Prakash Raj: ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ ’; ನಟ ಸುದೀಪ್ ಅವರು ಬಿಜೆಪಿ ಸೇರ್ತಾರೆ ಅನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ !

Share the Article

Prakash Raj Comment on Supeep BJP entry : ಹಲವು ಮಾಧ್ಯಮಗಳಲ್ಲಿ ನಟ ಸುದೀಪ್​ ( Sudeep Raj) ಅವರು ಬಿಜೆಪಿ ಸೇರುತ್ತಾರೆ ಎಂದು ವರದಿ ಆಗಿತ್ತು. ಈಗ ಅದರ ಬಗ್ಗೆ ಪ್ರಕಾಶ್ ರಾಜ್ (Prakash Raj) ರೀ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದೀಗ ವೈರಲ್ ಆಗಿದೆ.

ಸುದೀಪ್ ಬಿಜೆಪಿ ಸೇರ್ತಾರೆ ಎನ್ನುವ ವಿಚಾರದಲ್ಲಿ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿ, ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದಿದ್ದಾರೆ ಆ ಮೂಲಕ ಕಿಚ್ಚ ಸುದೀಪ್ ನನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.(Prakash Raj reacted to Supeep BJP entry news)

ಸದಾ ಒಂದಿಲ್ಲೊಂದು ವಿಚಾರಕ್ಕೆ ಪ್ರಕಾಶ್ ರಾಜ್ ಅವರು ಸದಾ ಚರ್ಚೆಯ ವಸ್ತು ಆಗುತ್ತಾ ಇರುತ್ತಾರೆ. ಅವರು ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಮುಖ್ಯವಾಗಿ ಅವರು ಬಿಜೆಪಿ ಮತ್ತು ಮೋದಿಯ ವಿರೋಧಿ. ಬಿಜೆಪಿಯನ್ನು, ಬಿಜೆಪಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಅದೇನೇ ಇರಲಿ ಅವರು ಸದಾ ಟೀಕೆ ಮಾಡುತ್ತಾ ಇರುತ್ತಾರೆ. ಈಗ ವಿವಾದಾತ್ಮಕ ಮಾನವ ಪ್ರಕಾಶ್ ಅವರು ಸುದೀಪ್ ಬಗ್ಗೆ ಮಾತನಾಡಿದ್ದಾರೆ.

ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುತ್ತಾರೆ, ಬಿಜೆಪಿ ಸೇರುತ್ತಾರೆ ಎಂಬಿತ್ಯಾದಿ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಸುದೀಪ್ ಜತೆ ಹಲವು ಬಿಜೆಪಿ ನಾಯಕರು ಹಲವು ಸುತ್ತಿನ ಭೇಟಿ, ಮಾತುಕತೆ ನಡೆಸಿದ್ದಾರೆ. ಇವತ್ತು ಮಧ್ಯಾಹ್ನದ ವೇಳೆಗೆ ಈ ಬಗ್ಗೆ ಒಂದು ಸ್ಪಷ್ಟ ಸ್ಪಷ್ಟನೆ ಸಿಗಲಿದೆ. ಸುದೀಪ್ (Sudeep) ಬಿಜೆಪಿ ಸೇರುತ್ತಾರೆಯಾ ಇಲ್ಲವೇ ಗೊತ್ತಿಲ್ಲ, ಆದ್ರೆ ಬಿಜೆಪಿಯನ್ನು ಬೆಂಬಲಿಸುವುದಂತೂ ಸ್ಪಷ್ಟ.

ಈ ವಿಚಾರದಲ್ಲಿ ಪ್ರಕಾಶ್ ರಾಜ್ (Prakash Raj) ಪ್ರತಿಕ್ರಿಯೆ ನೀಡಿದ್ದಾರೆ. ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದಿದ್ದಾರೆ. ಇಂದು ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಕೂಡಾ ಸುದೀಪ್ ಕೂಡ ಭಾಗಿ ಆಗುವ ಸಾಧ್ಯತೆ ಇದೆ. ಈ ವೇಳೆ ಅವರು ತಮ್ಮ ರಾಜಕೀಯ ನಿಲುವು ಏನು ಎಂಬುದನ್ನು ತಿಳಿಸಲಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಪ್ರಕಾರ ಬಿಜೆಪಿ ಪರ ಸುದೀಪ್ ಪ್ರಚಾರ ಮಾಡುತ್ತಿದ್ದಾರಂತೆ. ಕೆಲ ಮಾಧ್ಯಮಗಳಲ್ಲಿ ‘ಸುದೀಪ್​ ಬಿಜೆಪಿ ಸೇರುತ್ತಾರೆ’ ಎಂದು ವರದಿ ಆಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇತರ ಬಿಜೆಪಿ ನಾಯಕರುಗಳೊಂದಿಗೆ ಜತೆಗೇ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಒಂದಂತೂ ನಿಜ ಸುದೀಪ ಅವರು ಬಿಜೆಪಿಯ ಪರವಾಗಿ ಅಲೆಯನ್ನು ಎಬ್ಬಿಸಲು ರೆಡಿಯಾಗಿದ್ದಾರೆ.

ಈ ಬಗ್ಗೆ ಪ್ರಕಾಶ್ ರೈ ಅವರು ಪ್ರತಿಕ್ರಿಯಿಸಿ,‘ಕರ್ನಾಟಕದಲ್ಲಿ ಹತಾಶರಾದ, ಸೋತ ಬಿಜೆಪಿಯಿಂದ ಹರಡಿದ ಸುಳ್ಳು ಸುದ್ದಿ ಇದು ಎಂದು ನಾನು ಬಲವಾಗಿ ನಂಬುತ್ತೇನೆ. ಕಿಚ್ಚ ಸುದೀಪ್ ಪ್ರಜ್ಞಾವಂತ. ಕರ್ನಾಟಕದಲ್ಲಿ ಸೋಲುವ ಭಯದಲ್ಲಿ, ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಇದು. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

I strongly believe this is a Fake news spread by the desperate ,loosing BJP in Karnataka. @KicchaSudeep is far more sensible Citizen to fall prey ..ಕರ್ನಾಟಕದಲ್ಲಿ ಸೋಲುವ ಭಯದಲ್ಲಿ .. ಭ್ರಷ್ಟ BJP ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ .. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ #justasking https://t.co/kIRmFczTIO

— Prakash Raj (@prakashraaj) April 5, 2023

ಪ್ರಕಾಶ್ ರಾಜ್ ವಿರುದ್ಧ ಈಗ ಕಿಚ್ಚ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ‘ಮಾರಿಕೊಳ್ಳುವವರಲ್ಲ’ ಈ ರೀತಿಯ ಪದಬಳಕೆಯ ಅಗತ್ಯ ಏನಿದೆ? ಈ ಥರ ಹೇಳಬೇಡಿ. ಒಂದು ವೇಳೆ ಅವರು ಬಿಜೆಪಿ ಸೇರಿಕೊಂಡರೂ ಅದು ನಿಮಗೆ ಮತ್ತು ಕೆಲವರಿಗೆ ಇಷ್ಟ ಆಗಿಲ್ಲ ಅಂದ್ರೆ, ಅದು ಅವರ ವೈಯಕ್ತಿಕ ನಿರ್ಧಾರ ಆಗಿರುತ್ತದೆ. ಅವರನ್ನು ಅವರು ಮಾರಿಕೊಂಡ ಹಾಗೆ ಹೇಗೆ ಆಗುತ್ತದೆ? ಅದು ಮಾರಿಕೊಂಡ ಹಾಗೆ ಆಗುವುದಿಲ್ಲ.’ ಎಂದು ಅಭಿಮಾನಿಯೋರ್ವ ಸ್ಟ್ರಾಂಗ್ ಆಗಿ ಕಮೆಂಟ್ ಮಾಡಿದ್ದಾನೆ.

https://t.co/kIRmFczTIO

ಇದನ್ನೂ ಓದಿ: Sudeep Private Video: ಸುದೀಪ್ ಖಾಸಗಿ ವೀಡಿಯೋ ಲೀಕ್! ಎರಡೆರಡು ಬೆದರಿಕೆ ಪತ್ರ

Leave A Reply