Women Viral Video: 500 ರೂ. ನೋಟನ್ನು ಹಾಕಿ, ಬೇಯಿಸಿದ ಬಳಿಕ 2000ರೂಪಾಯಿ ತೆಗೆದು ಮ್ಯಾಜಿಕ್ ಮಾಡಿದ ಮಹಿಳೆ!

Share the Article

Women Viral Video: ಬೆಳಗ್ಗಿನ ಉಪಹಾರಕ್ಕೆ ನಾನಾ ಬಗೆಯ ತಿಂಡಿಗಳನ್ನು ನಾವೆಲ್ಲ ಸೇವಿಸೋದು ಇದ್ದೇ ಇದೆ. ದೋಸೆ, ಇಡ್ಲಿ, ಚಪಾತಿ, ಚಿತ್ರಾನ್ನ, ಉಪ್ಪಿಟ್ಟು, ಪರೋಟ ಹೀಗೆ ಬಾಯಿಗೆ ರುಚಿ ಕೊಡುವ ಹೊಟ್ಟೆ ತುಂಬಿಸುವ ಸಲುವಾಗಿ ಆಹಾರ ಸೇವನೆ ಮಾಡುತ್ತೇವೆ. ಅದರಲ್ಲಿಯೂ ನೀವು ಹೋಟೆಲ್ಗೆ(Hotel) ಕಾಲಿಟ್ಟರೆ ನಿಮಗೆ ತರಹೇವಾರಿ ತಿಂಡಿಗಳು ಅದರಲ್ಲಿಯೂ ಪ್ಲೇನ್​ ಪರೋಟ, ಆಲೂ ಪರೋಟ, ಪನ್ನೀರ್, ಮೊಟ್ಟೆ ಹೀಗೆ ವಿವಿಧ ಬಗೆಯ ಪರೋಟಗಳನ್ನು ಸವಿಯಬಹುದು. ಇದರಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುವುದನ್ನು ನೋಡಿರಬಹುದು. ಆದರೆ, ಇಲ್ಲೊಬ್ಬ ಮಹಿಳೆ(Women) ಪರೋಟಾ ಮಾಡುತ್ತಿರುವ ವೀಡಿಯೋ ವೈರಲ್( Women Viral Video) ಆಗಿ ಸಂಚಲನ ಮೂಡಿಸಿದೆ. ಅಷ್ಟಕ್ಕೂ ಅಂತಹದ್ದೇನು ವಿಶೇಷವಿದೆ ಅಂತೀರಾ? ಹಾಗಿದ್ರೆ, ನೀವು ಈ ಕಹಾನಿ ತಿಳಿಯಲೇಬೇಕು.

ಪರೋಟ (Parota)ಮಾರಾಟ ಮಾಡುವುದರಲ್ಲಿ ಏನು ವಿಶೇಷವಿದೆ ಎಂದು ನೀವು ಯೋಚಿಸುತ್ತಿರಬಹುದು. ಆಕೆ ಮಾರಾಟ ಮಾಡುತ್ತಿರುವುದು ಸಾಮಾನ್ಯ ಪರೋಟವಲ್ಲ ಕಣ್ರೀ! ದುಡ್ಡಿನ ಪರೋಟಾ ಮಾಡುತ್ತಿದ್ದಾರೆ. ಅರೇ ಇದು ಹೇಗಪ್ಪಾ ಅಂತೀರಾ? ಮಹಿಳೆ (Women)ಪರೋಟಾ ಹಿಟ್ಟನ್ನು ಸರಿಯಾಗಿ ನಾದಿಕೊಂಡು, ಅದನ್ನು ಸ್ವಲ್ಪವೇ ಲಟ್ಟಿಸಿಕೊಂಡು, ಅದರಲ್ಲಿ 500 ರೂಪಾಯಿ(500 Rupees Note)ನೋಟು ಹಾಕಿ ಮತ್ತೆ ಲಟ್ಟಿಸುತ್ತಾರೆ. ಆ ಬಳಿಕ ಎಣ್ಣೆ ಸವರುತ್ತಾರೆ. ಪರೋಟವನ್ನು ಕಾವಲಿ ಮೇಲೆ ತುಪ್ಪವನ್ನೆಲ್ಲ ಸವರಿ ಬೇಯಿಸುತ್ತಾರೆ. ಅದೇ ರೀತಿ, ಬೇಯಿಸಿದ ಪರೋಟಾ ತೆಗೆದ ಮೇಲೆ ಪರೋಟಾದಿಂದ 2000 ರೂಪಾಯಿಯನ್ನು(2000 Rupee Note) ಹೊರ ತೆಗೆಯುತ್ತಾರೆ.

ಇಲ್ಲಿ ಮಹಿಳೆ ಅವರು 500 ರೂ.ನೋಟನ್ನು ಹಾಕಿ ಲಟ್ಟಿಸಿ, ಬೇಯಿಸಿದ ಮೇಲೆ 500 ರೂ.ಬದಲು, 2000 ರೂಪಾಯಿಯನ್ನು ಹೊರತೆಗೆಯುತ್ತಾರೆ. ಇಲ್ಲೇನು ಜಾದೂ ಮಾಡಿದರು ಎಂದು ನೆಟ್ಟಿಗರು ಯೋಚಿಸುತ್ತಿದ್ದಾರೆ. ಆದರೆ, ಈ ಹಣ ಬದಲಾಗಿದ್ದು ಹೇಗೆ ಎಂಬ ವಿಚಾರದ ಬದಲಿಗೆ ಹೆಚ್ಚಿನ ನೆಟ್ಟಿಗರು ಹಣವನ್ನೆಲ್ಲ (Money) ಸುರಿದು ಪರೋಟಾ ಮಾಡುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ನೀವು ಜನ ಮನ ಸೆಳೆಯುವ ನಿಟ್ಟಿನಲ್ಲಿ ವೀಡಿಯೋ ಮಾಡುವುದು ತಪ್ಪಲ್ಲ. ಆದರೆ, ಹಣಕ್ಕೆ ಅಗೌರವ ತೋರುವುದು ಸರಿಯಲ್ಲ. ಹೀಗೆ ಪರೋಟಾ ಮಾಡುವಾಗ ಹಣ ಸುಟ್ಟು ಹೋದರೆ ಏನು ಮಾಡುತ್ತೀರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ದುಡ್ಡಿಗೆ ಬೆಲೆ ಕೊಡದವರಿಗೆ ಯಾರು ಬೆಂಬಲ ನೀಡಬೇಡಿ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ, ಈ ವೀಡಿಯೋ(Video) ವನ್ನೂ ಸುಮಾರು 4.7 ಮಿಲಿಯನ್​ ಮಂದಿ ವೀಕ್ಷಿಸಿದ್ದು, ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.

 

 

ಇದನ್ನು ಓದಿ : Good news foe women : ಇನ್ನು ಕೆಳವರ್ಗದ ಮಹಿಳೆಯರಿಗೆ ಮಾತ್ರವಲ್ಲ, ಮೇಲ್ವರ್ಗದ ಮಹಿಳೆಯರಿಗೂ ದೊರಕುತ್ತೆ ಭರ್ಜರಿ 15 ಸಾವಿರ!

Leave A Reply