Weekend with Ramesh: ಟಿವಿ ಶೋನಲ್ಲಿ ಪ್ರತ್ಯಕ್ಷವಾಗಿ ಪ್ರಭುದೇವಾಗೆ ಶಾಕ್ ಕೊಟ್ಟ 2ನೇ ಹೆಂಡತಿ! ಯಾರಾಕೆ..? ಪತಿ ಬಗ್ಗೆ ಹೇಳಿದ್ದೇನು?
Prabhudeva’s 2nd wife : ಕನ್ನಡ ಕ ಕಿರುತೆರೆಯ (Kannada Small screen) ಪ್ರಸಿದ್ಧ ರಿಯಾಲಿಟಿ ಶೋ (Reality Show) ವೀಕೆಂಡ್ ವಿತ್ ರಮೇಶ್(Weekend With Ramesh) ಹಲವು ಕಾರಣಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇದೀಗ ಸೀಸನ್ 5 ಕೂಡ ಶುರುವಾಗಿ ಆರಂಭದಲ್ಲಿಯೇ ಮೊದಲ ಅತಿಥಿ ಮೋಹಕ ತಾರೆ ರಮ್ಯಾಳ ಕಂಗ್ಲಿಷ್ ಮೂಲಕ ವ್ಯಾಪಕವಾದ ಟೀಕೆಗೆ ಗುರಿಯಾಗಿತ್ತು. ಆದರೆ ಬಳಿಕ ಎರಡೇ ಅತಿಥಿಯಾಗಿ ಬಂದ ಪ್ರಭುದೇವ್ ಹಲವರ ಮೆಚ್ಚುಗೆಗೆ ಪಾತ್ರರಾದರು. ಜೊತೆಗೆ ಇದೇ ಶೋನಲ್ಲಿ ವಿಶೇಷ ಅಂತ ಅನಿಸಿದ್ದು, ಪ್ರಭುದೇವರ ಎರಡನೇ ಪತ್ನಿ! ಯಾರು ಈಕೆ? ಪ್ರಭುದೇವ್ ಅವರು ಯಾವಾಗ ಇವರನ್ನು ಮದುವೆ ಆಗಿದ್ದು?
ಅದು 2020ರ ಸಮಯ. ಆಗ ದೇಶದಲ್ಲೆಡೆ ಕೋವಿಡ್ ಉಲ್ಬಣಗೊಂಡಿತ್ತು. ಇದೇ ವೇಳೆ ಮತ್ತೊಂದು ಸುದ್ದಿನೂ ಹರಿದಾಡಿತ್ತು. ಅದೇನೆಂದರೆ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಎರಡನೇ ಮದುವೆಯಾಗಿದ್ದಾರೆ. ಕೋವಿಡ್ ಕಾರಣದಿಂದ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿತ್ತು.
ಹೌದು, ಮುಂಬೈನಲ್ಲಿ(Mumbai) ಫಿಸಿಯೋಥೆರಪಿಸ್ಟ್ ಆಗಿರುವ ವೈದ್ಯೆ ಹಿಮಾನಿಯನ್ನು(Himaniya) ಪ್ರಭುದೇವ್ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಪ್ರಭುದೇವ ಅವರು ತಮ್ಮ ಬ್ಯಾಕ್ ಹಾಗೂ ಕಾಲಿನ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಹೋಗಿದ್ದು, ಈ ವೇಳೆ ಹಿಮಾನಿಯನ್ನು ಕಂಡಿದ್ದರು. ಒಬ್ಬರನ್ನೊಬ್ಬರು ನೋಡಿ ಪರಿಚಯವಾದಾಗ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವಿಷಯವನ್ನು ಪ್ರಭುದೇವ ಸಹೋದರ ರಾಜು ಸುಂದರಂ(Raju Sundaram) ಅವರೇ ಖಚಿತ ಪಡಿಸಿದ್ದರು. ಆದರೆ ಅವರು ಮೊತ್ತ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡು ತಮ್ಮ ಪತಿಯ ಬಗ್ಗೆ ಮಾತನಾಡಿದ್ದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರದಲ್ಲಿಯೇ.
ಹೌದು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಅತಿಥಿಯಾಗಿ ಆಗಮಿಸಿದ್ದ ಪ್ರಭುದೇವ್ ಅವರ ಜರ್ನಿ ಎರಡು ಸಂಚಿಕೆಗಳಲ್ಲಿ ಪ್ರಸಾರ ಆಗಿದೆ. ಪ್ರಭುದೇವ ಜರ್ನಿ ಬಗ್ಗೆ ಗಣ್ಯಾತೀಗಣ್ಯರು ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಕಡೆ ಪ್ರಭುದೇವ ಆತ್ಮೀಯ ಸ್ನೇಹಿತರು, ಕುಟುಂಬ, ತಂದೆ-ತಾಯಿ ಬಂದು ಇಂಡಿಯನ್ ಮೈಕಲ್ ಜಾಕ್ಸನ್ ಬಗ್ಗೆ ಗೊತ್ತಿರದ ಕೆಲವು ವಿಷಯಗಳನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಇದರೊಂದಿಗೆ ಅವರ ಎರಡನೇ (Prabhudeva’s 2nd wife) ಹೆಂಡತಿಯೂ ಪ್ರತ್ಯಕ್ಷ ಆಗಿದ್ದಾರೆ. ವಿವಾಹವಾಗಿ ಮೂರು ವರ್ಷಗಳಾದ ಬಳಿಕ ಎಲ್ಲಿಯೂ ಕಾಣಿಸಿಕೊಳ್ಳದ ಅವರು ತಮ್ಮ ಪತಿಯ ಬಗ್ಗೆ ಇದೇ ಮೊದಲ ಬಾರಿಗೆ ಕನ್ನಡದ ಟಾಕ್ ಶೋನಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.
ಅಂದಹಾಗೆ ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಪ್ರಭುದೇವ ಪತ್ನಿ ಸರ್ಪ್ರೈಸ್ ಎಂಟ್ರಿಕೊಟ್ಟಿದ್ದರು. ನೇರವಾಗಿ ವೇದಿಕೆ ಮೇಲೆ ಬಾರದೇ ಹೋದರೂ, ವಿಡಿಯೋ ಮೂಲಕ ಪತಿಗೆ ಸಂದೇಶವನ್ನು ಕಳುಹಿಸಿಕೊಟ್ಟಿದ್ದರು. ಕಾರ್ಯಕ್ರಮದಲ್ಲಿ ಪ್ರಭುದೇವ್ ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಸಲಾಯಿತು. ಇದಾದ ಬಳಿಕ ಪತ್ನಿ ಹಿಮಾನಿಯ ವಿಡಿಯೋ ರಿಲೀಸ್ ಮಾಡಲಾಯ್ತು.
ವಿಡಿಯೋ ಮೂಲಕ ಮಾತನಾಡಿದ ಹಿಮಾನಿಯ ಅವರು “ಸಾರಿ ಪ್ರಭುಜೀ. ಇವತ್ತು ಅಲ್ಲಿಗೆ ನಾನು ಬರುವುದಕ್ಕೆ ಸಾಧ್ಯವಾಗಿಲ್ಲ. ಆದರೆ, ಕೆಲವು ವಿಷಯಗಳನ್ನು ನಾನು ನಿಮ್ಮ ಬಗ್ಗೆ ಹೇಳಲೇಬೇಕು. ಕಳೆದ ಮೂರು ವರ್ಷಗಳಿಂದ ನಾವು ಜೊತೆಗಿದ್ದೇವೆ. ನಮ್ಮಿಬ್ಬರ ಜರ್ನಿ ಅದ್ಭುತವಾಗಿದೆ. ನಿಮ್ಮಲ್ಲಿ ನನಗೆ ಅದ್ಭುತ ಎನಿಸೋದು, ನಿಮ್ಮ ಶಿಸ್ತು ಹಾರ್ಡ್ವರ್ಕ್. ಹಾಗೂ ನೀವು ಎಂದಿಗೂ ಖುಷಿ ಖುಷಿಯಾಗಿರುವ ವ್ಯಕ್ತಿ . ಹಾಗೆಯೇ ಇರಬೇಕು. ನಿಮಗೆ ಉಡುಗೊರೆಯಾಗಿ ಸಿಕ್ಕಿರುವ ಹಾಸ್ಯ ಪ್ರಜ್ಞೆ, ಎನರ್ಜಿ ನನ್ನನ್ನು ಯಾವಾಗಲೂ ಖುಷಿಯಾಗಿ ಇಟ್ಟಿರುತ್ತೆ. ನಾನು ನಿಮ್ಮನ್ನು ಮದುವೆ ಆಗಿದ್ದು, ಲಕ್ಕಿ ಅಂತ ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಇನ್ನು ಎರಡು ದಿನಗಳ ಕಾಲ ಪ್ರಸಾರವಾದ ಎಪಿಸೋಡ್ನಲ್ಲಿ ಪ್ರಭುದೇವ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ವಾವ್! ನೀವು ಕಣ್ರೀ ನಮ್ಮ ಅಪ್ಪಟ್ಟ ಕನ್ನಡಿಗ ನಮ್ಮ ನೆಚ್ಚಿನ ಡ್ಯಾನ್ಸ್ ಮಾಸ್ಟರ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರಭುದೇವ್ ಕೂಡ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ಮಾತನಾಡಿ “ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದು ತುಂಬಾ ಖುಷಿಯಾಗಿರುವೆ. ಸಾಮಾನ್ಯವಾಗಿ ನಾನು ಫ್ಯಾಮಿಲಿ ಮತ್ತು ಸ್ನೇಹಿತರನ್ನು ಸಪರೇಟ್ ಆಗಿ ನೋಡುವೆ. ಚೆನ್ನೈ ಸ್ನೇಹಿತರು ಬೇರೆ ಇದ್ದಾರೆ ಊರಿನ ಸ್ನೇಹಿತರು ಬೇರೆ ಇದ್ದಾರೆ..ಕೆಲಸ ಮಾಡುವವರ ಜೊತೆ ಸಪರೇಟ್ ಆಗಿರುವೆ ಆದರೆ ಇದೇ ಮೊದಲು ಒಂದೇ ಜಾಗದಲ್ಲಿ ಎಲ್ಲರನ್ನು ಒಟ್ಟಿಗೆ ನೋಡಿರುವುದು. ತುಂಬಾ ಎಂಜಾಯ್ ಮಾಡಿರುವೆ. ಕೆಲವರನ್ನು ನೋಡಿ ಆಶ್ಚರ್ಯವಾಯ್ತು ನನ್ನ ಅವ್ವ ಅಂದ್ರೆ ತಾಯಿ ಅವರ ತಾಯಿ ಟಿವಿ ವೇದಿಕೆ ಮೇಲೆ ಬಂದೇ ಇಲ್ಲ. ನನ್ನ ಹಳ್ಳಿ ಸ್ನೇಹಿತರು ಈ ರೀತಿ ವೇದಿಕೆಯಲ್ಲ ನೋಡಿಲ್ಲ. ಮನಸ್ಸಿನಲ್ಲಿ ಏನಿತ್ತು ಅದನ್ನು ಮಾತನಾಡಿದ್ದೀನಿ ಕೆಲವೊಂದು ವಿಚಾರ ಮರೆತಿರಬಹುದು. ಈ ಸಮಯದಲ್ಲಿ ಏನು ಹೇಳಬೇಕು ಅದನ್ನು ಮನಸ್ಸು ಬಿಚ್ಚಿ ಮಾತನಾಡಿರುವೆ’ ಎಂದಿದ್ದಾರೆ.
ಇದನ್ನೂ ಓದಿ: Weekend with Ramesh : ಪ್ರಭುದೇವ ಅವರ ಮಗನಿಗೆ ಏನಾಗಿತ್ತು? ರಮೇಶ್ ಮಗನ ವಿಷಯ ಮಾತಾಡಿ ಎಂದರೂ ಯಾಕೆ ಮಾತಾಡಿಲ್ಲ ಪ್ರಭುದೇವ?