ESIC Recruitment 2023: ಸೀನಿಯರ್ ರೆಸಿಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ! ಸಂಬಳ 1 ಲಕ್ಷಕ್ಕೂ ಹೆಚ್ಚು!

ESIC Recruitment 2023 : ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ, ಉದ್ಯೋಗ ಅರಸುತ್ತಿರುವ ಆಕಾಂಕ್ಷಿಗಳಿಗೆ ಅದರಲ್ಲಿಯೂ ಸರಕಾರಿ ಉದ್ಯೋಗ (Government Job) ಬಹು ಮುಖ್ಯ ಮಾಹಿತಿ ಇಲ್ಲಿದೆ.

ನೌಕರರ ರಾಜ್ಯ ವಿಮಾ ನಿಗಮ (Employees State Insurance Corporation) ಖಾಲಿ ಇರುವ ಹುದ್ದೆಗಳನ್ನು(ESIC Recruitment 2023) ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಒಟ್ಟು 5 ಸೀನಿಯರ್ ರೆಸಿಡೆಂಟ್, ಫುಲ್​ ಟೈಂ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತ ಮಾಹಿತಿ ತಿಳಿದಿರುವುದು ಒಳ್ಳೆಯದು. ಈ ಮಾಹಿತಿ ಇಲ್ಲಿದೆ ನೋಡಿ.
ಸಂಸ್ಥೆ – ನೌಕರರ ರಾಜ್ಯ ವಿಮಾ ನಿಗಮ
ಹುದ್ದೆ – ಸೀನಿಯರ್ ರೆಸಿಡೆಂಟ್
ಒಟ್ಟು – ಹುದ್ದೆ 5
ಉದ್ಯೋಗದ ಸ್ಥಳ: ರಾಜಸ್ಥಾನದ ಭಿವಾಡಿ

ಹುದ್ದೆಯ ಮಾಹಿತಿ:
ಫುಲ್​ ಟೈಂ/ ಪಾರ್ಟ್​ ಟೈಂ ಸ್ಪೆಷಲಿಸ್ಟ್​- 2
ಸೀನಿಯರ್ ರೆಸಿಡೆಂಟ್- 3
ಒಟ್ಟು- 5 ಹುದ್ದೆಗಳು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಏಪ್ರಿಲ್ 5 ಆರಂಭಿಕ ದಿನವಾಗಿದ್ದು, ಏಪ್ರಿಲ್ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ(Last Date). ಅಭ್ಯರ್ಥಿಗಳು ಆಫ್​ಲೈನ್/ ಪೋಸ್ಟ್ (Offline)​ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು, ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅವಶ್ಯಕ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ.

ವಿಳಾಸ:
ESIC ಆಸ್ಪತ್ರೆ
ಭಿವಾಡಿ
ರಾಜಸ್ಥಾನ

ವಿದ್ಯಾರ್ಹತೆ (Education Qualification)
ಫುಲ್​ ಟೈಂ/ ಪಾರ್ಟ್​ ಟೈಂ ಸ್ಪೆಷಲಿಸ್ಟ್ ಹುದ್ದೆಗೆ ಸ್ನಾತಕೋತ್ತರ ಪದವಿ/ ಡಿಪ್ಲೊಮಾ/ ಡಿಎನ್​ಬಿ ಆಗಿರಬೇಕು.
ಸೀನಿಯರ್ ರೆಸಿಡೆಂಟ್ ಹುದ್ದೆಗೆ ಸ್ನಾತಕೋತ್ತರ ಪದವಿ/ ಡಿಪ್ಲೊಮಾ ಪದವಿ ಹೊಂದಿರಬೇಕು.

ವಯೋಮಿತಿ(Age Limit)
ಫುಲ್​ ಟೈಂ/ ಪಾರ್ಟ್​ ಟೈಂ ಸ್ಪೆಷಲಿಸ್ಟ್ ಹುದ್ದೆಗೆ ಗರಿಷ್ಠ ವಯೋಮಿತಿ 45 ವರ್ಷ ಆಗಿದ್ದು, ಸೀನಿಯರ್ ರೆಸಿಡೆಂಟ್ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷವಾಗಿದೆ.

ವೇತನ:
ಫುಲ್​ ಟೈಂ/ ಪಾರ್ಟ್​ ಟೈಂ ಸ್ಪೆಷಲಿಸ್ಟ್​- ಮಾಸಿಕ ₹ 60,000-1,19,423
ಸೀನಿಯರ್ ರೆಸಿಡೆಂಟ್- ಮಾಸಿಕ ₹ 98,961

ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಏಪ್ರಿಲ್ 13, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

 

ಇದನ್ನು ಓದಿ : H.D. Kumaraswamy: ಹೆಚ್ ಡಿಕೆ ಅವರನ್ನು ಮದುವೆಯಾಗುವ ಮೊದಲು ಅನಿತಾ ಕುಮಾರಸ್ವಾಮಿ ಹಾಕಿದ ಷರತ್ತು ಏನು ಗೊತ್ತಾ? 

Leave A Reply

Your email address will not be published.