General Provident Fund : ಸರಕಾರಿ ನೌಕರರಿಗೆ ಭಾರೀ ದೊಡ್ಡ ಹೊಡೆತ ನೀಡಿದ ಸರಕಾರ!

GPF: ಜನರಲ್ ಪ್ರಾವಿಡೆಂಟ್ ಫಂಡ್ (General Provident Fund) ಒಂದು ಉಳಿತಾಯ ಮತ್ತು ನಿವೃತ್ತಿ ಯೋಜನೆಯಾಗಿದೆ. ಇದು ಸರ್ಕಾರಿ ನೌಕರರಿಗೆ (government employee) ಮಾತ್ರ ಅನ್ವಯ ಆಗುತ್ತದೆ. ಇದೀಗ ಈ ಬಗ್ಗೆ ಸರ್ಕಾರಿ ನೌಕರರಿಗೆ ಬಿಗ್ ಶಾಕಿಂಗ್ ನ್ಯೂಸ್ ಇಲ್ಲಿದೆ. ಕೇಂದ್ರ ಸರ್ಕಾರವು 65 ಲಕ್ಷ ಕೇಂದ್ರ ನೌಕರರಿಗೆ ಬಿಗ್ ಶಾಕ್ ನೀಡಿದೆ.

ಏಪ್ರಿಲ್ 1 ರಿಂದ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ (saving sachems) ಮೇಲಿನ ಬಡ್ಡಿದರವನ್ನು ಹೆಚ್ಚಿಸಿದ್ದು, ಆ ನಂತರ ಉದ್ಯೋಗಿಗಳ ಸಾಮಾನ್ಯ ಭವಿಷ್ಯ ನಿಧಿ (GPF) ಮೇಲಿನ ಬಡ್ಡಿದರವನ್ನು ಕೂಡಾ ಹೆಚ್ಚಿಸುವ ನಿರೀಕ್ಷೆಯಿತ್ತು. ಆದರೆ ಸರಕಾರ ಸತತ 14ನೇ ತ್ರೈಮಾಸಿಕದಲ್ಲಿ ಜಿಪಿಎಫ್ ಮೇಲಿನ ಬಡ್ಡಿ ದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ. ಏಪ್ರಿಲ್-ಜೂನ್ 2023 ತ್ರೈಮಾಸಿಕದಲ್ಲಿಯೂ GPF ಬಡ್ಡಿ ದರದಲ್ಲಿ ಏರಿಕೆಯಾಗಿಲ್ಲ.

GPF ಮೇಲಿನ ಬಡ್ಡಿ ದರವನ್ನು ಹಣಕಾಸು ಸಚಿವಾಲಯವು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸುತ್ತದೆ. ಆದರೆ, ಸದ್ಯ ಸಾಮಾನ್ಯ ಭವಿಷ್ಯ ನಿಧಿ ಬಡ್ಡಿದರವನ್ನು ಹೆಚ್ಚಿಸದಿರಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಬಡ್ಡಿದರ ಏರಿಕೆ ನಿರೀಕ್ಷೆಯಲ್ಲಿದ್ದ ಹೂಡಿಕೆದಾರರಿಗೆ ಶಾಕ್‌ ಬಂದೊದಗಿದೆ.

ಕಳೆದ 13 ತ್ರೈಮಾಸಿಕಗಳಿಂದ ಜಿಪಿಎಫ್‌ನ ಬಡ್ಡಿ ದರವನ್ನು ಹೆಚ್ಚಿಸಿಲ್ಲ. 14ನೇ ಬಾರಿಯೂ ಹೆಚ್ಚಿಸಿಲ್ಲ. ಏಪ್ರಿಲ್ ನಿಂದ ಜೂನ್ ತ್ರೈಮಾಸಿಕದಲ್ಲಿ (ಏಪ್ರಿಲ್ 1, 2023 ರಿಂದ ಜೂನ್ 30, 2023 ರವರೆಗೆ) ಸಾಮಾನ್ಯ ಭವಿಷ್ಯ ನಿಧಿ ಮತ್ತು ಇತರ ರೀತಿಯ ನಿಧಿಗಳಲ್ಲಿನ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 7.1 ರಷ್ಟೇ ಉಳಿಸುವುದಾಗಿ ಹಣಕಾಸು ಸಚಿವಾಲಯ ಘೋಷಿಸಿದೆ.

ಇದನ್ನೂ ಓದಿ: Canara Bank : ಕೆನರಾಬ್ಯಾಂಕ್‌ ಗ್ರಾಹಕರೇ ನಿಮಗೊಂದು ಮಹತ್ವದ ಸುದ್ದಿ!

Leave A Reply

Your email address will not be published.