Best Recharge Plans: ಡೇಟಾ ಖಾಲಿ ಆಗಿದ್ದರೆ, ಈ ಹೊಸ 181 ರೂ. ಪ್ಲಾನ್ ಹೆಚ್ಚು ಪ್ರಯೋಜನಕಾರಿ!

Best Recharge Plans: ಟೆಲಿಕಾಮ್ ಕಂಪನಿಗಳಲ್ಲಿ (Telicom Company) ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ವನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ (Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ. ಇದರ ನಡುವೆ, ಭಾರತೀಯ ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ (Vi) ಹೊಸ ಪ್ಲ್ಯಾನ್‌(Best Recharge Plans) ಮೂಲಕ ಮತ್ತೆ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.

ವಿ 181ರೂ. ಡೇಟಾ ವೋಚರ್‌ ಪ್ಲ್ಯಾನ್‌ (Vi 181 Data Voucher Plan)

ವಿ ಟೆಲಿಕಾಂ ನೂತನವಾಗಿ ವಿ 181ರೂ. ಗಳ ಡೇಟಾ ವೋಚರ್‌ ಪ್ಲ್ಯಾನ್‌ಯೊಂದನ್ನು ಲಾಂಚ್ ಆಗಿದ್ದು, ಇದು 4G ಡೇಟಾ ರೀಚಾರ್ಜ್‌ ಪ್ಲ್ಯಾನ್ ಆಗಿದೆ. ಈ ಯೋಜನೆಯು ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಪ್ರತಿದಿನ ಡೇಟಾ ಸೌಲಭ್ಯವನ್ನು ಒಳಗೊಂಡಿದೆ. ಈ ಯೋಜನೆಯು ಒಟ್ಟು 30 ದಿನಗಳ ವ್ಯಾಲಿಡಿಟಿ ಅನ್ನು ಹೊಂದಿದೆ. ಈ ಯೋಜನೆಯಲ್ಲಿ ಬಳಕೆದಾರರು ಸಂಪೂರ್ಣ ವ್ಯಾಲಿಡಿಟಿ ಅವಧಿಗೆ 1GB ದೈನಂದಿನ ಡೇಟಾವನ್ನು ಆನಂದಿಸಬಹುದು. 4G ಡೇಟಾ ಅಗತ್ಯ ಇರುವ ಗ್ರಾಹಕರಿಗೆ ಈ ಯೋಜನೆ ಪ್ರಯೋಜನ ನೀಡಬಲ್ಲದು. ಈ ಯೋಜನೆಯನ್ನು ಅಧಿಕೃತ ವಿ ಟೆಲಿಕಾಂ ಆಪ್‌ ಮೂಲಕ ರೀಚಾರ್ಜ್ ಮಾಡಬಹುದಾಗಿದೆ. ದೈನಂದಿನ 1GB ಡೇಟಾ ಮುಗಿದರೆ, ಅದು ದಿನದ ಕೊನೆಯಲ್ಲಿ ಮರುಹೊಂದಿಸಲಾಗುತ್ತದೆ.

ವಿ ಟೆಲಿಕಾಂನ 2899 ರೂ. ಪ್ರೀಪೇಯ್ಡ್‌ ಪ್ಲಾನ್ : ವಿ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲ್ಯಾನ್( Vi Prepaid Plans) ವಾರ್ಷಿಕ ಅವಧಿಯ ಯೋಜನೆಯಾಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿದ್ದು, ವಿ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ, ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡ ಲಭ್ಯವಾಗುತ್ತದೆ. ಇದರೊಂದಿಗೆ ಹೆಚ್ಚುವರಿ ಯಾಗಿ ಈ ಯೋಜನೆ ಯಲ್ಲಿ ಗ್ರಾಹಕರಿಗೆ 75 GB ಡೇಟಾ ಪ್ರಯೋಜನ ಕೂಡ ಲಭ್ಯವಾಗಲಿದೆ. ಇದರ ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಕೂಡ ದೊರೆಯಲಿದೆ.

ವಿ ಟೆಲಿಕಾಂನ 1499ರೂ. ಪ್ರೀಪೇಯ್ಡ್‌ ಪ್ಲ್ಯಾನ್ : ವಿ ಟೆಲಿಕಾಂನ ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರ ಜೊತೆಗೆ ಯಾವುದೇ ನೆಟವರ್ಕ್ ಗಳಿಗೆ ಅನಿಯಮಿತ ಉಚಿತ ಕರೆ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ (Sms) ಪ್ರಯೋಜನವನ್ನು ಹೊಂದಿದೆ. ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಗ್ರಾಹಕರಿಗೆ 50 GB ಡೇಟಾ ಪ್ರಯೋಜನ ದೊರೆಯಲಿದ್ದು ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಕೂಡ ದೊರೆಯಲಿದೆ.

ವಿ ಟೆಲಿಕಾಂ 601ರೂ. ಪ್ರಿಪೇಯ್ಡ್‌ ಪ್ಲಾನ್‌ : ವಿ ಟೆಲಿಕಾಂನ 601 ರೂ. ಪ್ರಿಪೇಯ್ಡ್‌ ಪ್ಲಾನ್‌ ಒಂದು ವರ್ಷದವರೆಗೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಹೊಂದಿದೆ. ಈ ಪ್ರಿಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇದು ಅನಿಯಮಿತ ಕರೆ, ದಿನನಿತ್ಯ 3 GB ಡೇಟಾ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್‌ (Sms) ಪ್ರಯೋಜನ ಹೊಂದಿದೆ. ಹೆಚ್ಚುವರಿಯಾಗಿ 16 GB ಡೇಟಾ ಸೌಲಭ್ಯ ಹೊಂದಿದ್ದು, ಇದಲ್ಲದೆ ವಿ ಆಪ್ಸ್‌ ಹಾಗೂ ಡೇಟಾ ರೋಲ್‌ ಓವರ್‌ ಸೌಲಭ್ಯ ಕೂಡ ದೊರೆಯಲಿದೆ.

ಇದನ್ನೂ ಓದಿ : Renault KWID 800cc car Discontinue : ತೆರೆಮರೆಗೆ ಸರಿದ ಪ್ರಸಿದ್ದ ರೆನಾಲ್ಟ್ ಕ್ವಿಡ್ 800ಸಿಸಿ ಕಾರು

1 Comment
  1. nimabi says

    Thank you very much for sharing, I learned a lot from your article. Very cool. Thanks. nimabi

Leave A Reply

Your email address will not be published.