Anand Mahindra : ಅಂಕೋಲಾದ ಈ ಮಹಿಳೆಯ ಸ್ವಚ್ಛತಾ ಕೆಲಸಕ್ಕೆ ಶ್ಲಾಘಿಸಿದ ಆನಂದ್ ಮಹೀಂದ್ರಾ ! ಅಷ್ಟಕ್ಕೂ ಈ ಮಹಿಳೆ ಮಾಡಿದ ಕೆಲಸ ಏನು?

Anand Mahindra : ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ತೆರೆಮರೆಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡ ಜನರನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ಅದೇ ರೀತಿ, ಇದೀಗ, ಮಹಿಳೆಯೊಬ್ಬಳ ಕಾರ್ಯವನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ ಅವರು ಪೋಸ್ಟ್ ಮಾಡಿದ್ದಾರೆ.

ನಾವೆಲ್ಲ ಸಾಮಾನ್ಯವಾಗಿ ಸ್ವಚ್ಚ ಭಾರತ ಅಭಿಯಾನದ(Swachh Bharat Mission) ಭಾಗವಾಗಿ ಒಂದು ದಿನದ ಮಟ್ಟಿಗೆ ಕಸವನ್ನು ಹೆಕ್ಕಿ ಸ್ವಚ್ಛ ಮಾಡಿ, ಇನ್ನುಳಿದ ದಿನಗಳಲ್ಲಿ ಬಸ್ಸಿನಲ್ಲಿಯೋ ಇಲ್ಲವೇ ರಸ್ತೆಯಲ್ಲಿ(Road) ಸಂಚರಿಸುವಾಗ ಸಿಕ್ಕಿದಲ್ಲಿ ಕಸ ಎಸೆಯುವುದನ್ನು(Garbage) ಮಾಡುವುದುಂಟು. ಆದರೆ, ಹೆಚ್ಚಿನವರು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಮ್ಮ ಕಣ್ಣ ಮುಂದೆಯೇ ಕಸವಿದ್ದರೂ ನಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಆದರೆ, ಕರ್ನಾಟಕದ (Karnataka) ಅಂಕೋಲಾದ ಮಹಿಳೆ ತನ್ನ ಸಾಮಾಜಿಕ ಕಳಕಳಿಯ ಮೂಲಕ ನೋಡುಗರ ಗಮನ ಸೆಳೆದಿದ್ದು, ಅದರಲ್ಲಿಯೂ ವಿಶೇಷವಾಗಿ ಮಹೀಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹೀಂದ್ರಾ ಅವರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಂಕೋಲಾ ಬಸ್ ನಿಲ್ದಾಣದಲ್ಲಿ( Ankola Bus Stop)ಮಹಿಳೆಯೊಬ್ಬರ ಸ್ವಚ್ಛ ಭಾರತ ಕಾಯಕದ ವಿಡಿಯೊವೊಂದನ್ನು (Video) ಹಂಚಿಕೊಂಡಿದ್ದರು. “ಈ ಮಹಿಳೆ ಕರ್ನಾಟಕದ ಅಂಕೋಲಾ ಬಸ್ ನಿಲ್ದಾಣದಲ್ಲಿ ಎಲೆಗಳಲ್ಲಿ ಸುತ್ತಿ ಹಣ್ಣುಗಳನ್ನು ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ, ಕೆಲವರು ಹಣ್ಣು ತಿಂದು ಮುಗಿಸಿದ ಬಳಿಕ ಬಸ್ಸಿನ ಕಿಟಕಿಯಿಂದ ಎಲೆಗಳನ್ನು ಎಸೆದು ಹೋಗುತ್ತಾರೆ. ಈ ಸಂದರ್ಭ ಮಹಿಳೆ(Women) ಅಲ್ಲಿಗೆ ಹೋಗಿ ಎಲೆಗಳನ್ನು ತೆಗೆದುಕೊಂಡು ಕಸದ ಬುಟ್ಟಿಗೆ ಹಾಕುವ ಮೂಲಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇದು ಮಹಿಳೆಯ ಕೆಲಸ ಅಲ್ಲದೇ ಹೋದರು ಕೂಡ ಈ ಕೆಲಸವನ್ನು ನಿಭಾಯಿಸುತ್ತಿದ್ದಾರೆ ಎಂಬುದನ್ನು ಆದರ್ಶ್ ಹೆಗ್ಡೆ ಎಂಬ ಟ್ವಿಟರ್ ಬಳಕೆದಾರರೊಬ್ಬರು (Twitter)ಮಹಿಳೆಯ ವೀಡಿಯೋ ಶೇರ್ ಮಾಡಿದ್ದಾರೆ.

https://twitter.com/i/status/1645294908750561280

ಈ ಟ್ವೀಟ್ ಅನ್ನು ಗಮನಿಸಿದ ಆನಂದ್ ಮಹೀಂದ್ರಾ ಅವರು ಈ ವಿಡಿಯೋ ಶೇರ್ ಮಾಡಿದ್ದು, “ಇವರು ಭಾರತ ಸ್ವಚ್ಛ ಮಾಡುವ ನಿಜವಾದ, ಶಾಂತ ಹೀರೋಗಳಾಗಿದ್ದು, ಆಕೆಯ ಪ್ರಯತ್ನ ಜನರ ಗಮನ ಸೆಳೆದು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ಅವರು ತಿಳಿದುಕೊಳ್ಳಬೇಕು ಎಂಬುದನ್ನು ನಾನು ಬಯಸುತ್ತೇನೆ. ನೀವು ಆ ಪ್ರದೇಶದಲ್ಲಿ ವಾಸಿಸುವ ಯಾರಾದರೂ ತಿಳಿದಿದ್ದರೆ ಅವಳನ್ನು ಸಂಪರ್ಕಿಸಬಹುದೇ?” ಎಂದು ಆನಂದ್ ಮಹೀಂದ್ರಾ ಅವರು ಮನವಿ ಮಾಡಿದ್ದು, ಇದು ಮಹೀಂದ್ರ ಅವರ ಹೃದಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿ ಎಂದರೇ ತಪ್ಪಾಗದು. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ತಾನು ಕಂಡ ವಿಶಿಷ್ಟ ಜನರನ್ನು ಗುರುತಿಸುವ ಮಹೀಂದ್ರ ಅವರು ಜಗತ್ತಿಗೆ ವಿಶಿಷ್ಟ ವ್ಯಕ್ತಿಗಳನ್ನು ಜಗಜ್ಜಾಹೀರು ಮಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ವಿಶೇಷ.

ಇದನ್ನು ಓದಿ : Tata Motors Car Sales : ಕಾರು ಮಾರಾಟದಲ್ಲಿ ವೇಗವಾಗಿ ಮುನ್ನುಗುತ್ತಿದೆ ಟಾಟಾ ! ನಂ.1 ಪಟ್ಟ ಫಿಕ್ಸ್

Leave A Reply

Your email address will not be published.