Karnataka Polls: ಚುನಾವಣಾ ನೀತಿ ಸಂಹಿತೆ : ಎಷ್ಟು ಹಣ, ಉಡುಗೊರೆ ಒಯ್ಯಬಹುದು?

Karnataka Polls : ಈಗಾಗಲೇ ಚುನಾವಣಾ ಕಾವು ಎಲ್ಲೆಡೆ ರಂಗೇರಿದ್ದು, ರಾಜಕೀಯ ಪಕ್ಷಗಳು ಜನರ ಮನವೊಲಿಸುವ ಪ್ರಯತ್ನಕ್ಕೆ ಲಗ್ಗೆ ಇಟ್ಟು ಮತಬೇಟೆಗೆ ನಾನಾ ತಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಚುನಾವಣಾ ನೀತಿ ಸಂಹಿತೆ (Karnataka Polls) ಜಾರಿಯಲ್ಲಿದ್ದು, ಈ ಸಂದರ್ಭ ಎಷ್ಟು ನಗದು ಇಟ್ಟುಕೊಳ್ಳಬಹುದು? ಎಷ್ಟು ಮೌಲ್ಯದ ಉಡುಗೊರೆಗಳನ್ನು ಒಯ್ಯಬಹುದು ಎಂಬ ಸಂದೇಹ ಮೂಡುವುದು ಸಹಜ. ಇದಕ್ಕೆ ಚುನಾವಣಾ ಆಯೋಗ ನೀಡಿರುವ ಮಾಹಿತಿ ಹೀಗಿದೆ.

ರಾಜ್ಯ ವಿಧಾನಸಭೆ ಚುನಾವಣೆ (Karnataka Assembly election 2023) ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ (Election Code Of conduct) ಜಾರಿಗೆ ಬಂದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ, ಕೇವಲ ಒಂದು ವಾರದಲ್ಲಿ ಬರೋಬ್ಬರಿ 69.3 ಕೋಟಿ ಮೌಲ್ಯದ ಸ್ವತ್ತು, ನಗದನ್ನು (Money)ಚುನಾವಣಾ ಕರ್ತವ್ಯನಿರತ ಅಧಿಕಾರಿಗಳು ಹಾಗೂ ಪೊಲೀಸರು (Police)ಜಪ್ತಿ ಮಾಡಿಕೊಂಡಿದ್ದಾರೆ ಇದರ ನಡುವೆಯೇ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಆಭರಣ, ಹೆಂಡ, ಹಣದ ಸುರಿಮಳೆಗೈಯುವ ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ, ಇದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ, ಗಡಿ ಪ್ರದೇಶಗಳಲ್ಲಿ ಚೆಕ್​ ಪೋಸ್ಟ್​​ಗಳನ್ನು(Check Post) ತೆರೆಯಲಾಗಿದೆ. ದಾಖಲೆಗಳು (Documents)ಇಲ್ಲದೇ ಒಯ್ಯುವ ಆಭರಣ(Gold), ಹಣ ಜೊತೆಗೆ ಇನ್ನಾವುದೇ ವಸ್ತುಗಳಿದ್ದರೂ ಕೂಡ ಜಪ್ತಿ ಮಾಡಲಾಗುತ್ತದೆ. ಈ ಸಂದರ್ಭ ಹಾಗಿದ್ದರೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಎಷ್ಟು ಮೊತ್ತದ ಹಣ ಒಯ್ಯಲು ಅವಕಾಶವಿದೆ ಎಂಬ ಪ್ರಶ್ನೆ ಕಾಡುತ್ತದೆ.

ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಚುನಾವಣಾ ಆಯೋಗ 50,000 ರೂ. ಮೇಲ್ಪಟ್ಟ ನಗದನ್ನು ಒಯ್ಯುವುದು ಕಂಡುಬಂದರೆ ವಶಪಡಿಸಿಕೊಳ್ಳುವಂತೆ ವಾರ್ನಿಂಗ್ ನೀಡಿದೆ. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷದ ನಾಯಕರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡುವಂತೆ ಕೂಡ ಸೂಚನೆ ನೀಡಲಾಗಿದೆ.

ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ 50,000 ರೂ. ಮೇಲ್ಪಟ್ಟ ನಗದನ್ನು ಒಯ್ಯುವುದು ಅನಿವಾರ್ಯ ಎಂದಾದರೆ ಅದಕ್ಕೆ ಸೂಕ್ತ ದಾಖಲೆ ಇಲ್ಲವೇ ಪುರಾವೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೆ ಹಣದ ಮೂಲ ಕೇಳಿದರೆ, ಅದಕ್ಕೂ ಕೂಡ ಸೂಕ್ತ ವಿವರ ನೀಡಬೇಕಾಗುತ್ತದೆ. ಅನ್ಯಥಾ ಸಮಸ್ಯೆ ಎದುರಾಗುವುದನ್ನು ತಡೆಯಲು, ನಗದು ಹಿಂಪಡೆದ ಮತ್ತು ಅದನ್ನು ಸಾಗಿಸುವ ವ್ಯಕ್ತಿಗಳು ತಮ್ಮ ಪಾಸ್‌ಬುಕ್‌ಗಳನ್ನು ಪುರಾವೆಯಾಗಿ ಜೊತೆಗಿರಿಸಿಕೊಳ್ಳಬೇಕಾಗುತ್ತದೆ. ಖಾಸಗಿ ವ್ಯಕ್ತಿಗಳು ಮತ್ತು ಉದ್ಯಮಿಗಳಾಗಿದ್ದರೆ, ವ್ಯಾಪಾರದ ದಾಖಲೆಗಳು ಮಾತ್ರವಲ್ಲದೆ ಸಾಗಾಟಕ್ಕೆ ಅನುಮತಿ ಪಡೆದ ಪ್ರಮಾಣಪತ್ರವನ್ನು ಜೊತೆಗಿರಿಸಿಕೊಳ್ಳಬೇಕಾಗುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಸಾಗಿಸುವ ಯಾವುದೇ ವ್ಯಕ್ತಿಯಾದರೂ ಅದರ ಮೂಲ ಮತ್ತು ಎಲ್ಲಿಗೆ ಒಯ್ಯಾಗುತ್ತಿದೆ. ಯಾಕೆ ಕೊಂಡೊಯ್ಯಲಾಗುತ್ತದೆ ಎಂಬ ವಿವರ ನೀಡಬೇಕಾಗುತ್ತದೆ ಎಂದು ಚುನಾವಣಾ ಆಯೋಗದ ಮಾರ್ಗಸೂಚಿ ತಿಳಿಸಿದೆ.

ಚುನಾವಣಾ ಆಯೋಗ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, 50,000 ರೂ.ವರೆಗಿನ ನಗದು ಅಥವಾ ಉಡುಗೊರೆ ಸಾಮಗ್ರಿಗಳನ್ನು ಯಾರು ಬೇಕಾದರೂ ಒಯ್ಯಬಹುದು. ಇದಕ್ಕಿಂತ ಕಡಿಮೆ ಮೊತ್ತದ ನಗದು ಅಥವಾ ಉಡುಗೊರೆ ಸಾಗಿಸುವುದಾದರೆ, ಅದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಬೇಕಾದ ಅವಶ್ಯಕತೆ ಇಲ್ಲ. ಆದರೆ, 50,000 ರೂ. ಮೇಲ್ಪಟ್ಟ ನಗದು ಅಥವಾ 10,000 ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆ ವಸ್ತುಗಳನ್ನು ಒಯ್ಯುವಾಗ ಅದಕ್ಕೆ ಸೂಕ್ತವಾದ ದಾಖಲೆಗಳನ್ನು ಹೊಂದಿರಬೇಕು.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭ ಸೂಕ್ತ ವಿವರಣೆ ಅಥವಾ ದಾಖಲೆ ಇಲ್ಲದೆ 50,000 ರೂ. ಗಳಿಗೂ ಮೇಲ್ಪಟ್ಟ ನಗದನ್ನು ವಶಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ, ಚುನಾವಣೆ ಉದ್ದೇಶಕ್ಕಲ್ಲ ಎಂಬುದು ಸಾಬೀತಾದರೆ ಅದನ್ನು ವಾರಸುದಾರರಿಗೆ ಮರಳಿಸಲಾಗುತ್ತದೆ. ಆದರೆ, ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಲಕ್ಷಗಟ್ಟಲೇ ಮೊತ್ತವಾಗಿದ್ದರೆ, ಅಂದರೆ 10 ಲಕ್ಷ ರೂ.ಗಳಿಗೂ ಹೆಚ್ಚಿನ ಮೊತ್ತವಾದರೆ, ಚುನಾವಣಾ ಅಧಿಕಾರಿಗಳು ಇಲ್ಲವೇ ಪೊಲೀಸರು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ತರುತ್ತಾರೆ. ಸಾಮಾನ್ಯವಾಗಿ ಮೇಲ್ಪಟ್ಟ ನಗದು ವಶಪಡಿಸಿಕೊಂಡಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಆ ಬಳಿಕ, ಐಟಿ ಅಧಿಕಾರಿಗಳು ಆ ಬಗ್ಗೆ ತನಿಖೆ ಮಾಡುತ್ತಾರೆ. ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿದರೆ ಮಾತ್ರವೇ ಜಪ್ತಿ ಮಾಡಿದ ಹಣವನ್ನು ಮರಳಿಸಲಾಗುತ್ತದೆ.

ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ, ಸಾಮಾನ್ಯ ದಿನಗಳಲ್ಲಿಯೂ ಮನೆಯಲ್ಲಿ ನಗದು ಇಟ್ಟುಕೊಳ್ಳುವ ವಿಚಾರವಾಗಿ ಆದಾಯ ತೆರಿಗೆ ಕಾಯ್ದೆಯಲ್ಲಿ ಉಲ್ಲೇಖದಲ್ಲಿ ಮಾಹಿತಿ ನೀಡಿದೆ. ಹೆಚ್ಚು ಮೊತ್ತದ ನಗದು ಮನೆಯಲ್ಲಿ ಇದ್ದರೆ ಅದರ ಮೂಲದ ಬಗ್ಗೆ ನಿಖರ ಮಾಹಿತಿ ಮತ್ತು ದಾಖಲೆಗಳನ್ನು ಒಳಗೊಂಡಿರುವುದು ಅವಶ್ಯಕ. ಒಂದು ವೇಳೆ ಮನೆಯಲ್ಲಿರುವ ಹಣದ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ದಾಖಲೆ ಕೇಳಿದಲ್ಲಿ ನೀಡಬೇಕಾಗಿದ್ದು, ಎಲ್ಲ ದಾಖಲೆಗಳನ್ನು ಹೊಂದಿದ್ದು, ಐಟಿ ರಿಟರ್ನ್ಸ್ ಸಲ್ಲಿಸಿದ್ದರೆ ಚಿಂತಿಸುವ ಅಗತ್ಯವಿಲ್ಲ. ಇಲ್ಲ ಎಂದಾದರೆ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ(CBI)ಸಂಸ್ಥೆಗಳು ಇವರ ವಿರುದ್ಧ ಕ್ರಮ ನೇರ ತೆರಿಗೆಗಳ ಕೇಂದ್ರ ಮಂಡಳಿ ಇಲ್ಲವೇ ಸಿಬಿಡಿಟಿ ನಿಯಮಗಳು ಹೇಳುವ ಅನುಸಾರ, ಮನೆಯಲ್ಲಿರುವ ಭಾರೀ ಮೊತ್ತದ ನಗದಿನ ಮೂಲವನ್ನು ಸಂಬಂಧಪಟ್ಟ ಸಂಸ್ಥೆಗೆ ತಿಳಿಸಲು ವಿಫಲವಾದಲ್ಲಿ ಶೇ 137ರಷ್ಟು ದಂಡ ಪಾವತಿ ಮಾಡಬೇಕಾಗುತ್ತದೆ.

 

ಇದನ್ನು ಓದಿ : Rain Alert : ಇಂದಿನಿಂದ 5 ಜಿಲ್ಲೆಗಳಲ್ಲಿ ಭಾರೀ ವರುಣಾರ್ಭಟ;

Leave A Reply

Your email address will not be published.