Property: ಹೆಣ್ಣು ಮಕ್ಕಳಿಗೆ ತಂದೆಯ ಸ್ವಯಾರ್ಜಿತ, ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಪಾಲು ಸಿಗುವುದಿಲ್ಲ? ಇಲ್ಲಿದೆ ಸಂಪೂರ್ಣ ವಿವರ

property: ತಂದೆಯ ಆಸ್ತಿಯಲ್ಲಿ (property) ಗಂಡು (boy) ಮತ್ತು ಹೆಣ್ಣು (girl) ಇಬ್ಬರೂ ಸಮಾನ ಪಾಲು ಹೊಂದಿರುತ್ತಾರೆ ಎಂದು ಕಾನೂನು ಹೇಳುತ್ತದೆ. ತಂದೆಯ ಆಸ್ತಿಯಲ್ಲಿ ಹೆಣ್ಣು ಮಗಳಿಗೂ ಹಕ್ಕು ಇದೆ ಎಂದು ಹೆಚ್ಚಿನವರಿಗೆ ತಿಳಿದಿದೆ. ಆದರೆ, ಹೆಣ್ಣು ಮಕ್ಕಳಿಗೆ ತಂದೆಯ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ (Inherited property) ಪಾಲು ಯಾವಾಗ ಸಿಗುವುದಿಲ್ಲ ಎಂದು ಗೊತ್ತಿದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಪಿತ್ರಾರ್ಜಿತ ಆಸ್ತಿ: ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಸಮಾನ ಪಾಲು ಇರುತ್ತದೆ. ಆದರೆ ಹೆಣ್ಣುಮಕ್ಕಳು ಆಸ್ತಿ ಭಾಗವಾಗುವ ಸಂದರ್ಭದಲ್ಲಿ ತಮಗೆ ಆಸ್ತಿ ಬೇಡವೆಂದು ಆಸ್ತಿ ಬದಲಾಗಿ ಬೇರೆ ಏನಾದರೂ ಉಡುಗೊರೆ ಪಡೆದು ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಬಿಟ್ಟು ಕೊಟ್ಟಿರುತ್ತಾರೆ. ಆ ಹೆಣ್ಣು ಮಕ್ಕಳು ಏನಾದರೂ 2005ಕ್ಕಿಂತ ಹಿಂದೆ ಅಥವಾ 2005 ರಿಂದ ಈಚೆಗೆ ಈ ರೀತಿ ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ತಂದೆಯ ಮನೆಯ ಆಸ್ತಿ ಹಕ್ಕನ್ನು ಬಿಟ್ಟು ಕೊಟ್ಟಿದ್ದರೆ, ಅವರು ನ್ಯಾಯಾಲಯದಲ್ಲಿ ಧಾವೆ ಹೂಡಲು ಸಾಧ್ಯವಿಲ್ಲ. ಅವರಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಜೊತೆಗೆ ತಂದೆಯ ಮನೆಯ ಆಸ್ತಿ 2005 ರಲ್ಲಿ ಆದ ತಿದ್ದುಪಡಿಗಿಂತ ಹಿಂದೆ ವಿಘಟನೆ ಆಗಿ ಹೋಗಿದ್ದರೆ ಆಗ ಕೂಡ ಹೆಣ್ಣುಮಕ್ಕಳು ತಂದೆ ಆಸ್ತಿಯಲ್ಲಿ ಪಾಲು ಕೇಳಲು ಆಗುವುದಿಲ್ಲ.
ಸ್ವಯಾರ್ಜಿತ ಆಸ್ತಿ: ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ (Freehold property) ಎನ್ನುತ್ತಾರೆ. ಸ್ವಯಾರ್ಜಿತ ಆಸ್ತಿಯಲ್ಲಿ ಮಗ, ಮಗಳು ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ. ಯಾಕಂದ್ರೆ ಇದು ತಂದೆ ಖರೀದಿಸಿದ ಅಥವಾ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯಾಗಿದೆ. ಇದನ್ನು ತಂದೆ ಯಾರಿಗೆ ಬೇಕಾದರೂ ಕೊಡಬಹುದು. ಅವರು ಕ್ರಯ ಪತ್ರದ ಮೂಲಕ ಅಥವಾ ರಿಜಿಸ್ಟರ್ ಮಾಡುವ ಮೂಲಕ ತಮ್ಮ ಆಸ್ತಿ ಹಕ್ಕನ್ನು ತಮ್ಮ ಇಷ್ಟವಾದ ಮಕ್ಕಳಿಗೆ ಕೊಟ್ಟಿದ್ದರೆ ಅದು ಅವರ ಸ್ವಂತ ಸಂಪಾದನೆ ಆಗಿರುವ ಕಾರಣ ಹೆಣ್ಣು ಮಕ್ಕಳು ಅದರಲ್ಲಿ ಪಾಲು ಕೇಳಲು ಆಗುವುದಿಲ್ಲ. ಆದರೆ, ಆಸ್ತಿ ಪಾಲು ಮಾಡದೆ ತಂದೆ ಮರಣ ಹೊಂದಿದರೆ, ಆತನ ಆಸ್ತಿಯಲ್ಲಿ ಆತನ ಉತ್ತರಾಧಿಕಾರಿಗಳಾದ ಮಗ, ಮಗಳು, ಹೆಂಡತಿ, ತಾಯಿಗೆ ಸಮಾನವಾದ ಪಾಲು ಇರುತ್ತದೆ.
ಇನ್ನು ಗಂಡು ಸಂತಾನವಿಲ್ಲದ ವ್ಯಕ್ತಿಯು ಸಾವನ್ನಪ್ಪಿದರೆ, ಆತನ ಸಾವಿನ ನಂತರ ಆತನಿಗೆ ಸಂಬಂಧಿಸಿದ ಆಸ್ತಿಯು ಸಾವನ್ನಪ್ಪಿದ ವ್ಯಕ್ತಿಯ ಮಗಳಿಗೆ ಸಲ್ಲುತ್ತದೆ. ಈ ವ್ಯವಸ್ಥೆಯು ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಹಾಗೂ ಪಿತ್ರಾರ್ಜಿತ ಆಸ್ತಿ ಇವೆರಡೂ ರೂಪಗಳಿಗೆ ಅನ್ವಯಿಸುತ್ತದೆ. ಹಾಗೆಯೇ ಅವಿಭಕ್ತ ಕುಟುಂಬದಲ್ಲಿರುವ ಹಿರಿಯ ವ್ಯಕ್ತಿಯು ಆಸ್ತಿಪತ್ರ /ಉಯಿಲು ಬರೆಯದೆ ತೀರಿ ಹೋದ ಸಂದರ್ಭದಲ್ಲಿ ಅವನ ಆಸ್ತಿಯಲ್ಲಿ ಅವನ ಮಗಳಿಗೂ ಹಕ್ಕಿರುತ್ತದೆ ಎಂದು ಹೇಳಲಾಗಿದೆ.