Small Saving Scheme : ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಜನರಿಗೆ ಶುಭ ಸುದ್ದಿ ನೀಡಿದ ಸರಕಾರ!
Kisan Vikas Patra Scheme : ವಿಶ್ವಾಶಾರ್ಹ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ (post office ) ಯೋಜನೆಗಳನ್ನು ಆಯ್ಕೆ ಮಾಡಬಹುದು. ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಹಣ ದ್ವಿಗುಣಗೊಳ್ಳುವುದರ ಜೊತೆಗೆ ನಿಶ್ಚಿತ ಆದಾಯವನ್ನೂ ಪಡೆಯಬಹುದು.
ಮುಖ್ಯವಾಗಿ ಸುಕನ್ಯಾ ಸಮೃದ್ಧಿ ಯೋಜನೆ (Kisan Vikas Patra Scheme), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ), ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಅಂಚೆ ಕಚೇರಿ ಠೇವಣಿ ಯೋಜನೆಗಳು ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಬಡ್ಡಿ ದರವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರವು ಉಡುಗೊರೆಯನ್ನು ನೀಡಿದೆ. ಇವುಗಳು ಅಂಚೆ ಕಚೇರಿ ಹಣ ದ್ವಿಗುಣಗೊಳಿಸುವ ಯೋಜನೆಗಳಾಗಿದೆ.
ಹೌದು, ಹಣಕಾಸು ಸಚಿವಾಲಯ ಕಿಸಾನ್ ವಿಕಾಸ್ ಪತ್ರದ ಬಡ್ಡಿದರವನ್ನು 30 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಇದುವರೆಗೆ ಕೆವಿಪಿಯಲ್ಲಿ ಹೂಡಿಕೆದಾರರಿಗೆ ಶೇ.7.2ರಷ್ಟು ಬಡ್ಡಿ ಲಾಭ ಸಿಗುತ್ತಿತ್ತು. ಆದರೆ, ಇದೀಗ ಅದನ್ನು ಶೇ.7.5ಕ್ಕೆ ಹೆಚ್ಚಿಸಲಾಗಿದೆ. ಹೊಸ ಬಡ್ಡಿ ದರವು 1 ಏಪ್ರಿಲ್ 2023 ರಿಂದ 30 ಜೂನ್ 2023 ರವರೆಗೆ ಅನ್ವಯಿಸಲಿದೆ.
ಪೋಸ್ಟ್ ಆಫೀಸ್ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ,
ಕಿಸಾನ್ ವಿಕಾಸ್ ಪತ್ರದಲ್ಲಿನ ಬಡ್ಡಿಯನ್ನು ವಾರ್ಷಿಕ ಸಂಯೋಜನೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿದ್ದು ಇದರಲ್ಲಿ, ಕನಿಷ್ಠ 1000 ರೂ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತವನ್ನು ರೂ 100 ರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು.
ಸದ್ಯ ಹೂಡಿಕೆದಾರರು ತಮ್ಮ ಹೆಸರಿನಲ್ಲಿ ಅನಿಯಮಿತ KVP ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಹೂಡಿಕೆಯು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನವನ್ನು ಪಡೆಯುವುದಿಲ್ಲ. ರಿಟರ್ನ್ಸ್ ಕೂಡ ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಮುಕ್ತಾಯದ ನಂತರ ಹಿಂಪಡೆಯುವಿಕೆಯ ಮೇಲೆ TDS ಅನ್ನು ಕಡಿತಗೊಳಿಸಲಾಗುವುದಿಲ್ಲ.
ಹಣಕಾಸು ಸಚಿವಾಲಯ ಇಂದು ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಹೊಸ ದರಗಳು 2023-24 ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಅನ್ವಯಿಸಲಿವೆ.
ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟನೆಯ ಪ್ರಕಾರ, ಈಗ ಕಿಸಾನ್ ವಿಕಾಸ್ ಪತ್ರಕ್ಕೆ ಶೇಕಡಾ 7.2 ರ ಬಡ್ಡಿಯ ಬದಲಿಗೆ ಶೇಕಡಾ 7.5 ಬಡ್ಡಿಯನ್ನು ನೀಡಲಾಗುತ್ತದೆ. ಬಡ್ಡಿ ದರ ಬದಲಾವಣೆಯಿಂದಾಗಿ ಈಗ 115 ತಿಂಗಳಲ್ಲಿ ಹೂಡಿಕೆದಾರರ ಹಣ ದ್ವಿಗುಣವಾಗಲಿದೆ. ಇದುವರೆಗೆ ಹೂಡಿಕೆದಾರರ ಹಣವನ್ನು 120 ತಿಂಗಳಲ್ಲಿ ದ್ವಿಗುಣಗೊಳಿಸುತ್ತಿತ್ತು.
ಇನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹಣಕಾಸು ಸಚಿವಾಲಯ ಹೊರಡಿಸಿದ ಪ್ರಕಟನೆಯ ಪ್ರಕಾರ, ಮುಂದಿನ ತ್ರೈಮಾಸಿಕಕ್ಕೆ (1 ಏಪ್ರಿಲ್ 2023 ರಿಂದ 30 ಜೂನ್ 2023) ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಶೇಕಡಾ 8 ರಿಂದ 8.2 ಕ್ಕೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಖಾತೆ ಅಂದರೆ ಎಂಐಎಸ್ ಯೋಜನೆಗೆ ಬಡ್ಡಿದರಗಳನ್ನು ಶೇ.7.1ರಿಂದ ಶೇ.7.4ಕ್ಕೆ ಹೆಚ್ಚಿಸಲಾಗಿದೆ.
ಒಟ್ಟಿನಲ್ಲಿ ಕಿಸಾನ್ ವಿಕಾಸ ಪತ್ರ (ಕೆವಿಪಿ): ಶೇ. 7.2 ರಿಂದ ಶೇ. 7.5ಕ್ಕೆ ಏರಿಕೆ; ಬಡ್ಡಿ ದರದಲ್ಲಿ ಶೇ. 0.3ರಷ್ಟು ಹೆಚ್ಚಳವಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಯೋಜನೆಯಲ್ಲಿ ಶೇ. 7 ರಿಂದ ಶೇ. 7.7ಕ್ಕೆ ಏರಿಕೆ ಆಗಿದೆ. ಅಂದರೆ ಶೇ. 0.7ರಷ್ಟು ಹೆಚ್ಚಳ ಮಾಡಲಾಗಿದೆ. ಇನ್ನು ಸುಕನ್ಯಾ ಸಮೃದ್ದಿ ಯೋಜನೆ: ಶೇ. 7.6 ರಿಂದ ಶೇ. 8ಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ ಬಡ್ಡಿಯಲ್ಲಿ ಶೇ. 0.4ರಷ್ಟು ಏರಿಕೆ ಆಗಿದೆ. ಅದಲ್ಲದೆ ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ. 8 ರಿಂದ ಶೇ. 8.2ಕ್ಕೆ ಏರಿಕೆ; ಬಡ್ಡಿ ದರದಲ್ಲಿ ಶೇ. 0.2ರಷ್ಟು ಏರಿಕೆ ಯಾಗಿದೆ. ಈ ಯೋಜನೆಗಳಲ್ಲಿ ಬಡ್ಡಿದರ ವಿಚಾರದಲ್ಲಿ ಇದುವರೆಗಿನ ಅತಿ ದೊಡ್ಡ ಏರಿಕೆಯಾಗಿದೆ.
ಇದನ್ನೂ ಓದಿ: LPG Cylinder Price: ಎಲ್ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ!