಗತ್ಯ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ಭವಿಷ್ಯದಲ್ಲಿ ಅನಾನುಕೂಲತೆಯಿಂದ ತಪ್ಪಿಸಲು, ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಇತ್ಯಾದಿ ಮಾಹಿತಿಯಲ್ಲಿ ಯಾವುದೇ ತಪ್ಪುಗಳನ್ನು ಸರಿಪಡಿಸುವುದು ಅವಶ್ಯಕವಾಗಿದೆ .

ಇದನ್ನೂ ಓದಿ: Under Construction Temple : ನಿರ್ಮಾಣ ಹಂತದ ದೇವಸ್ಥಾನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು! ದೇವಸ್ಥಾನ ಸುಟ್ಟು ಭಸ್ಮ

Leave A Reply

Your email address will not be published.