MGNREGA : ಈಗಾಗಲೇ 2005ರ ಸೆಪ್ಟೆಂಬರ್ 5ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿಯಲ್ಲಿ ಒಂದು ಕುಟುಂಬದ ವಯಸ್ಕ ಸದಸ್ಯರು ಸ್ವಯಂ ಪ್ರೇರಿತರಾಗಿ ನೋಂದಣಿಯಾದರೆ ಅಂತಹವರಿಗೆ ಆರ್ಥಿಕ ವರ್ಷವೊಂದಕ್ಕೆ ನೂರು ದಿನಗಳ ಉದ್ಯೋಗ ನೀಡಲಾಗುತ್ತಿದ್ದು . ಈ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಇದೀಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಅಡಿಯಲ್ಲಿ ನೀಡಲಾಗುವ ಮೊತ್ತವನ್ನು ಹೆಚ್ಚಿಸುವುದಾಗಿ ಪ್ರಧಾನಿ ಮೋದಿ ಸರ್ಕಾರ ಘೋಷಣೆ ಮಾಡುವ ಮೂಲಕ ಜನರಿಗೆ ಗುಡ್ ನ್ಯೂಸ್ ನೀಡಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಅಡಿಯಲ್ಲಿ ನೀಡಲಾಗುವ ಮೊತ್ತದ ಹೆಚ್ಚಳವು 2022-2024 ರ ಹಣಕಾಸು ವರ್ಷಕ್ಕೆ ಅನ್ವಯಿಸಲಿದ್ದು, ಈ ಘೋಷಣೆಯಿಂದ MGNREGA ಅಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆದಾಯ ಹೆಚ್ಚಳವಾಗಲಿದೆ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ದರವನ್ನು ಮಾರ್ಚ್ 24ರಿಂದ ಬದಲಾಯಿಸಲಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಬಹಿರಂಗಪಡಿಸಿದೆ. ಅದಲ್ಲದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಸೆಕ್ಷನ್ 6 (1) ರ ಅಡಿಯಲ್ಲಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ.

2023ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ಮೀಸಲಿರಿಸಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕಡಿಮೆ ಮೊತ್ತವಾಗಿದೆ. ಸದ್ಯ 2022-23 ರ ಹಂಚಿಕೆ 73 ಸಾವಿರ ಕೋಟಿ ಮೀಸಲಿಡಲಾಗಿದೆ. ಈ ಯೋಜನೆಯಡಿಯಲ್ಲಿ 8 ಕೋಟಿ ಕುಟುಂಬಗಳು ಉದ್ಯೋಗ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಅದಲ್ಲದೆ ಉದ್ಯೋಗಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ.

ಸದ್ಯ ಹರಿಯಾಣದಲ್ಲಿ ಈ ಮೊತ್ತ 357 ರೂಪಾಗಿದೆ. ಕರ್ನಾಟಕದಲ್ಲಿ 317 ರೂಪಾಯಿ ಆಗಿದೆ. ಆದರೆ ಮಧ್ಯಪ್ರದೇಶ ಮತ್ತು ಚಂಡೀಗಢದಲ್ಲಿ ಕಡಿಮೆ ದರದಲ್ಲಿ ಕೂಲಿಯನ್ನು ನೀಡಲಾಗುತ್ತಿದೆ. ಈ ರಾಜ್ಯದಲ್ಲಿ ದಿನಕ್ಕೆ 221ರೂಪಾಯಿ ನೀಡಲಾಗುತ್ತಿದೆ.

ಇನ್ನು ರಾಜಸ್ಥಾನದಲ್ಲಿ 231 ರಿಂದ 255 ರೂಪಾಯಿಗೆ ಏರಿಕೆಯಾಗಿದೆ, ಬಿಹಾರ ಮತ್ತು ಜಾರ್ಖಂಡ್​​​ನ​ಲ್ಲಿ 210 ರಿಂದ 228 ರೂಪಾಯಿ ಆಗಲಿದೆ. ಛತ್ತೀಸಗಢ ಹಾಗೂ ಮಧ್ಯಪ್ರದೇಶದಲ್ಲಿ 204 ರೂ.ಗಳಿಂದ 221 ರೂಪಾಯಿ ಆಗಲಿದೆ.

ಕೇಂದ್ರ ಸರ್ಕಾರವು ಆಧಾರ್ ಪಾವತಿ ಆಯ್ಕೆಯ ಮೂಲಕ ಪಾವತಿಗಳನ್ನು ಮಾಡುತ್ತಿದ್ದು, ಅಂದರೆ ಆಧಾರ್ ಕಾರ್ಡ್‌ನೊಂದಿಗೆ ( Aadhaar card ) ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ಮುಖ್ಯವಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, ಮಾಸ್ಟರ್ ರೋಲ್ ಮುಚ್ಚಿದ ನಂತರ 15 ದಿನಗಳಲ್ಲಿ ಬ್ಯಾಂಕ್ ಖಾತೆಗಳಿಗೆ (Bank account ) ಹಣವನ್ನು ಜಮಾ ಮಾಡಲಾಗುತ್ತದೆ , ಆದರೆ ಕೆಲವೊಮ್ಮೆ ಈ ಪಾವತಿಗಳು ವಿಳಂಬ ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Food Corporation of India Recruitment : ಭಾರತೀಯ ಆಹಾರ ನಿಗಮದಲ್ಲಿ ಉದ್ಯೋಗ : ಒಟ್ಟು ಹುದ್ದೆ-46, ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.31

Leave A Reply

Your email address will not be published.