Home Business RBI Repo Rate : ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ RBI!!!

RBI Repo Rate : ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ಕೊಟ್ಟ RBI!!!

RBI Repo Rate

Hindu neighbor gifts plot of land

Hindu neighbour gifts land to Muslim journalist

RBI Repo Rate: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ದೇಶದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಸಾಲದ ಮೇಲಿನ ಬಡ್ಡಿ ದರವೇ ರೆಪೋ ರೇಟ್. ವಾಣಿಜ್ಯ ಬ್ಯಾಂಕುಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತವೆ. ಈ ಹಣಕ್ಕೆ ಬಡ್ಡಿ ನೀಡುವ ದರ ಇದಾಗಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್(Shaktikanta Das)ರೆಪೊ ದರವನ್ನು ಶೇ.6.5ರಲ್ಲೇ ಮುಂದುವರಿಸಲು ವಿತ್ತೀಯ ನೀತಿ ಸಮಿತಿ ಸರ್ವಾನುಮತದ ಅನುಸಾರ ತೀರ್ಮಾನ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 2022-23ರಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.7 ಆಗಲಿದೆ ಎಂದು ಆರ್‌ಬಿಐ(RBI)ಅಂದಾಜಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದು, ರೆಪೊ ದರವನ್ನು(RBI Repo Rate) ಶೇ.6.5ರಲ್ಲೇ ಮುಂದುವರಿಸಲು ವಿತ್ತೀಯ ನೀತಿ ಸಮಿತಿ ಸರ್ವಾನುಮತದಿಂದ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ. ಆರ್ಥಿಕತೆಯ ಬೆಳವಣಿಗೆಯನ್ನು ಮುಂದುವರಿಸಲು, ರೆಪೊ ದರವನ್ನು ಹಿಂದಿನ ರೀತಿಯಂತೆಯೇ ಉಳಿಸಿಕೊಳ್ಳಲಾಗಿದೆ. ಅವಶ್ಯಕವೆನಿಸಿದರೆ ಪರಿಸ್ಥಿತಿಗೆ ಅನುಸಾರ ಕ್ರಮ ಕೈಗೊಳ್ಳುವ ಸಾಧ್ಯತೆ ಕೂಡ ಇದೆ ಎಂದು ಇದೇ ಸಂದರ್ಭದಲ್ಲಿ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.

ದಿನಂಪ್ರತಿ ಏರುತ್ತಿರುವ ಬಡ್ಡಿ ದರದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಮಾಡಿದ ಬಳಿಕ ಆರ್‌ಬಿಐ ರೆಪೊ ದರದಲ್ಲಿ (RBI Repo Rate)ಯಾವುದೇ ಬದಲಾವಣೆ ಮಾಡಿಲ್ಲ.ಆರ್‌ಬಿಐನಿಂದ ರೆಪೊ ದರವನ್ನು ಕೇವಲ 6.5 ಪ್ರತಿಶತದಲ್ಲಿಯೇ ಉಳಿಸಿಕೊಳ್ಳಲಾಗಿದೆ. ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಮಾಹಿತಿಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಹಿತಿ ನೀಡಿದ್ದಾರೆ.

ಆರ್‌ಬಿಐ ಗವರ್ನರ್ ಹಣದುಬ್ಬರ ದರ ಹೆಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದು, ಮೇ 2022 ರಿಂದ, ಕೇಂದ್ರ ಬ್ಯಾಂಕ್ ರೆಪೊ ದರವನ್ನು 2.5 ಪ್ರತಿಶತದಷ್ಟು ಹೆಚ್ಚಿಸಿದೆ. ಹಣದುಬ್ಬರ ದರವನ್ನು ಹೆಚ್ಚಿಸದ ಕಾರಣ, ಮೇ 2022 ರಿಂದ ಪ್ರಾರಂಭವಾದ ಬಡ್ಡಿದರವನ್ನು(Intrest Rate)ಹೆಚ್ಚಿಸುವ ಪ್ರಕ್ರಿಯೆಯು ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬ್ಯಾಂಕಿಂಗ್ (Banking)ಮತ್ತು ಎನ್‌ಬಿಎಫ್‌ಸಿ ಹಣಕಾಸು ವ್ಯವಸ್ಥೆ ಬಲಿಷ್ಠವಾಗಿದೆ ಎಂದು ಇದೇ ವೇಳೆ ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.