Home Karnataka State Politics Updates Karnataka election: ಕಾರ್ಕಳ ಚುನಾವಣಾ ಕಣದಲ್ಲಿ ‘ ಮುಟ್ಟಾಳ ‘ರು ಯಾರು ? ಮುತಾಲಿಕ್ ಪೋಸ್ಟರ್‌ಗೆ...

Karnataka election: ಕಾರ್ಕಳ ಚುನಾವಣಾ ಕಣದಲ್ಲಿ ‘ ಮುಟ್ಟಾಳ ‘ರು ಯಾರು ? ಮುತಾಲಿಕ್ ಪೋಸ್ಟರ್‌ಗೆ ಬಿಜೆಪಿ ಸಕತ್ ಕೌಂಟರ್ !

Karkala-election

Hindu neighbor gifts plot of land

Hindu neighbour gifts land to Muslim journalist

Karkala-election : ಕಾರ್ಕಳ ವಿಧಾನಸಭಾ ಕ್ಷೇತ್ರ (Karkala Vidhanasabha Contituency) ದಲ್ಲಿ ಬಿಜೆಪಿ (BJP) ಹಾಗೂ ಮುತಾಲಿಕ್ ನಡುವೆ ಮುಟ್ಟಾಳ ವಾರ್ ಶುರುವಾಗಿದೆ. ಮುಟ್ಟಾಳೆ ಧರಿಸುವವರ ಊರಿನಲ್ಲಿ ಮುಟ್ಟಾಳ ಫೈಟ್ ಶುರುವಾಗಿದೆ. ಏನೀ ಮುಟ್ಟಾಳ ಫೈಟ್ ಗೊತ್ತಾ ?

ಚುನಾವಣೆ ಘೋಷಣೆಗೆ ಹಲವು ವಾರಗಳ ಮುನ್ನವೇ ಸಚಿವ ಸುನಿಲ್ ಕುಮಾರ್ ವಿರುದ್ಧ ಪ್ರಮೋದ್ ಮುತಾಲಿಕ ಅವರು ನಿರಂತರವಾಗಿ ಹರಿ ಹಾಯುತ್ತಾ ಬಂದಿದ್ದರು. ಅಲ್ಲದೆ ಸ್ಥಳೀಯ ಬಿಜೆಪಿ ವಿರುದ್ಧ ಗುಡುಗಿದ್ದರು. ಎಷ್ಟೇ ಆರೋಪ ಪ್ರತ್ಯಾರಪ್ಪ ಮಾಡಿದರೂ ಬಿಜೆಪಿ, ಸುಮ್ಮನಿತ್ತು. ಇಲ್ಲಿಯ ತನಕ ಆರೋಪಗಳ ಸುರಿಮಳೆ ಮಾಡುತ್ತಿದ್ದ ಮುತಾಲಿಕ್‍ಗೆ ಬಿಜೆಪಿ ಏನೂ ಉತ್ತರ ಕೊಟ್ಟಿರಲಿಲ್ಲ. ಇದೀಗ ಸುನಿಲ್ ಕುಮಾರ್ (Sunil Kumar) ಗೆ ಮತ ಹಾಕಿ ಮುಟ್ಟಾಳರಾಗಬೇಡಿ ಎಂಬ ಮುತಾಲಿಕ್ (Pramod Muthalik) ಪೋಸ್ಟರ್ ವಿರುದ್ಧ ಕಮಲ ಪಡೆ ಕೌಂಟರ್ ಕೊಟ್ಟಿದೆ.

‘ ಕಾರ್ಕಳದ ಜನತೆ ಮತ್ತೊಮ್ಮೆ ಸುನಿಲ್ ಕುಮಾರ್ ಅವರನ್ನು ಗೆಲ್ಲಿಸಿದ್ರೆ ನಿಮ್ಮಷ್ಟು ಮುಟ್ಟಾಳರು ಮತ್ತೊಬ್ಬರಿಲ್ಲ. ನೀವು ಮತ್ತೆ ಮುಟ್ಟಾಳರಾಗುವಿರಾ ? ‘ ಹೀಗಂತಾ ಪ್ರಮೋದ್ ಮುತಾಲಿಕ್ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಹಾಕಿದ್ದಾರೆ. ಮುತಾಲಿಕ್ ಪೋಸ್ಟರ್ ಹಾಕುತ್ತಿದ್ದಂತೆ ಕಾರ್ಕಳದ ಬಿಜೆಪಿ ಕಾರ್ಯಕರ್ತರು ಕೆರಳಿ ಕೆಂಡವಾಗಿದ್ದು, ಮುತಾಲಿಕ್ ಅವರು ಕಾರ್ಕಳದ (Karkala-election) ಜನತೆಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿ ಪ್ರಚಾರ ನಡೆಸಿದ್ದಾರೆ.

‘ ಮುತಾಲಿಕ್ ಅವರೇ, ನೀವು ಕಾರ್ಕಳ ಮತದಾರರಿಗೆ ಅವಮಾನವಾಯ್ತು. ಇದರ ಫಲ ನೀವು ಚುನಾವಣಾ ಫಲಿತಾಂಶದ ದಿನ ಅನುಭವಿಸ್ತೀರಿ. ಯಾರದ್ದೊ ಕುಮ್ಮಕ್ಕಿನಿಂದ ಯಾರದ್ದೋ ದುಡ್ಡು ತೆಗೆದುಕೊಂಡು ಎಲ್ಲಿಂದಲೋ ಇಲ್ಲಿಗೆ ಕಾರ್ಕಳಕ್ಕೆ ಬಂದಿದ್ದೀರಿ. ಈ ಬಾರಿ ಕಾರ್ಕಳದಲ್ಲಿ ನಿಮಗೆ ಸರಿಯಾಗಿ ಬುದ್ಧಿ ಕಲಿಸುತ್ತೇವೆ ಎಂದು ತಿರುಗೇಟು ಬಿಜೆಪಿ ಮಂದಿ ಕೊಟ್ಟಿದ್ದಾರೆ.

ಈ ಪೋಸ್ಟರ್ ಶ್ರೀರಾಮ ಸೇನೆ- ಮುತಾಲಿಕ್ ಅಭಿಮಾನಿ ಬಳಗ ವರ್ಸಸ್ ಬಿಜೆಪಿ ಕಾರ್ಯಕರ್ತರು- ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಡುವೆ ಜಗಳಕ್ಕೆ ಕಾರಣ ಆಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಮೋದ್ ಮುತಾಲಿಕ್ ಸುನಿಲ್ ಫೈಟ್ ಫುಲ್ ಆಕ್ಟಿವ್ ಆಗಿದೆ.

ಒಟ್ಟಿನಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಾಕ್‍ವಾರ್ ಮತ್ತಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಪೋಸ್ಟರ್ ಕುರಿತು ಪ್ರಮೋದ್ ಮುತಾಲಿಕ್ ಈವರೆಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ಉತ್ತರ ಕರ್ನಾಟಕದ ಪ್ರಮೋದ್ ಮುತಾಲಿಕ್ ಅವರು ಕರಾವಳಿಯ ಕಾರ್ಕಳಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧಿಸಲು ಬೇರೆಯದೆ ಉದ್ದೇಶ ಇದೆ. ಡೆಪ್ಯುಟಿ ಸಿಎಂ ಕುರ್ಚಿ ಹತ್ತಿರ ಕಣ್ಣು ನೆಟ್ಟಿ ಕೂತಿರುವ ಸುನಿಲ್ ಕುಮಾರ್ ಅವರನ್ನು ಚುನಾವಣೆಯ ಸಂದರ್ಭ ಕಾರ್ಕಳದಲ್ಲಿ ಕಟ್ಟಿ ಹಾಕಿ ನಿಲ್ಲಿಸುವಂತೆ ಮಾಡುವುದು, ಆ ಮೂಲಕ ರಾಜ್ಯದ ಒಟ್ಟಾರೆ ಕ್ಷೇತ್ರಗಳಲ್ಲಿ ಅವರ ಪ್ರಭಾವ ಕುಗ್ಗುವಂತೆ ಮಾಡುವುದು ಪ್ರಮೋದ್ ಕಾರ್ಕಳದಲ್ಲಿ ಚುನಾವಣೆಗೆ ನಿಂತುದರ ಉದ್ದೇಶ ಎನ್ನಲಾಗಿದೆ. ಇದರ ಹಿಂದೆ ಡೆಪ್ಯುಟಿಸಿಎಂ ಆಕಾಂಕ್ಷಿಗಳಾದ ಉತ್ತರ ಕರ್ನಾಟಕದ ಕೆಲ ಬಿಜೆಪಿ ನಾಯಕರುಗಳ ಕೈವಾಡ ಇದೆ ಎನ್ನಲಾಗಿದೆ. ಪ್ರಮೋದ್ ಮುತಾಲಿಕ್ ಅವರ ಕಾರ್ಕಳದ ಸ್ಪರ್ಧೆಯನ್ನು ಅದಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Hassan ticket war: ಹಾಸನದಲ್ಲಿ ಭವಾನಿ ಸ್ಪರ್ಧಿಸೋದು ಬೇಡವೆಂದ ದೊಡ್ಡಗೌಡರು, ಆಕ್ರೋಶಗೊಂಡು ಕೂಗಾಡಿ ಹೊರ ನಡೆದ ಭವಾನಿ