Home Entertainment Kapil Sharma : ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ನಿವ್ವಳ ಆದಾಯ, ಪ್ರತಿ ಎಪಿಸೋಡ್ ಗೆ...

Kapil Sharma : ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ನಿವ್ವಳ ಆದಾಯ, ಪ್ರತಿ ಎಪಿಸೋಡ್ ಗೆ ಗಳಿಸೋ ಹಣ, ಎಷ್ಟು ಗೊತ್ತಾ?

Kapil Sharma

Hindu neighbor gifts plot of land

Hindu neighbour gifts land to Muslim journalist

Kapil Sharma: ನಟನೆಯ ಜೊತೆಗೆ ತಮ್ಮ ಹಾಸ್ಯದ ಮೂಲಕ ಮನೆ ಮಾತಾಗಿರುವ ಕಾಮಿಡಿ ಕಿಂಗ್ ಕಪಿಲ್ ಶರ್ಮಾ(Kapil Sharma) ಹೆಚ್ಚು ಖ್ಯಾತಿ ಗಳಿಸಿದ್ದು, ಕಾಮಿಡಿ ನಟ್ ವಿಥ್ ಕಪಿಲ್”, “ದಿ ಕಪಿಲ್ ಶರ್ಮಾ ಶೋ” ಮೊದಲಾದ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಹಾಗಿದ್ದರೆ, ಕಪಿಲ್ ಶರ್ಮಾ ಅವರ ಆದಾಯ ಎಷ್ಟು ಗೊತ್ತಾ?

ಕಪಿಲ್ ಅವರು ಪಂಜಾಬ್‌ನ (Punjab) ಅಮೃತಸರದಲ್ಲಿ ಜನಿಸಿದ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಹಳ್ಳಿಯೊಂದರಲ್ಲಿ ಜನಿಸಿ ಕಡುಬಡತನದಲ್ಲಿ ಬೆಳೆದು ಬಂದು ಇಂದು ಎಲ್ಲರೂ ಗುರುತಿಸುವ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ. ಮನೆಯ ಆರ್ಥಿಕ(Financial Situation) ಸ್ಥಿತಿಯನ್ನು ಗಮನಿಸಿ ತಮ್ಮ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಸಲುವಾಗಿ PCO ಬೂತ್ ಮತ್ತು ಟೆಕ್ಸ್ ಟೈಲ್ಸ್ ಗಳಲ್ಲಿ(Textiles) ಕಪಿಲ್ ಶರ್ಮಾ ಕೆಲಸ ಮಾಡುತ್ತಿದ್ದರಂತೆ. ಆದರೆ ಇಂದಿನ ಸ್ಥಿತಿ ಹೇಗಿದೆ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ(Highest Paid Comedian) ಕಪಿಲ್ ಶರ್ಮಾ ಕೂಡ ಒಬ್ಬರಾಗಿದ್ದು, ದುಬಾರಿ ಬೆಲೆಯ ಆಸ್ತಿಯನ್ನು ಕೂಡ ಹೊಂದಿದ್ದಾರೆ.

ಕಪಿಲ್ ಶರ್ಮಾ ಬಾಲ್ಯದಲ್ಲಿ ಅಷ್ಟು ಬಡತನದಲ್ಲಿ ಬೆಳೆದವರು ಹೇಗೆ ಇಷ್ಟು ಖ್ಯಾತಿ ಪಡೆದರು? ಎಂಬ ಪ್ರಶ್ನೆ ಸಹಜವಾಗಿ ನಿಮ್ಮನ್ನು ಕಾಡಬಹುದು.
ಕಪಿಲ್ ಶರ್ಮಾ ಅವರ ವೃತ್ತಿ ಬದುಕು ಹೊಸ ಕವಲು ದಾರಿ ಪಡೆದುಕೊಂಡಿದ್ದು 2007 ರಲ್ಲಿ ‘ದಿ ಗ್ರೇಟ್ ಇಂಡಿಯನ್ ಲಾಫಿಂಗ್ ಚಾಲೆಂಜ್’ (The Great Indian Laughing Challenge) ಗೆದ್ದುಕೊಂಡ ಬಳಿಕ ಎಂದರೆ ತಪ್ಪಾಗದು. ಇದಾದ ಬಳಿಕ, 2013 ರ ತಮ್ಮದೇ ಆದ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ (Comedy Nights with Kapil)(2013 ‧ Comedy ‧ 1 season) ಕಾರ್ಯಕ್ರಮವನ್ನುಆರಂಭಿಸಿದ ಮೇಲೆ ಕಪಿಲ್ ಶರ್ಮಾ ದೊಡ್ಡ ಮಟ್ಟದ ನೇಮ್ ಫೇಮ್ ಗಳಿಸಿಕೊಂಡರು. ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಿ “ಕಪಿಲ್ ಶರ್ಮಾ” ಹೆಸರು “ಬ್ರ್ಯಾಂಡ್” ಆಗಿ ಫೇಮಸ್ ಆಯಿತು. ಒಂದು ಯಶಸ್ಸಿನ ಬಳಿಕ ಮತ್ತೊಂದು ಪ್ರಯತ್ನಕ್ಕೆ ಅಡಿಯಿಟ್ಟ ಕಪಿಲ್ ಶರ್ಮಾ “ಕಪಿಲ್ ಶರ್ಮಾ ಶೋ” (The Kapil Sharma Show)(2016)ಕೂಡ ಭರ್ಜರಿ ಯಶಸ್ಸು ಗಳಿಸಿತು. ಹೀಗಾಗಿ 2023ರಲ್ಲಿ ಕಪಿಲ್ ಶರ್ಮಾ ಅವರ ನಿವ್ವಳ ಲಾಭ, 280 ಕೋಟಿಯ ಗಡಿ ತಲುಪುವ ನಿರೀಕ್ಷೆ ದಟ್ಟವಾಗಿದೆ.


ಮುಂಬೈನ ಅಂಧೇರಿ ವೆಸ್ಟ್‌ನಲ್ಲಿ ಕಪಿಲ್ ಮನೆಯನ್ನು ಹೊಂದಿದ್ದಾರೆ ಎಂಬ ಕುರಿತು ಮ್ಯಾಜಿಕ್‌ಬ್ರಿಕ್ಸ್ ವರದಿ ಮಾಡಿದೆ ಎನ್ನಲಾಗಿದೆ. ಇದು ಆಲಿಯಾ ಭಟ್, ನವಾಜುದ್ದೀನ್ ಸಿದ್ದಿಕಿ, ಮಿಕಾ ಸಿಂಗ್ ಮತ್ತು ಸೋನು ಸೂದ್ ಮುಂತಾದ ಸೆಲೆಬ್ರಿಟಿಗಳು ತಂಗುವ ಸ್ಥಳ ಎನ್ನಲಾಗಿದೆ. ಕಪಿಲ್ ರವರ ಮುಂಬೈ ನಿವಾಸ 15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯ ಹೊಂದಿದೆ.ಕೆಲ ವರದಿಗಳ ಪ್ರಕಾರ, ಅವರು ಪ್ರತಿ ಎಪಿಸೋಡ್ ಗೆ ಒಟ್ಟು 50 ಲಕ್ಷ ರೂಪಾಯಿಗಳ ಚೆಕ್ ಪಡೆದುಕೊಳ್ಳುತ್ತಾರಂತೆ. ತಮ್ಮ ತವರು ರಾಜ್ಯ ಪಂಜಾಬ್‌ನಲ್ಲಿ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಫಾರ್ಮ್‌ಹೌಸ್ ಕೂಡ ಹೊಂದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಕಪಿಲ್ ಶರ್ಮಾ ದುಬಾರಿ ಕಾರುಗಳ ಒಡೆಯ ಎಂದು ಕೂಡ ಬಣ್ಣಿಸಲಾಗುತ್ತದೆ.

ಕಪಿಲ್ 5.5 ಕೋಟಿ ಮೌಲ್ಯದ ರಿಚ್ ಆಗಿರುವ ‘DC’ ವಿನ್ಯಾಸದ ವ್ಯಾನಿಟಿ ವ್ಯಾನ್ ಅನ್ನು ಹೊಂದಿದ್ದು, ಇದರ ಜೊತೆಗೆ ಐಶಾರಾಮಿ ಕಾರುಗಳಾದ ರೇಂಜ್ ರೋವರ್ ಇವೊಕ್(2023 Land Rover Range Rover Evoque), ವೋಲ್ವೋ ಎಕ್ಸ್‌ಸಿ 90 ಎಸ್‌ಯುವಿ, ಮರ್ಸಿಡಿಸ್ ಬೆಂಜ್ ಎಸ್ 350(Mercedes-Benz S-Class S 350d) ಕಾರುಗಳ ಒಡೆಯ ಎಂಬ ವಿಚಾರವನ್ನು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ ಎನ್ನಲಾಗಿದೆ. ಈ ನಡುವೆ ಕಪಿಲ್ ಶರ್ಮಾ ‘ಜ್ವಿಗಾಟೊ’ದಲ್ಲಿ ಅವರ ಅಭಿನಯವನ್ನು ಅಭಿಮಾನಿಗಳು ತುಂಬು ಮನದಿಂದ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: IPL 2023 : RCB ಪಂದ್ಯಾವಳಿ ಸಿಲಿಕಾನ್ ಸಿಟಿ ಜನತೆಗೆ ಗುಡ್ ನ್ಯೂಸ್ ಕೊಟ್ಟ ಬಿಎಂಟಿಸಿ, ನಮ್ಮ ಮೆಟ್ರೋ.