5,8 School Board Exam : 5,8 ನೇ ತರಗತಿಗೆ ಪ್ರತಿ ವರ್ಷ ನಡೆಯಲಿದೆ ಬೋರ್ಡ್ ಎಕ್ಸಾಂ; ಮಾರ್ಗಸೂಚಿ ಪ್ರಕಟ

Share the Article

5-8 School Board Exam : ಪ್ರಸ್ತುತ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಪ್ರಕಾರ 5 ಮತ್ತು 8ನೇ ತರಗತಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಈಗಾಗಲೇ ಕಳೆದ ಶೈಕ್ಷಣಿಕ ಸಾಲಿನ ಕೊನೆಯ ಅವಧಿಯಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಂಡು, ಶಿಕ್ಷಣ ಇಲಾಖೆ ನಂತರ ಮೌಲ್ಯಾಂಕನ ನಡೆಸಲು ಮುಂದಾಗಿ ಗೊಂದಲ ಮೂಡಿಸಿತ್ತು.

ಆದರೆ ಪ್ರಸ್ತುತ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಲ್ಲಿಯೇ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಬೋರ್ಡ್ ಪರೀಕ್ಷೆ (5-8 School Board Exam)ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಮುಖ್ಯವಾಗಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ರಾಜ್ಯ ಪಠ್ಯಕ್ರಮದ ಪ್ರಕಾರ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕೊಡಲಾಗುವುದು. ಈ ಪ್ರಶ್ನೆ ಪತ್ರಿಕೆ ಆಧರಿಸಿ ಶಾಲೆಗಳು ಮಕ್ಕಳಿಗೆ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

 

ಇದನ್ನು ಓದಿ : Akshaya Tritiya : ಈ ವರ್ಷದಲ್ಲಿ ಅಕ್ಷಯ ತೃತೀಯ ಎಂದು? ದಿನಾಂಕ, ಸಮಯದ ಸಂಪೂರ್ಣ ಮಾಹಿತಿ!

Leave A Reply