Home Education Board Exam for class 5 and 8 : 5, 8ನೇ ತರಗತಿಯ ಮೌಲ್ಯಾಂಕನ...

Board Exam for class 5 and 8 : 5, 8ನೇ ತರಗತಿಯ ಮೌಲ್ಯಾಂಕನ ದಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವ ರೂಲ್ಸ್ ಇಲ್ಲ!

Board Exam for class 5 and 8

Hindu neighbor gifts plot of land

Hindu neighbour gifts land to Muslim journalist

Board-Exam for class 5 and 8 : ಈಗಾಗಲೇ ಮಾರ್ಚ್ 27 ರಿಂದ ಏಪ್ರಿಲ್ 1 ರವರೆಗೆ, ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ಮಕ್ಕಳಿಗೆ ( Board-Exam for class 5 and 8 ) ರಾಜ್ಯಾದ್ಯಾಂತ ಮೌಲ್ಯಾಂಕನವನ್ನು ನಡೆಸಲಾಗಿದೆ.

ಮೌಲ್ಯಾಂಕನ ಪರೀಕ್ಷೆಗಳನ್ನು 40 ಅಂಕಗಳ ಲಿಖಿತ ಮೌಲ್ಯಂಕನ ಮತ್ತು ಶಾಲಾ ಹಂತದಲ್ಲಿ 10 ಅಂಕಗಳ ಮೌಖಿಕ ಮೌಲ್ಯಾಂಕನದಲ್ಲಿ ನಡೆಸಲಾಗಿದೆ. ಒಟ್ಟಾರೆ 50 ಅಂಕಗಳಲ್ಲಿ ವಿದ್ಯಾರ್ಥಿ ಗಳಿಸಿ ಅಂಕಗಳನ್ನು 20 ಅಂಕಗಳಿಗೆ ಪರಿವರ್ತಿಸಿ ಗ್ರೇಡ್ ನೀಡಲಾಗುತ್ತದೆ.

ಸದ್ಯ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿ ಮಕ್ಕಳಿಗೆ ನಡೆಸಿರುವ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ನಿಗಿದ ಮಾಡಿದೆ.

ಒಟ್ಟಿನಲ್ಲಿ ಈ ಮೌಲ್ಯಾಂಕನವನ್ನು ವಾರ್ಷಿಕ ಪರೀಕ್ಷೆಯಾಗಿ ಪರಿಗಣಿಸಿಲ್ಲ. ಬದಲಾಗಿ ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕಾ ನ್ಯೂನ್ಯತೆ ಮತ್ತು ವಿಷಯ ಕಲಿಕೆಯಲ್ಲಿ ಎಷ್ಟು ಪ್ರಮಾಣದಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯುವುದಕ್ಕಾಗಿ ಮೌಲ್ಯಾಂಕನವನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ ಎಂಬ ಸೂಚನೆ ನೀಡಿದ್ದು, ಫಲಿತಾಂಶವನ್ನು ಸಂಬಂಧಿಸಿದ ವಿದ್ಯಾರ್ಥಿ ಹಾಗೂ ಪಾಲಕರಿಗೆ ಮಾತ್ರ ತಿಳಿಸಲಾಗುತ್ತಿದೆ ಎಂಬ ಮಾಹಿತಿ ತಿಳಿಸಲಾಗಿದೆ.