Love story : ‘ಎಳೆ’ ಯಲ್ಲಿ ಪ್ರೀತಿಸಿ ‘ಇಳಿ’ಯಲ್ಲಿ ವರಿಸಿದ, 60 ವರ್ಷಗಳ ನಂತರ ಮದುವೆಯಾದ ಜೋಡಿ !

Love story : ಅನೇಕ ಪ್ರೀತಿಗಳ ಆಯುಷ್ಯವು ತೀರಾ ಚಿಕ್ಕದು. ಪ್ರೇಮದ ಕತೆಗಳು (Love Story) ಕಾಲೇಜಿನ ಅಂಗಳದಲ್ಲಿ ಎರಡನೇ ವರ್ಷದ ಶುರುವಿನಲ್ಲಿ ಬಿರುಸಾಗಿ ಪ್ರಾರಂಭಗೊಂಡು, ಮೂರನೇ ವರ್ಷದ ಕಾಲೇಜು (Collage) ಮುಗಿಯುವ ಹಳೆಯ ಬಿಸಿ ಕಳೆದು ಕೊಳ್ಳಲು ಪ್ರಾರಂಭವಾಗುತ್ತದೆ. ಅಲ್ಲಿಯ ತನಕ ಪ್ರತಿದಿನ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಕಣ್ಣು ಬೆಸೆಯುವ ಕಾರಣದಿಂದ ಪ್ರೀತಿ ಆಗಿಂದಾಗ್ಗೆ ರಿವೈವ್ ಆಗುತ್ತಾ ಇರುತ್ತೆ. ಆದ್ರೆ ಒಮ್ಮೆಕಾಲೇಜು ಮುಗಿದು, ದೂರದ ಊರುಗಳಿಗೆ ಹೋಗಿ ಉದ್ಯೋಗ ಹಿಡಿದು ಬದುಕಿನಲ್ಲಿ ಸೆಟ್ಲ್ ಆಗುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿರುವಾಗ ಹಿಂದಿನ ಪ್ರೀತಿ 90 ಪ್ರತಿಶತ ಅರಿವಿಗೇ ಬಾರದಂತೆ ಕಳೆದು ಹೋಗಿರುತ್ತದೆ. ಮುಂದೆ ಕಣ್ಣ ಮುಂದೆ ಇನ್ನೊಂದು ಬಲವಾದ ಆಕರ್ಷಣೆ ಅಥವಾ ಬದುಕಿನ ಮುಂದೆ ಮದುವೆಯ ಪ್ರಪೋಸಲ್ ಬಂತೋ, ಅಲ್ಲಿಗೆ ಪ್ರೀತಿ ಅಧ್ಯಾಯ ಮುಗೀತು ಅಂತಾನೇ ಲೆಕ್ಕ.
ಆದರೆ ಈ ಮಾತು ಎಲ್ಲರ ಪ್ರೀತಿಗೆ ಅನ್ವಯಿಸುವುದಿಲ್ಲ ಅಂತ ಹೇಳುವುದು ಇಲ್ಲಿ ತುಂಬಾನೇ ಮುಖ್ಯವಾಗುತ್ತದೆ.

ಆದರೆ ಕೆಲವರು ತಮ್ಮ ಪ್ರೀತಿಯಲ್ಲಿ ಎಷ್ಟರ ಮಟ್ಟಿಗೆ ನಿಷ್ಠೆಯನ್ನು ಹೊಂದಿರುತ್ತಾರೆ ಎಂದರೆ ತಮ್ಮ ಪ್ರಿಯಕರ ಅಥವಾ ಪ್ರಿಯತಮೆ ತಮ್ಮನ್ನು ಬಿಟ್ಟು ಬೇರೆಯವರ ಜೊತೆ ಮದುವೆಯಾಗಿ ಹೋದರೂ ಸಹ ಅವರ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ಆ ಹಳೆಯ ಪ್ರೀತಿ ಇನ್ನೂ ಹಾಗೆಯೇ ಚಿಗುರು ಮೂಡಿಕೊಂಡು ಉಳಿದಿರುತ್ತದೆ. ಇವತ್ತಲ್ಲ ನಾಳೆ ಅದು ಸಿಗಬಹುದು ಅನ್ನುವ ಆಶಾಭಾವನೆ ಸದಾ ಹೈಬರ್ ನೇಟ್ ಆಗಿ ಒಂದು ಹನಿ ಅವಕಾಶಕ್ಕಾಗಿ ಕಾಯ್ತಾ ಇರುತ್ತದೆ. ಅಂತಹಾ ಒಂದು ಪ್ರೇಮದ ಕತೆಯೇ ಇವತ್ತಿನ ಸಬ್ಜೆಕ್ಟ್.

ಇದೊಂದು ಅಸಾಮಾನ್ಯ ಪ್ರೇಮಕಥೆಯಾಗಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 60 ವರ್ಷಗಳ ಹಿಂದೆ ಬೇರ್ಪಟ್ಟ ಇಬ್ಬರು ಹದಿಹರೆಯದ ಜೋಡಿ ಈಗ ಮತ್ತೆ ಒಂದಾಗಿದ್ದಾರೆ.

ಲೆನ್ 19 ಮತ್ತು ಜೀನೆಟ್ 18 ವರ್ಷದವರಿದ್ದಾಗ ಇಬ್ಬರು 1963 ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಅವರಿಬ್ಬರ ಮಧ್ಯೆ ಮೊದಲ ನೋಟದಲ್ಲೇ ಪ್ರೀತಿ ಶುರುವಾಗಿತ್ತು. ವೈಟ್ ದ್ವೀಪದ ನ್ಯೂಪೋರ್ಟ್ ನ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಾಗಿ ಕೆಲಸ ಮಾಡುತ್ತಿರುವಾಗ ಅವರಿಬ್ಬರ ಕಣ್ಣುಗಳು ಪರಸ್ಪರ ಪ್ರೀತಿಯ ಮಾತಾಡಿದ್ದವು.
ನಂತರ ಅವರು ಭೇಟಿಯಾಗಿ ಆನಂತರ ಕೆಲವು ತಿಂಗಳ ನಂತರ ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಹುಡುಗಿಯ ಪೋಷಕರು ಆ ಸಮಯದಲ್ಲಿ ಅವರ ಪ್ರೀತಿಗೆ ಮತ್ತು ಮದುವೆಗೆ ಒಪ್ಪಿಗೆ ನೀಡಲಿಲ್ಲ. ಇನ್ನೇನು ಉಂಗುರ ಬದಲಿಸಿಕೊಂಡು ಎಂಗೇಜ್ ಆಗೋಣ ಅನ್ನುವಷ್ಟರಲ್ಲಿ ಹುಡುಗ ಜೀನೆಟ್ ಗೆ ಇನ್ನೂ 21 ವರ್ಷ ವಯಸ್ಸಾಗಲು ಮೂರು ವರ್ಷಗಳು ಕಡಿಮೆ ಇದೆ ಎನ್ನೋದು ಹುಡುಗಿಯ ಮನೆಯವರಿಗೆ ಗೊತ್ತಾಗುತ್ತೆ. ಪ್ರೀತಿಯ ಮಧ್ಯೆ ವಯಸ್ಸು ಗೋಡೆಯಾಗಿ ನಿಲ್ಲುತ್ತದೆ.

ನಂತರ ಅವರಿಬ್ಬರು ಬೇರೆಯೇ ಮದುವೆಯಾಗಿ ತಮ್ಮ ಜೀವನವನ್ನು ಪ್ರತ್ಯೇಕವಾಗಿ ನಡೆಸಬೇಕಾಗಿ ಬಂತು. ಅಷ್ಟರಲ್ಲಿ ಬದುಕಿನ. ಅಕೌಂಟ್ ನಿಂದ ಬರೋಬ್ಬರಿ ಅರ್ಧ ಶತಮಾನ ಸೋರಿ ಹೋಗಿತ್ತು. ಅರುವತ್ತು ವರ್ಷಗಳೇ ಕಳೆದುಹೋದ ನಂತರ ಅದೊಂದು ದಿನ 79 ರ ಹರೆಯದ ಹುಡುಗ ಲೆನ್ ತನ್ನ ಬಾಲ್ಯದ ಪ್ರೇಮಿ ಜೀನೆಟ್ ನನ್ನು ಹುಡುಕುವ ನಿರ್ಧಾರವನ್ನು ಮಾಡಿದ. ಅಂತಿಮವಾಗಿ ಆತ ಆಕೆಯ ಪತ್ತೆ ಹಚ್ಚುವಲ್ಲಿ ಸಫಲನಾಗಿದ್ದ. ನೆನಪುಗಳ ಆಳದಲ್ಲಿ ಇದ್ದ ಪ್ರೀತಿ ಮತ್ತೆ ಮೊಳಕೆ ಬಿಟ್ಟಿತ್ತು. ಅವರಿಬ್ಬರೂ ಒಂದಾಗಲು ನಿರ್ಧರಿಸಿದ್ದರು, ಇದೀಗ ಇಳಿ ವಯಸ್ಸಿನಲ್ಲಿಯೂ ಅವರು ಮದುವೆಯಾಗಿದ್ದಾರೆ. ಈಗ ಮತ್ತೆ ಮದುವೆಯಾದಾಗ ಆತನಿಗೆ 79 ವರ್ಷ ಆಕೆಗೆ 78 ವರ್ಷ ವಯಸ್ಸು.

” ನಮ್ಮ ವೈವಾಹಿಕ ಜೀವನವು ತುಂಬಾನೇ ಅದ್ಭುತವಾಗಿದೆ, ನನ್ನನ್ನು ಗೌರವದಿಂದ ಕಾಣುವ ವ್ಯಕ್ತಿಯನ್ನು ನಾನು ಮದುವೆಯಾಗಿದ್ದೇನೆ. ಲೆನ್ ಅವರೊಂದಿಗೆ ನನ್ನ ಮಿಕ್ಕಿರುವ ಜೀವನವನ್ನು ಸಂತೋಷದಿಂದ ಕಳೆಯಲು ಬಯಸುತ್ತೇನೆ” ಅಂತ ಜಿನೇಟ್ ಹೇಳಿದ್ದಾಳೆ. “ಈಗ, ಇಷ್ಟು ವರ್ಷಗಳ ನಂತರ ಮತ್ತೆ ನಮ್ಮ ನಡುವೆ ಆ ಪ್ರೀತಿ ಶುರುವಾಯಿತು” ಎಂದು ಜಿನೇಟ್ ಅವರ ಹೊಸ ಪತಿ ಹೇಳಿದರು. “ನಾವು ಪರಸ್ಪರ ಕವಿತೆಗಳನ್ನು ಓದುತ್ತಿದ್ದೇವೆ ಮತ್ತು ಉಂಗುರಗಳನ್ನು ಬದಲಾಯಿಸಿಕೊಂಡೆವು. ನನ್ನ ಮೇಲಿನ.ಅವಳ ಪ್ರೀತಿಯಿಂದ ನಾನು ಭಾವಪರವಶನಾದೆ” ಎಂದು ಲೆನ್ ಹೇಳಿದ್ದಾನೆ. ಯಂಗ್ ಅಟ್ ಹಾರ್ಟ್ ಜೋಡಿಗಳ ದಾಂಪತ್ಯ ಭರದಿಂದ ಸಾಗಿದೆ.

ಇದನ್ನೂ ಓದಿ: Interesting Fact : ಇಲ್ಲಿ ಯಾವ ವಸ್ತು ಮುಟ್ಟಿದ್ರೂ ಬೀಳುತ್ತೇ ಭಾರೀ ದಂಡ ; ಇದು ದೇಶದಲ್ಲೇ ವಿಚಿತ್ರ ಕಾನೂನು ಇರುವ ಸ್ಥಳ!!

 

Leave A Reply

Your email address will not be published.