Tab Distribution : ಕೂಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ!

Share the Article

Tab Distribution: ಕೂಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರದ (state government) ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಣಿಯಾದ ಕೂಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್‌ ನೀಡಲಾಗುತ್ತಿದೆ (Tab Distribution).

ಈಗಾಗಲೇ ಕಾರ್ಮಿಕರ ಏಳಿಗೆಗಾಗಿ ಕಟ್ಟಡ ನಿರ್ಮಾಣ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಹಲವಾರು ಯೋಜನೆಗಳ ಅಡಿಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅಂತೆಯೇ ಇದೀಗ ಕೂಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಆನ್ ಲೈನ್ ಶಿಕ್ಷಣ (online education) ಪಡೆಯಲು ಸಹಕಾರಿಯಾಗಲು ಟ್ಯಾಬ್ (Tab) ವಿತರಿಸಲಾಗುತ್ತಿದೆ.

ಸದ್ಯ ತಿಪಟೂರಿನ ಕಾರ್ಮಿಕ ಇಲಾಖೆಯಲ್ಲಿ ಟ್ಯಾಬ್‌ ವಿತರಿಸಿದ್ದು, ಲೇಬರ್‌ ಇನ್ಸ್‌ಪೆಕ್ಟರ್‌ ಕೆ.ಎನ್‌. ಸುಶೀಲಾರವರು ಕೂಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್‌ ವಿತರಿಸಿದರು. ಈ ವೇಳೆ ರಾಜ್ಯ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಸರ್ವೇಶ್‌ ಸೇರಿದಂತೆ ಹಲವು ಫಲಾನುಭವಿಗಳಿದ್ದರು.

Leave A Reply