Cover the Airport: ವಿಮಾನ ನಿಲ್ದಾಣವನ್ನು ಬಟ್ಟೆಯಿಂದ ಮುಚ್ಚಿ, ಅದು ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದ ರಾಜ್ಯ ಕಾಂಗ್ರೆಸ್ !

Cover the AirPort: ವಿಮಾನ ನಿಲ್ದಾಣವನ್ನು ಬಟ್ಟೆಯಿಂದ ಮುಚ್ಚಬೇಕು (Cover the Airport), ಚುನಾವಣಾ ನೀತಿ ಸಂಹಿತೆಯ (Election Code of Conduct) ಸ್ಪಷ್ಟ ಉಲ್ಲಂಘನೆ ಆಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ವಿಚಿತ್ರ ಅನ್ನಿಸುವ ಮನವಿಯನ್ನು ಚುನಾವಣಾ ಆಯೋಗಕ್ಕೆ (Election Commission) ಮಾಡಿದೆ. ವಿಮಾನ ನಿಲ್ದಾಣಕ್ಕೂ ಚುನಾವಣೆಯ ನೀತಿಸಂಹಿತೆಗೂ ಏನು ಸಂಬಂಧ ಅಂತೀರಾ ? ಈ ಪೋಸ್ಟ್ ಓದಿ.

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Shimoga Airport) ನೂತನವಾಗಿ ಉದ್ಘಾಟನೆಯಾಗಿರುವ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಚಿಹ್ನೆಯಾಗಿರುವ ಕಮಲದ ಆಕಾರದಲ್ಲಿದೆ. ಈ ಕಟ್ಟಡ ಪ್ರಾರಂಭವಾದಾಗಲು ಸಹ ಬಿಜೆಪಿ ಚಿಹ್ನೆ ಕಮಲವನ್ನು ಪ್ರತಿನಿಧಿಸಬಾರದು ಎಂದು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಹೋರಾಟ ಮಾಡಿದ್ದವು. ಆದರೆ ಕಮಲದ ಚಿಹ್ನೆಯನ್ನು ಹಾಗೆ ಉಳಿಸಿಕೊಳ್ಳಲಾಗಿತ್ತು.

ಈಗ ಇದು ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆಗೆ ಅಡ್ಡಿ ಬರುತ್ತದೆ ಎಂದು ಮನವಿದಾರರು ದೂರಿದ್ದು, ವಿಮಾನ ನಿಲ್ದಾಣವನ್ನು ಬಟ್ಟೆಯಿಂದ ಮುಚ್ಚುವಂತೆ ಆಗ್ರಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಈ ವಿಮಾನ ನಿಲ್ದಾಣವನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಆದ್ದರಿಂದ ಚುನಾವಣಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಎಲ್ಲಾ ಭಾಗವನ್ನು ಮುಚ್ಚಬೇಕು, ನೀತಿಸಂಹಿತೆಯನ್ನು ಕಾಪಾಡಬೇಕು. ಒಂದು ಪಕ್ಷ ಜಿಲ್ಲಾಡಳಿತ ಅಥವಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೆಪಿಸಿಸಿ ವತಿಯಿಂದಲೇ ಅದನ್ನು ಮುಚ್ಚಲಾಗುವುದು ಎಂದು ಕಾಂಗ್ರೆಸ್ ನಾಯಕರುಗಳು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ ಕೆಎಸ್‌ಆರ್ಟಿಸಿ ಸರ್ಕಾರಿ ಬಸ್ಸು ಗಳ ಮೇಲೆ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದ ಮಂತ್ರಿಗಳ ಮುಖವಿರುವ ಜಾಹಿರಾತುಗಳು ಇವೆ. ಜೊತೆಗೆ ಹಲವು ಸ್ಟಿಕ್ಕರ್ ಗಳು ರಾರಾಜಿಸುತ್ತಿವೆ. ಇದು ಕೂಡ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಈ ಕೂಡಲೇ ಬಸ್ ಗಳ ಮೇಲಿರುವ ಬಿಜೆಪಿ ನಾಯಕರುಗಳ ಭಾವಚಿತ್ರದ ಬರಹಗಳನ್ನು ತೆಗೆದುಹಾಕಬೇಕು ಎಂದು ಆ ಮನವಿಯಲ್ಲಿ ಆಗ್ರಹಿಸಲಾಗಿದೆ.

Leave A Reply

Your email address will not be published.