Manisha Koirala on Rajinikanth : ಸೌತ್ ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಕೊನೆಗೊಳ್ಳಲು ರಜನಿಕಾಂತ್ ಕಾರಣ- ಮನೀಶಾ ಕೊಯಿರಾಲಾ

Manisha koirala on Rajinikanth: ಮನಿಷಾ ಕೊಯಿರಾಲಾ (Manisha koirala) ಬಾಲಿವುಡ್ ಚಿತ್ರರಂಗದ ಪ್ರಮುಖ ನಟಿ. 90ರ ದಶಕದ ಪ್ರಭಾವಿ ಮತ್ತು ಬೇಡಿಕೆಯ ನಟಿಯರ ಪಟ್ಟಿಯಲ್ಲಿದ್ದವರ ಪೈಕಿ ಮನೀಶಾ ಕೊಯಿರಾಲಾ ಕೂಡ ಒಬ್ಬರು. 1991 ರಲ್ಲಿ ತೆರೆಕಂಡ `ಸೌದಾಗಾರ್’ (Saudagar) ಚಿತ್ರದಿಂದ ಸಿನಿಮಾರಂಗಕ್ಕೆ ಬಂದ ಇವರು ಬಹುಬೇಗನೇ ಬಾಲಿವುಡ್ ನ (Bollywood) ಬೇಡಿಕೆಯ ನಟಿಯಾದರು. ಕೆಲ ದಕ್ಷಿಣ ಬಾರತೀಯ ಚಿತ್ರಗಳಲ್ಲಿ ನಟಿಸಿರುವ ಇವರು ಕನ್ನಡದಲ್ಲಿ `ಗೇಮ್’ (game) ಚಿತ್ರದಲ್ಲಿ ನಟಿಸಿದ್ದಾರೆ.

ಕೇವಲ ಹಿಂದಿ (Hindi) ಮತ್ತು ತಮಿಳು (Tamil) ಚಿತ್ರಂಗದಲ್ಲಿ ಮಾತ್ರವಲ್ಲದೆ, ತೆಲುಗು (Telugu) , ಬಂಗಾಳಿ , ಮಲಯಾಳಂ , ನೇಪಾಳಿ ಮತ್ತು ಇಂಗ್ಲಿಷ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ‘ಬಾಂಬೆ’, ‘ಇಂಡಿಯನ್’‌, ‘ಮುದಲ್ವನ್’‌ ಸೇರಿದಂತೆ ಹಲವು ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ನಟಿ ಮನೀಶಾ ಕೊಯಿರಾಲಾ ಇದೀಗ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹೌದು, ಸೌತ್ ಇಂಡಸ್ಟ್ರಿಯಲ್ಲಿ ಸಿನಿ ಜರ್ನಿ ಕೊನೆಗೊಳ್ಳಲು ನಟ ರಜನಿಕಾಂತ್ ಕಾರಣ ಎಂದು ಮನೀಶಾ ಕೊಯಿರಾಲಾ ಹೇಳಿದ್ದಾರೆ (Manisha koirala on Rajinikanth). ನಟಿ ಹೀಗೆ ಹೇಳಿದ್ದಾದರೂ ಏಕೆ?

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ತಮ್ಮ ಸಿನಿಮಾ ಕೆರಿಯರ್‌ ಹಾಳಾಗಿದ್ದು ಸೌತ್‌ನ ಸಿನಿಮಾವೊಂದರಿಂದ ಎಂದಕ ಹೇಳಿದ್ದಾರೆ. 2002ರಲ್ಲಿ ರಜನಿಕಾಂತ್‌ ಅಭಿನಯದಲ್ಲಿ ತೆರೆಕಂಡ ‘ಬಾಬಾ’ (baba) ಸಿನಿಮಾದಿಂದ ತನ್ನ ಸಿನಿಜರ್ನಿ ಕೊನೆಗೊಂಡಿತು ಎಂದಿದ್ದಾರೆ. ಸುರೇಶ್‌ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ
ಈ ಚಿತ್ರದಲ್ಲಿ ರಜನಿಕಾಂತ್‌ಗೆ (Rajinikanth) ಜೋಡಿಯಾಗಿ ಮನೀಶಾ ಕೋಯಿರಾಲಾ ನಟಿಸಿದ್ದರು. ಆದರೆ, ಅದುವರೆಗೂ ನಟಿಯ ಸಾಲು ಸಾಲು ಸಿನಿಮಾಗಳು ಹಿಟ್ ಆಗಿದ್ದವು. ಆದರೆ, ಬಾಬಾ ಸಿನಿಮಾ ಮಾತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಸೋಲನುಭವಿಸಿತು.

ಅದುವರೆಗೂ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳನ್ನೇ (block buster hit movie) ನೀಡಿರುವ ನಟಿ ಮನೀಶಾ ಕೊಯಿರಾಲಾಗೆ ಆ ಒಂದು ಸಿನಿಮಾದಿಂದ ಸೌತ್ ಚಿತ್ರಗಳಿಂದ ಆಫರ್‌ಗಳೇ ಇಲ್ಲದಂತಾದವು. ‘ಬಾಬಾ’ ಸೋಲು ನಟಿಗೆ ಭಾರೀ ಒಡೆತ ನೀಡಿತು. ಆವರೆಗೂ ಮಾಡಿದ್ದ ಹಿಟ್ ಸಿನಿಮಾಗಳ ಪಟ್ಟಿಯನ್ನು ಅಳಿಸಿ ಹಾಕಿತು. “ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ತೆರೆಕಂಡ ನನ್ನ ಕೊನೆಯ ದೊಡ್ಡ ಸಿನಿಮಾ ‘ಬಾಬಾ’. ಆ ದಿನಗಳಲ್ಲಿ ಅದು ಸೋಲು ಕಂಡಿತು. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಸಿನಿಮಾ ಸೋತಾಗ, ನನಗೆ ಸೌತ್ ಚಿತ್ರಗಳಿಂದ ಆಫರ್‌ಗಳೇ ಇಲ್ಲದಂತಾದವು” ಎಂದು ಹಳೇ ದಿನಗಳನ್ನು ಮನೀಷಾ ನೆನೆದರು.

ಆದರೆ, ಒಂದು ಬಾರಿ ಸೋಲು ಕಂಡ ಬಾಬಾ ಸಿನಿಮಾ, ರಜನಿಕಾಂತ್ ಅವರ ಹುಟ್ಟುಹಬ್ಬದ (Rajinikanth birthday) ಪ್ರಯುಕ್ತ ಕಳೆದ ವರ್ಷದ ಡಿಸೆಂಬರ್‌ 12ರಂದು ಮತ್ತೊಮ್ಮೆ ರಿರಿಲೀಸ್ ಆಯ್ತು. ತಾಂತ್ರಿಕವಾಗಿ ಬದಲಾವಣೆ ಮಾಡಿ ಚಿತ್ರ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ಸಿನಿಮಾ ಒಳ್ಳೆಯ ಗಳಿಕೆಯನ್ನೇ ಕಂಡಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಮನೀಶಾ, “20 ವರ್ಷಗಳ ನಂತರ ಈ ಚಿತ್ರ ಹಿಟ್ ಆಗಿರುವುದು ಖುಷಿ ತಂದಿದೆ” ಎಂದಿದ್ದಾರೆ.

Leave A Reply

Your email address will not be published.