Actress Ramya : ಮುದ್ದಿನ ಅಜ್ಜಿಯರಿಗಾಗಿ ಮುಂದಿನ ಬಾರಿ ಕನ್ನಡ ಬಾರಿಸ್ತೀನಿ – ಟ್ರೋಲಿಗರ ಬಾಣಗಳಿಂದ ಬಚಾವಾಗಲು ರಮ್ಯಾ ಪ್ರತಿಕ್ರಿಯೆ

Ramya troll : ಝೀ ಕನ್ನಡ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಕಾಣಿಸಿಕೊಂದಿದ್ದ ರಮ್ಯಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು, ಇದೀಗ ರಮ್ಯಾ ಟ್ರೊಲ್ (Ramya troll)ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸೀಸನ್ -5 ಮೊದಲ ಸಾಧಕಿಯಾಗಿ ಸ್ಯಾಂಡಲ್ ವುಡ್ ಕ್ವೀನ್  ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ (Ramya alyas Divya spandana)ಅವರೊಂದಿಗೆ ಅದ್ಧೂರಿಯಾಗಿ ಆರಂಭವಾಗಿತ್ತು. ಈ ಶೋ ಅಲ್ಲಿ ರಮ್ಯಾ ಅವರನ್ನು ನೋಡಲು ಅಭಿಮಾನಿಗಳು(fans) ತುಂಬಾ ಕಾತುರದಿಂದ ಕಾಯುತ್ತಿದ್ದರು.ಕೊನೆಗೂ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಬಿದ್ದಿದ್ದು,ಅಭಿಮಾನಿಗಳ ಆಸೆ ಈಡೇರಿದೆ. ರಮ್ಯಾ ತನ್ನ ಜೀವನದ ಬಗ್ಗೆ ಹಲವಾರು ವಿಚಾರಗಳನ್ನು ಶೋ ಮೂಲಕ ಬಹಿರಂಗ ಪಡಿಸಿದರು. ಸಿನಿಮಾ, ರಾಜಕೀಯ(politician) ಸೇರಿದಂತೆ ಹಲವಾರು ವಿಷಯದ ಬಗ್ಗೆ ಮಾತನಾಡಿದರು.

ಆದರೆ ಇದೀಗ ರಮ್ಯಾ ಕನ್ನಡ ಭಾಷೆಯ (Kannada language)ಬಗ್ಗೆ ಟ್ರೋಲ್ ಗೆ ಒಳಗಾಗಿದ್ದಾರೆ.ರಮ್ಯಾ ಅವರು ಶೋ ನಲ್ಲಿ ಸಂಪೂರ್ಣ ಎಪಿಸೋಡ್ ನಲ್ಲಿ ಹೆಚ್ಚಾಗಿ ಇಂಗ್ಲಿಷ್ ಮಾತನಾಡಿದರು, ಇದರಿಂದ ಕನ್ನಡದ ಅಭಿಮಾನಿಗಳು ರಮ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಹಾಗೂ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ನೆಟ್ಟಿಗರು ರಮ್ಯ ವಿರುದ್ಧ ಸಖತ್ ಟ್ರೋಲ್ (troll)ಮಾಡುತ್ತಿದ್ದಾರೆ. ಅಷ್ಟೆಯಲ್ಲದೆ ಜೀಕನ್ನಡದ  ಹೆಡ್ ರಾಘವೇಂದ್ರ ಹುಣಸೂರು (Raghavendra honsor) ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ನೆಟ್ಟಿಗರು ರಾಘವೇಂದ್ರ ಹುಣುಸೂರು ಅವರ ಮೇಲೆ ಆಕ್ರೋಶ ಹೊರಹಾಕಲು ಕಾರಣವೆಂದರೆ ವೀಕೆಂಡ್ ವಿತ್ ರಮೇಶ್ (weekend with Ramesh)ಕಾರ್ಯಕ್ರಮಕ್ಕೆ ಯೂಟ್ಯೂಬರ್ ಡಾ.ಬ್ರೋ (doctor bro)ಅವರನ್ನು ಕರೆಸಿ ಎಂದಿದ್ದಕ್ಕೆ ಹುಣುಸೂರು ಅವರು ನಿಮ್ಮ ಅಜ್ಜಿಗೆ ಗೊತ್ತಿದಿಯಾ ಎಂದು ಪ್ರಶ್ನೆ ಮಾಡಿದ್ದರು. ಇದರಿಂದ ರಾಘವೇಂದ್ರ ಹುಣುಸೂರು ಮತ್ತು ರಮ್ಯಾ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ರಮ್ಯಾ ಅವರು ಮಾತನಾಡಿದ್ದು ನಮ್ಮ ಅಜ್ಜಿಗೆ(grandmother) ಅರ್ಥವಾಗಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.

ಇದೀಗ ನಟಿ ರಮ್ಯಾ ಅವರು ಟ್ರೊಲ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೀಮ್ (meme)ಒಂದಕ್ಕೆ ಕಾಮೆಂಟ್ ಮಾಡಿರುವ ರಮ್ಯಾ ಅವರು ‘ಮುಂದಿನ ಶೋನಲ್ಲಿ ಎಲ್ಲಾ ಅಜ್ಜಿಯರಿಗಾಗಿ ಕನ್ನಡದಲ್ಲೇ ಮಾತನಾಡುತ್ತೇನೆ’ ಎಂದು ಹೇಳಿದ್ದಾರೆ.  ರಮ್ಯಾ ಅವರು ಇದೆ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಮುಂದಿನ ಕಾರ್ಯಕ್ರಮದಲ್ಲಿ ಎಲ್ಲಾ ಮುದ್ದು ಅಜ್ಜಿಗಳಿಗೋಸ್ಕರ  ಸಂಪೂರ್ಣ ಕನ್ನಡವನ್ನೆ ಮಾತನಾಡುತ್ತೇನೆ’ ಎಂದು ತನ್ನ ಅಭಿಮಾನಿಗಳಲ್ಲಿ ತಿಳಿಸಿದ್ದಾರೆ. ನಾವೆಲ್ಲರೂ ಪ್ರೀತಿ ಮತ್ತು ದಯೆಯ ಭಾಷೆಯನ್ನು ಮಾತನಾಡೋಣ ಎಂದು ಹೇಳಿದ್ದಾರೆ. ರಮ್ಯಾ ಅವರ ಪ್ರತಿಕ್ರಿಯೇಗೂ ಕೂಡ ವಿರೋದ ಚರ್ಚೆಗಳು ನಡೆಯುತ್ತಿವೆ.

Leave A Reply

Your email address will not be published.