Home Breaking Entertainment News Kannada Koffee With Karan 8: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್​ ಶೆಟ್ಟಿ, ಯಶ್​?!

Koffee With Karan 8: ‘ಕಾಫಿ ವಿತ್​ ಕರಣ್​’ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಬ್​ ಶೆಟ್ಟಿ, ಯಶ್​?!

Koffee With Karan 8

Hindu neighbor gifts plot of land

Hindu neighbour gifts land to Muslim journalist

Koffee With Karan 8: ಕನ್ನಡದ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಅಬ್ಬರಿಸುವ ಹಾಗೆ ಮಾಡಿದ ಕೀರ್ತಿ ‘ಕೆಜಿಎಫ್​: ಚಾಪ್ಟರ್​ 2’ (KGF -2) ಸಿನಿಮಾ ಹಾಗೂ ಕಾಂತಾರ ಸಿನಿಮಾಗೆ ದಕ್ಕಲೇಬೇಕು. ರಾಕಿಂಗ್ ಸ್ಟಾರ್ ಯಶ್ (Rocking Star Yash) ಮತ್ತು ಡಿವೈನ್ ಸ್ಟಾರ್ ಅವರ ನಟನೆಗೆ ಅಭಿಮಾನಿಗಳು ಫುಲ್ ಫಿದಾ ಆಗಿ ರಾಕಿ ಭಾಯ್ ‘ಫ್ಯಾನ್ ಇಂಡಿಯಾ ಸ್ಟಾರ್​’ ಆಗಿ ಮಿಂಚಿ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ರಿಷಬ್ ಶೆಟ್ಟಿ ಅವರ ಕಾಂತಾರ (Kantara)ಸಿನಿಮಾದ ಮೂಲಕ ಟ್ರೆಂಡ್ ಮಾಡಿದ್ದು ಗೊತ್ತೇ ಇದೆ. ಇದೀಗ, ಡಿವೈನ್ ಸ್ಟಾರ್ ಮತ್ತು ರಾಕಿಂಗ್ ಸ್ಟಾರ್ ಬಾಲಿವುಡ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.

ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ಮುಖ ಮಾಡಿ ನೋಡುವಂತೆ ಮಾಡಿ ಈ ಮೊದಲಿದ್ದ ದಾಖಲೆಗಳನ್ನು ಪುಡಿ ಪುಡಿ ಮಾಡಿದ್ದು ರಾಕಿ ಭಾಯಿ ಅಭಿನಯದ (KGF 2) ಈ ಬಳಿಕ ರಿಷಬ್ ಶೆಟ್ಟಿ ಅವರ ಕಾಂತಾರ (Kantara) ಸಿನಿಮಾದ ಹವಾ ಯಾವ ಮಟ್ಟಿಗೆ ಇತ್ತು ಎಂದು ವಿವರಿಸುವ ಅವಶ್ಯಕತೆಯೇ ಇಲ್ಲ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿ ಈ ಮೊದಲಿದ್ದ ದಾಖಲೆಗಳನ್ನು ಮುರಿದು ಯಶಸ್ವಿ ಪ್ರದರ್ಶನ ಕಂಡು ಗೆಲುವಿನ ನಾಗಾಲೋಟದಲ್ಲಿ ಅಬ್ಬರಿಸಿದ್ದು, ಈ ಸಿನೆಮಾದ ಮೂಲಕ ರಿಷಬ್​ ಶೆಟ್ಟಿ ಕೂಡ ವಿಶ್ವದಾದ್ಯಂತ ದೊಡ್ಡ ಮಟ್ಟದ ನೇಮ್ ಫೇಮ್ ಪಡೆದುಕೊಂಡಿದ್ದು ನಿಮಗೆಲ್ಲ ಗೊತ್ತಿರುವಂತದ್ದೇ!!ಈ ಸ್ಟಾರ್​ ನಟರಿಬ್ಬರು ‘ಕಾಫಿ ವಿತ್​ ಕರಣ್​’ ಶೋನಲ್ಲಿ(Koffee With Karan 8) ಬಾಲಿವುಡ್ ಅಂಗಳದಲ್ಲಿ ಮಿಂಚಲಿದ್ದಾರೆ ಎಂಬ ಸುದ್ದಿ ಸದ್ಯ ಎಲ್ಲರ ಪಾಲಿನ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಕರಣ್​ ಜೋಹರ್​ (Karan Johar)ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಮಾತ್ರವಲ್ಲದೆ, ತಮ್ಮ ನಿರೂಪಣಾ ಶೈಲಿಯಿಂದ ಕೂಡ ಹೆಸರು ಪಡೆದಿದ್ದಾರೆ. ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಖ್ಯಾತಿ ಹೊಂದಿರುವ ಕರಣ್​ ಜೋಹರ್​ (Karan Johar) ಹೆಚ್ಚು ಫೇಮಸ್ ಆಗಿದ್ದು, ‘ಕಾಫಿ ವಿತ್​ ಕರಣ್​’ (Koffee With Karan) ಶೋ ಮೂಲಕ ಎಂದರೆ ತಪ್ಪಾಗದು. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಹೆಚ್ಚಾಗಿ ಬಾಲಿವುಡ್ ಸೆಲೆಬ್ರಿಟಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ಈ ನಡುವೆ ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ನಟ-ನಟಿಯರ ಕಡೆಗೂ ಒಲವು ತೋರಿರುವಂತೆ ಕಂಡುಬರುತ್ತಿದೆ. ಈಗಾಗಲೇ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ. ಈಗಾಗಲೇ ‘ಕಾಫಿ ವಿತ್​ ಕರಣ್​’7 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸದ್ಯ, ‘ಕಾಫಿ ವಿತ್​ ಕರಣ್​’ 8ನೇ ಸೀಸನ್​ಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಬಾರಿ ‘ರಾಕಿಂಗ್​ ಸ್ಟಾರ್​’ ಯಶ್​ ಮತ್ತು ‘ಡಿವೈನ್​ ಸ್ಟಾರ್​’ ರಿಷಬ್​ ಶೆಟ್ಟಿ (Rishab Shetty) ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕುರಿತು ಊಹಾಪೋಹಗಳು ಕೇಳಿ ಬರುತ್ತಿದೆ. ಒಂದು ವೇಳೆ, ಈ ಅಂತೆ ಕಂತೆಗಳನ್ನು ಬದಿಗಿಟ್ಟು ಈ ವಿಚಾರ ನಿಜ ಎಂದಾದರೆ ಬಾಲಿವುಡ್ ಅಂಗಳದಲ್ಲಿ ಕನ್ನಡದ ಹವಾ ಮುಗಿಲೆತ್ತರಕ್ಕೆ ಹೋಗೋದು ಪಕ್ಕಾ ಅನ್ನೋದು ಅಭಿಮಾನಿಗಳ ಅನಿಸಿಕೆ. ಈ ಸ್ಟಾರ್ ನಟರ ಜೊತೆಗೆ ಈ ಸೀಸನ್ ನಲ್ಲಿ ಅಲ್ಲು ಅರ್ಜುನ್(Allu Arjun) ಅವರು ಕೂಡ ಈ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ್ದು, ಈ ಬಗ್ಗೆ ಕರಣ್ ಜೋಹರ್ ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬೀಳದ ಹಿನ್ನೆಲೆ ಮುಂದಿನ ದಿನಗಳಲ್ಲಿ ಇದರ ಸತ್ಯಾಸತ್ಯತೆ ತಿಳಿಯಬೇಕಾಗಿದೆ.