Home Breaking Entertainment News Kannada Rashmika Mandanna : ರಶ್ಮಿಕಾ – ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್! ಕಿರಿಕ್...

Rashmika Mandanna : ರಶ್ಮಿಕಾ – ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್! ಕಿರಿಕ್ ರಾಣಿ ಈಗ ಈ ನಟನ ಜೊತೆ ಲವ್ವಿ ಡವ್ವಿ!!

Rashmika - Vijay Devarakonda

Hindu neighbor gifts plot of land

Hindu neighbour gifts land to Muslim journalist

Rashmika – Vijay Devarakonda: ಸಿನಿಮಾಗಳಿಂದ ಮಾತ್ರವಲ್ಲದ ಸಾಕಷ್ಟು ವಿವಾದಗಳಿಂದಲೇ ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಂತೂ ಏನೇ ಹೇಳಿದರೂ, ಹೇಳದಿದ್ದರೂ ಟ್ರೋಲ್ ಆಗುತ್ತಿರುತ್ತಾರೆ. ಇದೀಗ ರಶ್ಮಿಕಾ – ವಿಜಯ್ ದೇವರಕೊಂಡ (Vijay Deverakonda) ಲವ್ ಸ್ಟೋರಿ ಬಗ್ಗೆ ಸುದ್ದಿ ಹರಿದಾಡುತ್ತಿದೆ. ನಟಿ ಬೇರೊಬ್ಬ ನಟನೆ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ನಿಮಗೆಲ್ಲಾ ರಶ್ಮಿಕಾ – ವಿಜಯ್ ದೇವರಕೊಂಡ (Rashmika – Vijay Devarakonda) ಲವ್ ಸ್ಟೋರಿ ಬಗ್ಗೆ ಗೊತ್ತೇ ಇದೆ. ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ, ಡಿಯರ್ ಕಾಮ್ರೆಡ್​ ಸಿನಿಮಾಗಳಲ್ಲಿ​ ಇಬ್ಬರು ತೆರೆ ಹಂಚಿಕೊಂಡಿದ್ದು, ಗೀತಾ ಗೋವಿಂದಂ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇಬ್ಬರಿಗೂ ಕೂಡ ದೊಡ್ಡ ಮಟ್ಟದ ನೇಮ್ ಫೇಮ್ ತಂದು ಕೊಟ್ಟಿದೆ. ‘ಗೀತಾ ಗೋವಿಂದಂ’ (Geetha Govindam) ಸಿನಿಮಾ ಸಿನಿ ರಸಿಕರ ಪಾಲಿನ ನೆಚ್ಚಿನ ಸಿನಿಮಾವಾಗಿ ವಿಜಯ್ ದೇವರಕೊಂಡ ಹಾಗೂ ನ್ಯಾಶನಲ್ ಕ್ರಷ್ ಜೋಡಿಯ ಮೋಡಿಗೆ ಅಭಿಮಾನಿಗಳು ಫುಲ್ ಫಿದಾ ಆಗಿಬಿಟ್ಟಿದ್ದರು. ಈ ಸಿನಿಮಾದ ನಂತರ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಈ ಸುದ್ದಿ ಎಲ್ಲೆಡೆ ಹಬ್ಬಿತ್ತು. ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಫುಲ್ ಖುಷಿಯಾಗಿತ್ತು. ಆದರೆ ಇದೀಗ ಶಾಕಿಂಗ್ ಸುದ್ದಿ ಇಲ್ಲಿದೆ. ರಶ್ಮಿಕಾ – ವಿಜಯ್ ದೇವರಕೊಂಡ ಲವ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಿರಿಕ್ ರಾಣಿಯ ಲವ್ವಿ ಡವ್ವಿ ಈಗ ಬೇರೊಬ್ಬ ನಟನ ಜೊತೆಗೆ ಎಂಬ ಸುದ್ದಿ ಕೇಳಿಬರುತ್ತಿದೆ.

ಹೌದು, ರಶ್ಮಿಕಾ ನಟ ವಿಜಯ್‌ ದೇವರಕೊಂಡ ಅವರನ್ನು ಬಿಟ್ಟು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ (Bellamkonda Sai Sreenivas) ಜೊತೆಗೆ ಡೇಟಿಂಗ್‌ ಮಾಡುತ್ತಿದ್ದಾರೆ. ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಹಲವು ಬಾರಿ ಇವರಿಬ್ಬರ ಭೇಟಿಯಾಗಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ರಶ್ಮಿಕಾ ಮತ್ತು ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಪ್ರಶಸ್ತಿ ಸಮಾರಂಭದಲ್ಲಿಯೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದರಿಂದಾಗಿ ಇವರ ನಡುವೆ ಅನ್ಯೋನ್ಯತೆ ಹೆಚ್ಚುತ್ತಿದೆ ಎನ್ನಲಾಗಿದ್ದು, ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಜತೆ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಆದರೆ ಈ ಗಾಸಿಪ್ ಬಗ್ಖೆ ಇಬ್ಬರೂ ಎಲ್ಲೂ ಮಾತಾಡಿಲ್ಲ.

ಸದ್ಯ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಜೊತೆಗಿನ ‘ಮಿಷನ್ ಮಜ್ನು’ (Mission Majnu) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ರಣಬೀರ್ ಕಪೂರ್ ಗೆ (ranbir kapoor) ನಾಯಕಿಯಾಗಿ ‘ಅನಿಮಲ್’ (animal) ಚಿತ್ರದಲ್ಲಿ, ಅಲ್ಲದೆ, ಅಲ್ಲು ಅರ್ಜುನ್ (allu arjun) ‘ಪುಷ್ಪ 2’ (pushpa-2) ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಿತಿನ್​ (Nithin) -ರಶ್ಮಿಕಾ ಕಾಂಬಿನೇಷನ್​ನ ಹೊಸ ಸಿನಿಮಾ ಕೂಡ ಮೂಡಿಬರುತ್ತಿದೆ.

https://twitter.com/agk4444/status/1640656228492746752?s=20

 

ಇದನ್ನೂ ಓದಿ: Couple Romance Video : ಚಲಿಸುತ್ತಿರುವ ರೈಲಿನಲ್ಲಿ ಖುಲ್ಲಂ ಖುಲ್ಲಂ ಪ್ರಣಯದಾಟದಲ್ಲಿ ಮುಳುಗಿದ ಜೋಡಿ! ವಿಡಿಯೋ ವೈರಲ್