Home National PPF Intrest: ಪಿಪಿಎಫ್ ಖಾತೆ ಹೊಂದಿದ್ದರೆ ಈ ಮಾಹಿತಿ ನಿಮಗಾಗಿ! ಈ ರೀತಿಯ ಅವಕಾಶ ಮತ್ತೆ...

PPF Intrest: ಪಿಪಿಎಫ್ ಖಾತೆ ಹೊಂದಿದ್ದರೆ ಈ ಮಾಹಿತಿ ನಿಮಗಾಗಿ! ಈ ರೀತಿಯ ಅವಕಾಶ ಮತ್ತೆ ಸಿಗುವುದಿಲ್ಲ!

PPF Intrest

Hindu neighbor gifts plot of land

Hindu neighbour gifts land to Muslim journalist

PPF Intrest : ಪ್ರತಿಯೊಬ್ಬ ವ್ಯಕ್ತಿಯು ತನ್ನ ಭವಿಷ್ಯದ(Future) ಬಗ್ಗೆ ಚಿಂತಿಸುವುದಲ್ಲದೆ ಮುಂದೆ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗದಂತೆ ಹಾಗೂ ತಮ್ಮ ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ನಿಶ್ಚಿಂತೆಯಿಂದ ಕಳೆಯಲು ಬಯಸುವುದು ಸಹಜ. ಪಿಪಿಎಫ್‌(PPF) ಅಥವಾ ‘ಸಾರ್ವಜನಿಕ ಭವಿಷ್ಯ ನಿಧಿ ಖಾತೆ’ ಅನ್ನುವುದು ಜನಪ್ರಿಯ ಉಳಿತಾಯ ಯೋಜನೆಯಾಗಿದ್ದು, ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿ (80C)ಅನ್ವಯ ಆದಾಯ ತೆರಿಗೆ ವಿನಾಯಿತಿಗೂ ಅವಕಾಶವಿದೆ.

PPF ಯೋಜನೆಯ ನಿಯಮಗಳ ಪ್ರಕಾರ, ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಆದರೆ ಹೂಡಿಕೆದಾರ ಖಾತೆಗೆ ಹಣಕಾಸು ವರ್ಷದ ಕೊನೆಯಲ್ಲಿ ಅಂದರೆ ಮಾರ್ಚ್ 31 ರಂದು ಜಮಾ ಮಾಡಲಾಗುತ್ತದೆ. ಏಪ್ರಿಲ್ 1 ರಿಂದ ಏಪ್ರಿಲ್ 5 ರ ನಡುವೆ 1.5 ಲಕ್ಷವನ್ನು ಠೇವಣಿ ಮಾಡಿದಲ್ಲಿ ತಿಂಗಳ ಐದನೇ ತಾರೀಖಿನ ಮೊದಲು ಮಾಡಿದ ಹೂಡಿಕೆ ಮೇಲೆ ನೀಡಲಾಗುವ ಹೆಚ್ಚಿನ ಬಡ್ಡಿಯನ್ನು ಪಡೆಯಬಹುದು. ಆದ್ದರಿಂದ, ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡುತ್ತಿದ್ದರೆ, ಹೆಚ್ಚಿನ ಬಡ್ಡಿಯನ್ನು ಪಡೆಯಬೇಕಾದರೆ ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಬೇಕಾಗುತ್ತದೆ.

ಹೂಡಿಕೆದಾರರು PPF ಖಾತೆಗಳ ಮೇಲಿನ ಬಡ್ಡಿದರವನ್ನು(PPF Intrest) ತಿಂಗಳ ಐದನೇ ದಿನ ಮತ್ತು ತಿಂಗಳ ಕೊನೆಯ ದಿನದ ನಡುವಿನ ಕನಿಷ್ಟ ಬ್ಯಾಲೆನ್ಸ್‌ನಲ್ಲಿ ಲೆಕ್ಕ ಮಾಡಲಾಗುತ್ತದೆ. ಹೀಗಾಗಿ, ಪ್ರತಿ ತಿಂಗಳ 5 ನೇ ತಾರೀಕಿನ ಮೊದಲು ಹಣವನ್ನು ಠೇವಣಿ ಮಾಡಿದ ಸಂದರ್ಭ ಇಡೀ ತಿಂಗಳಿಗೆ ಬಡ್ಡಿಯನ್ನು ಪಡೆಯಬಹುದು. ಆದರೆ, ತಿಂಗಳ ಐದನೇ ದಿನದ ನಂತರ ಠೇವಣಿ ಮಾಡಿದರೆ ಆ ನಿರ್ದಿಷ್ಟ ತಿಂಗಳಿಗೆ ಗಣನೀಯ ಬಡ್ಡಿ ಆದಾಯವನ್ನು ಕಳೆದುಕೊಳ್ಳಬೇಕಾಗುತ್ತದೆ.

ಹೂಡಿಕೆದಾರರು ಏಪ್ರಿಲ್ 5 ರ ಮೊದಲು 1.5 ಲಕ್ಷವನ್ನು ಠೇವಣಿ ಮಾಡಿದಾಗ ಏಪ್ರಿಲ್ 5 ಮತ್ತು ಅದರ ಮೊದಲಿನ ಬ್ಯಾಲೆನ್ಸ್‌ ಮೇಲೆ ಶೇಕಡಾ 7.1 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ಉದಾಹರಣೆಗೆ , ಕನಿಷ್ಠ ಬ್ಯಾಲೆನ್ಸ್ 1.5 ಲಕ್ಷ ರೂ. ನಿಯಮಗಳ ಅನುಸಾರ, ಹೂಡಿಕೆದಾರರು ಹಣಕಾಸು ವರ್ಷದ ಕೊನೆಯಲ್ಲಿ ಏಪ್ರಿಲ್ 5 ರ ಮೊದಲು ಠೇವಣಿ ಮಾಡಿದ 1.5 ಲಕ್ಷ ರೂಪಾಯಿಗಳ ಮೇಲೆ 10,650 ರೂಪಾಯಿಗಳ ಬಡ್ಡಿಯನ್ನು ಗಳಿಸುತ್ತಾರೆ. ಏಪ್ರಿಲ್ 5 ರ ನಂತರ ಈ ಹೂಡಿಕೆ ಮಾಡಿದರೆ ಮೊದಲ ತಿಂಗಳ ಬಡ್ಡಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

PPF ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಸಂಯುಕ್ತ ಬಡ್ಡಿಯ ತತ್ವವನ್ನು ಆಧರಿಸಿದೆ. ಯೋಜನೆಯು 15 ವರ್ಷಗಳ ಲಾಕ್-ಇನ್ ಅವಧಿಯನ್ನು ಒಳಗೊಂಡಿದೆ. ಹೂಡಿಕೆದಾರರು ಪ್ರತಿ ವರ್ಷ ಏಪ್ರಿಲ್ 1 ರಿಂದ ಏಪ್ರಿಲ್ 5 ರ ನಡುವೆ 15 ವರ್ಷಗಳ ಕಾಲ ನಿಯತಕಾಲಿಕವಾಗಿ ಮತ್ತು ವ್ಯವಸ್ಥಿತವಾಗಿ ಹೂಡಿಕೆ ಮಾಡಿದಲ್ಲಿ ಅವರು 15 ವರ್ಷಗಳ ಅಂತ್ಯದಲ್ಲಿ 18,18,209 ರೂಪಾಯಿಗಳನ್ನು ಪಡೆಯಬಹುದು. 40,68,209 ಮೆಚ್ಯೂರಿಟಿ ಮೊತ್ತವನ್ನು ಗಳಿಸಬಹುದು. ಹೂಡಿಕೆದಾರರು 15 ವರ್ಷಗಳವರೆಗೆ ಪ್ರತಿ ಹಣಕಾಸು ವರ್ಷದಲ್ಲಿ ಕೊನೆಯ ಕ್ಷಣದಲ್ಲಿ ಹೂಡಿಕೆ ಮಾಡಿದರೆ, 18,18,209 ರೂ ಬದಲಿಗೆ 15,48,515 ರೂ. ಪಡೆಯುತ್ತಾರೆ. ಮೆಚ್ಯೂರಿಟಿ ಮೊತ್ತವೂ 40,68,209 ರೂಪಾಯಿಗಳ ಬದಲಾಗಿ 37,98,515 ರೂಪಾಯಿಗಳಾಗಿರುತ್ತದೆ.

ಇದನ್ನೂ ಓದಿ: Astro Tips: ನಿಮ್ಮ ಇಷ್ಟಾರ್ಥ ಈಡೇರಬೇಕಾ? ಆರ್ಥಿಕ ಸಮಸ್ಯೆಯಿಂದ ಮುಕ್ತಿಬೇಕಾ? ಇಲ್ಲಿದೆ ನೋಡಿ ತುಳಸಿ ಎಲೆಯಿಂದ ಪರಿಹಾರ!!