Men’s Beauty Tips: ಬಿರು ಬಿಸಿಲಿನಲ್ಲಿ ಬೇಗೆಯ ನಡುವೆ ಪುರುಷರ ಮೊಗದ ಸೌಂದರ್ಯ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!

Men’s Beauty Tips: ಸೌಂದರ್ಯ ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಅಂದ ಸೌಂದರ್ಯದ ಕಾಳಜಿ ಹೆಣ್ಣಿಗಷ್ಟೇ ಸೀಮಿತ ಎಂದುಕೊಂಡು ಎಷ್ಟೋ ಪುರುಷರು ಚರ್ಮದ ಕಾಳಜಿಯ ಕಡೆಗೆ ಹೆಚ್ಚಿನ ಗಮನ ವಹಿಸುವುದಿಲ್ಲ. ಆದರೆ, ಮಹಿಳೆಯರು ಹಾಗಲ್ಲ. ತಮ್ಮ ದಿನದ ಹೆಚ್ಚಿನ ಸಮಯವನ್ನು ದೇಹ, ಚರ್ಮದ ಕಾಂತಿ ಹೆಚ್ಚಿಸುವ ನಿಟ್ಟಿನಲ್ಲಿ ಏನೇನೋ ಹರಸಾಹಸ ಪಡುತ್ತಾರೆ. ಚರ್ಮದ ಆರೋಗ್ಯದ(Health) ದೃಷ್ಠಿಯಿಂದ ಇದು ಅವಶ್ಯಕವೆಂದರು ತಪ್ಪಾಗದು. ಪುರುಷರ ಚರ್ಮವು ಹೆಚ್ಚು ಕಾಲಜನ್ ಮತ್ತು ಎಲಾಸ್ಟಿನ್ ಅನ್ನು ಒಳಗೊಂಡಿದ್ದು, ಇದು ಚರ್ಮವನ್ನು ಒಣ ಮತ್ತು ಒರಟಾಗಿ ಮಾಡುತ್ತದೆ. ಹೀಗಾಗಿ, ಪುರುಷರು(Men) ತಮ್ಮ ಚರ್ಮದ(Skin Care) ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ.

ಪುರುಷರು ಚರ್ಮದ ಕಾಳಜಿ (Men’s beauty care)ಮಾಡುವುದರಿಂದ ಸುಂದರವಾಗಿ ಕಾಣುವುದು ಮಾತ್ರವಲ್ಲ ಚರ್ಮ ಮೃದುವಾಗಿ ಸೌಮ್ಯವಾಗುತ್ತದೆ.ಅಷ್ಟೇ ಅಲ್ಲದೆ, ಬಿಸಿಲಿನಲ್ಲಿ ಓಡಾಟ ಮಾಡುವಾಗ ಧೂಳು, ಕಲುಷಿತ ಗೊಂಡ ವಾತಾವರಣ ಪ್ರತಿಯೊಬ್ಬರ ಚರ್ಮದ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಪುರುಷರು ಕೂಡ ಚರ್ಮದ ಆರೈಕೆ ಮಾಡೋದು ಉತ್ತಮ. ಅದರಲ್ಲಿಯೂ ವಿಶೇಷವಾಗಿ ಬಿಸಿಲಿನ ಬೇಗೆಗೆ ಸೌಂದರ್ಯ ಕಾಪಾಡಲು ಕೆಲ ಸರಳ ಸಲಹೆಗಳನ್ನ (Mens Beauty Tips)ಅನುಸರಿಸುವುದು ಉತ್ತಮ.

ಬಿಸಿಲಿಗೆ ಹೋಗುವ ಮುನ್ನ ಸನ್‌ಸ್ಕ್ರೀನ್ ಬಳಕೆ ಮಾಡುವುದು ಒಳ್ಳೆಯದು. ಇದು ಸೂರ್ಯನ ಹಾನಿಕಾರಕ ಪರಿಣಾಮಗಳಿಂದ ಚರ್ಮಕ್ಕೆ (Skin Care)ರಕ್ಷಣೆ ನೀಡುತ್ತದೆ. ಶೇವಿಂಗ್ (Shaving)ಮಾಡಿದ ಬಳಿಕ ಆಫ್ಟರ್ ಶೇವ್ (After Shave) ಬಳಸುವ ಅಭ್ಯಾಸ ಮಾಡಿಕೊಳ್ಳಬೇಕು.ಇದರಿಂದ ಚರ್ಮದ ಗಾಯಗಳು ಆಗುವುದನ್ನು ತಪ್ಪಿಸಬಹುದು. ಅದೇ ರೀತಿ, ರಾತ್ರಿ (Before sleeping in Night’)ಮಲಗುವ ಮುನ್ನ ಕ್ರೀಮ್ ಹಚ್ಚಬೇಕು. ಇದು ಚರ್ಮವನ್ನು ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು(Food) ಚರ್ಮದ ಮೇಲೆ ಪ್ರಭಾವ ಬೀರುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಕಾದ ಎಣ್ಣೆಯಲ್ಲಿ ಕರಿದ ತಿಂಡಿಗಳು, ಜಂಕ್ ಫುಡ್ (Junk Food) ತಿಂದಾಗ ಮುಖದಲ್ಲಿ ಮೊಡವೆಗಳು ಏಳುವ ಇಲ್ಲವೇ ಇನ್ನಿತರ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುವುದನ್ನು ನೀವು ಗಮನಿಸಿರಬಹುದು. ಹೀಗಾಗಿ, ವಿಟಮಿನ್, ಖನಿಜಾಂಶ, ಆಂಟಿಆಕ್ಸಿಡೆಂಟ್ ಅಧಿಕವಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನಿಮ್ಮ ಆಹಾರ ಕ್ರಮದಲ್ಲಿ ಹಣ್ಣುಗಳು ತರಕಾರಿಗಳು ಸಮತೋಲಿತ ಪ್ರಮಾಣದಲ್ಲಿರಬೇಕಾಗುತ್ತದೆ. ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಚರ್ಮದ ಉರಿಯೂತವನ್ನು ಕಡಿಮೆಯಾಗುವ ಜೊತೆಗೆ ನಿಮ್ಮ ಚರ್ಮದ ಆರೋಗ್ಯ ಕೂಡ ಕಾಪಾಡಬಹುದು.

ಪುರುಷರಲ್ಲಿ ಮೊಡವೆ ಸಮಸ್ಯೆಗಳು ಕಂಡು ಬರುತ್ತವೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು ಸರಿಯಾದ ಚರ್ಮದ ಆರೈಕೆ ಮಾಡಬೇಕಾಗುತ್ತದೆ. ಪುರುಷರು ಚರ್ಮದ ಆರೈಕೆಗೆ ಉತ್ತಮವಾದ ಫೇಸ್ವಾಶ್ ಬಳಕೆ ಮಾಡಬಹುದು. ಫೇಸ್ವಾಶ್ ಬಳಕೆಯಿಂದ ಮುಖದಲ್ಲಿನ ದೂಳು, ಎಣ್ಣೆಯಂಶವನ್ನು ತೊಡೆದು ಹಾಕಬಹುದು. ಈಗ ಮಾರುಕಟ್ಟೆಯಲ್ಲಿ ವಿಭಿನ್ನ ಚರ್ಮಕ್ಕೆ ಅನುಗುಣವಾಗಿ (Facewash ) ಫೇಸ್ವಾಷ್ ಗಳು ಲಭ್ಯವಿದ್ದು, ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಚರ್ಮಕ್ಕೆ ಸೂಕ್ತವಾದ ಬ್ರಾಂಡ್ ( Brand) ಬಳಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಚಿಕ್ಕವಯಸ್ಸಿನಲ್ಲೇ ಯಾಕೆ ಹೃದಯಾಘಾತ ಸಂಭವಿಸುತ್ತೆ ಗೊತ್ತಾ? ತಡೆಗಟ್ಟುವುದು ಹೇಗೆ ? ಇಲ್ಲಿದೆ ತಜ್ಞರ ಮಾಹಿತಿ 

Leave A Reply

Your email address will not be published.